ಸಫಲ ಉದ್ಯಮ ಇಲೆಕ್ಟ್ರಾನಿಕ್ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನ ಡ್ರಾ –  1 ಲಕ್ಷ ಮೊತ್ತದ ಇಲೆಕ್ಟ್ರಾನಿಕ್ ಸಾಮಾಗ್ರಿಗಳ ಗೆದ್ದ ಸೀತಾರಾಮ ಬೀನಡ್ಕ

ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನ 8ನೇ ನೇ ಡ್ರಾ ಜೂನ್ .15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಶೋ ರೂಂ ನಲ್ಲಿ ನಡೆಯಿತು.
ಕಾರ್ಡ್ ಸಂಖ್ಯೆ S 2008 ಹೊಂದಿಕೊಂಡಿದ್ದ ಸೀತಾರಾಮ ಬೀನಡ್ಕ ಒಂದು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ವಿಜೇತ ರಾದರು. ಅದೃಷ್ಟ ಡ್ರಾ ವಿಜೇತರ ಆಯ್ಕೆಯನ್ನು ಎಂ. ಬಿ ಫೌಂಡೇಶನ್ ಇದರ ಸಂಸ್ಥಾಪಕ, ಸಾಂದೀಪ್ ಶಿಕ್ಷಣ ಸಂಸ್ಥೆ ಸಂಚಾಲಕರಾದ ಎಂ ಬಿ ಸದಾಶಿವ ನಡೆಸಿಕೊಟ್ಟರು, ಬಳಿಕ ಮಾತನಾಡಿದ ಅವರು ಸಫಲ ಉದ್ಯಮ ಇಲೆಕ್ಟ್ರಾನಿಕ್ ಸಂಸ್ಥೆ ಕೆಲವೇ ದಿನದಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ, ಇಲ್ಲಿಯ ಸೇವೆ ಇನ್ನಷ್ಟು ಮುಂದುವರಿಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆವಿಜಿ ಐಪಿಎಸ್ ಸ್ಕೂಲ್ ಪ್ರಾಂಶುಪಾಲರಾದ ಅನಿಶ್ ನಾದ್, ಪೆರಾಜೆ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಲೋಕೇಶ್ ಹೊದ್ದೆಟ್ಟಿ, ಉದ್ಯಮಿ ಲೋಕೇಶ್ ಚೌಟಜೆ, ತಿಲಕೇಶ್, ಸಂಸ್ಥೆಯ ಪಾಲುದಾರರು, ಸಿಬ್ಬಂದಿಗಳು ಸೇರಿದಂತೆ ಹಲವಾರು ಮಂದಿ ಗ್ರಾಹಕರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading