ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ
ಮಂಡೆಕೋಲು, ಸುಳ್ಯ
ಮೊ: 9591969197

ದಿನಾಂಕ : 15-06-2026 – ಸೋಮವಾರ

01) 🐏ಮೇಷರಾಶಿ : ಹಿರಿಯರಿಗೆ ಗೌರವ ಕೊಡುವುದು ಈ ದಿನ ನಿಮ್ಮ ಗಮನದಲ್ಲಿ ಇರಬೇಕು, ತಂದೆಯ ಆರೋಗ್ಯದ ಕಡೆ ಗಮನವಿರಲಿ, ವ್ಯಾಪಾರ ವ್ಯಾವಹಾರ ಮಾಡುವವರಿಗೆ ಈ ದಿನ ಅನಿರೀಕ್ಷಿತ ಲಾಭವನ್ನು ಪಡೆಯುತ್ತಿರಾ, ಈ ದಿನ ಧನಲಾಭವಾಗುವ ಸಾಧ್ಯತೆ ಕಂಡು ಬರುತ್ತಿದೆ. ಮನ ಬಂದಂತೆ ಖರ್ಚಿಗೆ ದಾರಿ ಮಾಡಿಕೊಳ್ಳದಿರಿ… ಗಮನಿಸಿ : ಈ ದಿನ ನಿಮಗೆ ದೇವತಾ ಅನುಗ್ರಹವಿದೆ… ಪರಿಹಾರ : ನಿಮ್ಮ ತಂದೆ ತಾಯಿಯ ಆಶೀರ್ವಾದ ಪಡೆಯಿರಿ

. . . . . . . . .

02) 🐂ವೃಷಭರಾಶಿ : ಆರ್ಥಿಕ ಹಾಗು ವ್ಯಾವಹಾರಿಕ ದೃಷ್ಟಿಯಿಂದ ಈ ದಿನವು ಅಶುಭ. ನಿರ್ಣಾಯಕ ಕ್ರಮಗಳನ್ನು ಇಂದು ತೆಗೆದುಕೊಳ್ಳದಿರಿ. ಈ ದಿನ ನೀವು ಮೋಸ ಹೋಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯ ವ್ಯವಹಾರಗಳು ನಷ್ಟವನ್ನು ಅನುಭವಿಸಬಲ್ಲವು… ಗಮನಿಸಿ : ಹಣ ಕಾಸಿನ ವ್ಯವಹಾರದಲ್ಲಿ ಜಾಗ್ರತೆ ವಹಿಸಿ… ಪರಿಹಾರ : ದೇವಸ್ಥಾನಕ್ಕೆ ಎಳ್ಳು ಎಣ್ಣೆಯನ್ನು ದಾನ ಮಾಡಿ

. . . . . . .

03) 👥ಮಿಥುನ ರಾಶಿ : ನಿಮ್ಮ ದುಃಖ ಇಂದು ಮಂಜುಗಡ್ಡೆಯ ಹಾಗೆ ಕರಗುತ್ತದೆ. ನೀವು ಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿಗಳನ್ನು ತಲುಪುತ್ತೀರಿ. ಈ ದಿನ ತಾವು ಸುಖಕರ ಪ್ರಯಾಣವನ್ನು ಮಾಡುವಿರಿ, ಸಾಧ್ಯವಾದಷ್ಟು ಬಡಜನರಿಗೆ ಸಹಾಯ ಮಾಡಿ, ನೀವು ಈ ದಿನ ಮಾಡುವ ಸತ್ಕಾರ್ಯಗಳಿಂದ ನಿಮ್ಮ ಜೀವನವು ಸುಖಮಯವಾಗುವುದು… ಗಮನಿಸಿ : ಈ ದಿನ ತೊರ್ಪಡಿಕೆಗೋಸ್ಕರ ಹಣವನ್ನು ಖರ್ಚು ಮಾಡುವ ಸಾಧ್ಯತೆಗಳು ಇವೆ… ಪರಿಹಾರ : ನವಗ್ರಹ ಪ್ರದಕ್ಷಣೆ ಮಾಡಿ,

04) 🦀ಕಟಕ ರಾಶಿ : ನಿಮ್ಮ ಸಹೋದರ ಮತ್ತು ಸ್ನೇಹಿತನ ಬೆಂಬಲವು ಲಾಭ ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ಹಲವಾರು ಸಾಧನೆಗಳನ್ನು ಮಾಡುವ ಸಾಧ್ಯತೆಯಿದೆ. ಕೆಲಸಕ್ಕೆ ಸಂಬಂಧಿಸಿದ ಒತ್ತಡ ನಿಮ್ಮನ್ನು ಸಂಪೂರ್ಣವಾಗಿ ದಣಿಸುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಘರ್ಷಣೆಯನ್ನು ಬೆಳೆಸಿಕೊಳ್ಳದಂತೆ ನೋಡಿಕೊಳ್ಳಿ… ಗಮನಿಸಿ : ಈ ದಿನ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುವುದು ಉತ್ತಮ… ಪರಿಹಾರ : ಮನೆ ದೇವರ ಪ್ರಾರ್ಥನೆ ಮಾಡಿ.

05) 🦁ಸಿಂಹ ರಾಶಿ : ಮಂಗಳನ ಪ್ರಭಾವ ನಿಮ್ಮ ರಾಶಿಯ ಮೇಲಿದ್ದು, ಕೌಂಟುಬಿಕ ವ್ಯವಹಾರಗಳು ಮಹತ್ವದ ತಿರುವು ಪಡೆದುಕೊಳ್ಳಲಿದೆ. ಕಠಿಣ ಪರಿಶ್ರಮದ ಮೂಲಕ ವೃತ್ತಿಪರ ವಿಚಾರಗಳಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಗಳಿವೆ. ಕೆಲಸದ ಕಡೆ ಹೆಚ್ಚು ಗಮನ ಹರಿಸುವುದು ಉತ್ತಮ… ಗಮನಿಸಿ : ಸಾಲ ಪಡೆಯುವುದು ಮತ್ತು ಕೊಡುವುದು ಬೇಡ… ಪರಿಹಾರ : ಶ್ರೀ ಸೂರ್ಯ ದೇವರ ಪ್ರಾರ್ಥನೆ ಮಾಡಿ.

06) 👩‍🦳ಕನ್ಯಾ ರಾಶಿ : ಕೆಲಸಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಬಹುದು ಮತ್ತು ಅದರಲ್ಲಿ ಹಣವನ್ನು ಸಹ ಖರ್ಚು ಮಾಡಬಹುದು. ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು. ಮಾನಸಿಕ ಒತ್ತಡಗಳಿಂದ ಕೆಲಸ ಕಾರ್ಯಗಳಲ್ಲಿ ತಪ್ಪು ನುಸುಳುವ ಸಾಧ್ಯತೆ ಇದೆ… ಗಮನಿಸಿ : ಇಂದು ಆದಷ್ಟು ತಾಳ್ಮೆಯಿಂದ ಕೆಲಸಕಾರ್ಯಗಳನ್ನು ಪೂರೈಸಿಕೊಳ್ಳಿ… ಪರಿಹಾರ : ಆಂಜನೇಯ ಸ್ವಾಮಿಯ ದರ್ಶನ ಮಾಡಿ.

07) ⚖️ತುಲಾ ರಾಶಿ : ಹಣಕಾಸಿನ ವಿಚಾರದಲ್ಲಿ ಆಶಾವಾದಿಗಳಾಗಿರಿ. ಇದು ದೀರ್ಘ-ಯೋಜಿತ ಉದ್ಯಮದಲ್ಲಿ ಪಾಲುದಾರರೊಂದಿಗೆ ಸೇರಿಕೊಳ್ಳಲು ಇದು ಉಪಯುಕ್ತವಾಗಬಹುದು. ಸಾಮಾಜಿಕವಾಗಿ ಒತ್ತಡಗಳು ಹೆಚ್ಚಾಗಬಹುದು. ವ್ಯಾಪಾರ-ವ್ಯವಹಾರ ಉತ್ತಮವಾಗಿರಲಿವೆ. ಗೆಳಯರ ಸಹಕಾರ ಪಡೆಯಿರಿ… ಗಮನಿಸಿ : ಪ್ರೀತಿಪಾತ್ರರ ಮೇಲೆ ಅನುಮಾನ ಬೇಡ… ಪರಿಹಾರ : ನಿಮ್ಮ ಗ್ರಾಮ ದೇವತಾ ದರ್ಶನಮಾಡಿ.

08)🦂ವೃಶ್ಚಿಕ ರಾಶಿ : ಈ ದಿನ ಯಾವುದಾದರೂ ಒಂದು ಕ್ಷೇತ್ರ ದರ್ಶನ ಮಾಡುವಿರಿ, ಕುಟುಂಬದ ವಿಚಾರಗಳಿಗೆ ಸಮಯವನ್ನು ಕೊಡುತ್ತೀರಾ ಹಾಗು ಕುಟುಂಬದ ವಿಚಾರಗಳಿಗೆ ಹಣ ಖರ್ಚು ಮಾಡುತ್ತೀರಾ, ಕೆಲಸದ ಒತ್ತಡದಿಂದ ಮೈಕೈ ನೋವು ಬರುವ ಸಾಧ್ಯತೆ ಇದೆ. ಬಂಧುಗಳು ಕಷ್ಟದಲ್ಲಿದ್ದಾರೆಂದು ಸಹಾಯ ಮಾಡಲು ಹೋಗಿ ನೀವೇ ಸಮಸ್ಯೆಗೆ ಸಿಲುಕಿಕೊಳ್ಳುವಿರಿ… ಗಮನಿಸಿ : ಸ್ನೇಹಿತರು ಮತ್ತು ಬಂಧುಗಳ ಲೇವಾದೇವಿ ವ್ಯವಹಾರದಲ್ಲಿ ಮೂಗು ತೂರಿಸಬೇಡಿ… ಪರಿಹಾರ : ದುರ್ಗಾದೇವಿಯ ಪ್ರಾರ್ಥನೆ ಮಾಡಿ.

09) 🏹ಧನುಸ್ಸು ರಾಶಿ : ಇಂದು ಹಿಂದಿನ ಕೆಟ್ಟ ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ನೀವು ಮುಂದೇನು ಮಾಡಬೇಕೆಂದು ನಿರ್ಧರಿಸಲಾಗದೇ ಸಿಲುಕಿಕೊಳ್ಳಬಹುದು. ಈ ದಿನ ಅಧಿಕ ಹಣಕಾಸಿನ ವ್ಯಯವಾಗುತ್ತದೆ, ಅದರಲ್ಲೂ ಆಸ್ಪತ್ರೆಗೆ ಸಂಬಂದಿಸಿದ ವಿಚಾರದಲ್ಲಿ ಅಧಿಕ ಹಣ ವ್ಯಯವಾಗಬಹುದು… ಗಮನಿಸಿ : ಆಡಂಭರದ ಜೀವನಕ್ಕಾಗಿ ಈ ದಿನ ಹಣ ಖರ್ಚು ಮಾಡುತ್ತೀರಿ… ಪರಿಹಾರ : ಈಶ್ವರನ ದರ್ಶನ ಮಾಡಿ.

10) 🐊ಮಕರ ರಾಶಿ : ಅನಿಯಮಿತ ಆಹಾರ ಪದ್ಧತಿ ನಿಮಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಆ ಕಾರಣಕ್ಕಾಗಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊಸ ವಾಹನ ಖರೀದಿಸಲು ಆಲೋಚನೆ ಮಾಡುತ್ತೀರಿ… ಗಮನಿಸಿ : ಅನಿರೀಕ್ಷಿತ ಲಾಭ ಉಂಟಾಗುತ್ತದೆ… ಪರಿಹಾರ : ಶ್ರೀ ಆಂಜೆನೇಯ ಸ್ವಾಮಿಗೆ ಪ್ರಾರ್ಥನೆ ಮಾಡಿ.

11) ⚱️ಕುಂಭ ರಾಶಿ : ಈ ದಿನ ನಿಮ್ಮ ಆಪ್ತ ವಲಯ ಅಥವಾ ಕುಟುಂಬದಲ್ಲಿ ದೂರ ಪ್ರಯಾಣ ಅಥವಾ ವಿದೇಶ ಪ್ರವಾಶದ ಬಗ್ಗೆ ಚರ್ಚೆ ನೆಡೆಯುತ್ತದೆ, ನಿಮ್ಮ ಈ ದಿನದ ಲಾಭವನ್ನು ಅನಿರೀಕ್ಷಿತ ದುಂದು ವೆಚ್ಚ ಮಾಡುವ ಸಾಧ್ಯತೆಗಳು ಇವೆ. ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ಸಮುದ್ರದಾಚೆಯ ಸಂಬಂಧಿಯಿಂದ ಒಂದು ಉಡುಗೊರೆ ನಿಮ್ಮನ್ನು ಸಂತೋಷಪಡಿಸುತ್ತದೆ… ಗಮನಿಸಿ : ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ… ಪರಿಹಾರ : ವಿಷ್ಟು ಸಹಸ್ರನಾಮ ಪಠಣ ಮಾಡಿ.

12) 🐬ಮೀನ ರಾಶಿ : ಮಾತಿನ ಮೇಲೆ ಹಿಡಿತವಿರಲಿ. ಸಂಬಂಧಿಕರೊಂದಿಗೆ ಮಾತನಾಡುವಾಗ ಎಚ್ಚರವಿರಲಿ. ನಿರ್ಧಾರಗಳ ತೆಗೆದುಕೊಳ್ಳಲು ಇದು ಸಕಾಲವಲ್ಲ. ಮಕ್ಕಳು ಹಾಗೂ ಕುಟುಂಬ ಸದಸ್ಯರಿಗೆ ನಿಮ್ಮ ಸಮಯ ನೀಡಿ. ಇಂದು ನಿಮ್ಮ ಹಣ ಸಂಬಂಧಿತ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ… ಗಮನಿಸಿ : ಹೊಸ ಆದಾಯದ ಮೂಲಗಳು ಗೋಚರಿಸುತ್ತವೆ… ಪರಿಹಾರ : ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading