3,395 ಕಾನ್ಸ್ಟೇಬಲ್ ಹುದ್ದೆಗಳಿಗೆ ನಾಳೆ(ಜೂ.06)ಯಿಂದ ತರಬೇತಿ ಪ್ರಾರಂಭಿಸಲಿರುವ ವಿದ್ಯಾಮಾತಾ ಅಕಾಡೆಮಿ – ನೇರ ತರಗತಿ ಮತ್ತು ಆನ್ಲೈನ್ ತರಗತಿಗಳ ಮೂಲಕ ನಡೆಯಲಿದೆ ತರಬೇತಿ

ಕಳೆದ ಹಲವು ವರ್ಷಗಳಿಂದ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗಳನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಈಗಾಗಲೇ ಪ್ರಾರಂಭವಾಗಿರುವ 2026ನೇ ಸಾಲಿನ ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆಯ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಆಯ್ಕೆ ಪ್ರಕ್ರಿಯೆಗಳಿಗೆ ಪೂರಕವಾಗಿ ನೇರ ತರಗತಿ ಹಾಗೂ ಆನ್ಲೈನ್ ತರಗತಿಗಳ ಮೂಲಕ ತರಬೇತಿ ನೀಡಲಿದ್ದು, ನಾಳೆ(ಜೂ.16)ಯಿಂದ ತರಬೇತಿಗಳು ಪ್ರಾರಂಭವಾಗಲಿದ್ದು, ಕರ್ನಾಟಕ ಪೋಲೀಸ್, ಭಾರತೀಯ ರಕ್ಷಣಾ ಪಡೆಗಳು ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ನೇಮಕಾತಿಗಳಲ್ಲಿ ವಿದ್ಯಾಮಾತಾ ಅಕಾಡೆಮಿ ಸಂಸ್ಥೆಯಲ್ಲಿ ತರಬೇತಿ ಪಡೆದು ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೂರಕ್ಕೂ ಅಧಿಕ ಅಭ್ಯರ್ಥಿಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ಯಶಸ್ಸನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಈ ಅಹೋರಾತ್ರಿ ತರಬೇತಿಯ ಸದುಪಯೋಗವನ್ನು ಪಡೆದುಕೊಂಡು ಪೋಲೀಸ್ ನೌಕರಿಯನ್ನು ಪಡೆದುಕೊಳ್ಳಲು ಈ ಸುವರ್ಣಾವಕಾಶ ಕಲ್ಪಿಸಲಾಗಿದೆ ಎಂದು ವಿದ್ಯಾಮಾತಾ ಅಕಾಡೆಮಿ ಸಂಸ್ಥೆಯು ತಿಳಿಸಿದೆ.

. . . . . . . . .

ಈ ರೀತಿ ನಡೆಯಲಿದೆ ವಿದ್ಯಾಮಾತಾದ ತರಬೇತಿ
• ಸದ್ಯ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ /ಉದ್ಯೋಗ ಮಾಡುತ್ತಿರುವವರಿಗೂ ತರಬೇತಿ ಪಡೆದುಕೊಳ್ಳಲು ಅವಕಾಶ. 
• ವಸತಿ ಸೌಲಭ್ಯದೊಂದಿಗೆ 24×7 ಮಾದರಿಯ ತರಬೇತಿ ನೀಡಲಿರುವ ವಿದ್ಯಾಮಾತಾ.
• ನೇರ ತರಗತಿ ಮತ್ತು ಆನ್ಲೈನ್ ತರಗತಿಯ ಮೂಲಕ ನಡೆಯಲಿರುವ ತರಬೇತಿಯ ಜೊತೆಗೆ ಅಧ್ಯಯನ ಸಾಮಾಗ್ರಿ(Study Meterials) ಕೂಡ ಸಿಗಲಿದೆ.
• 24×7 ಲೈಬ್ರರಿ ವ್ಯವಸ್ಥೆ ಕೂಡ ಲಭ್ಯವಿದೆ.
• ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆಗಳು ಇರುತ್ತದೆ.
• ಸದ್ಯ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು/ಖಾಸಗಿ ಉದ್ಯೋಗಿಗಳು ಸಂಜೆ ಬಂದು ವಸತಿ ಸೌಲಭ್ಯವನ್ನು ಉಪಯೋಗಿಸಿಕೊಂಡು ರಾತ್ರಿ ತರಬೇತಿಯನ್ನು ಪಡೆದುಕೊಂಡು ಹೋಗಲು ಅವಕಾಶವಿದೆ.

. . . . . . .

ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆ : ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. 
ವಯಸ್ಸಿನ ಮಿತಿ : ಕನಿಷ್ಠ 18 ವರ್ಷ ಹಾಗೂ ಗರಿಷ್ಠ 33(ಸಾಮಾನ್ಯ ಅಭ್ಯರ್ಥಿಗಳಿಗೆ), 35ವರ್ಷ(OBC, SC, ST)
ದೈಹಿಕ ಸಾಮರ್ಥ್ಯ : 168cm ಎತ್ತರ(ಪುರುಷ ಅಭ್ಯರ್ಥಿ) ಹಾಗೂ 157cm ಎತ್ತರ(ಮಹಿಳಾ ಅಭ್ಯರ್ಥಿ)
ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು : ಫೋಟೋ, ಅಂಕಪಟ್ಟಿಗಳು, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03.07.2026

ವಿದ್ಯಾಮಾತಾ ಅಕಾಡೆಮಿಯಲ್ಲಿ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ತರಬೇತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಪುತ್ತೂರಿನ APMC ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಬಹುದು, ಅಥವಾ 9620468869 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಲು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading