Ad Widget

ಹಿರಿಯ ಪತ್ರಕರ್ತ ದಿ.ನಾರಾಯಣ ನಾಯ್ಕ ಅಮ್ಮುಂಜೆ ಕುಟುಂಬಕ್ಕೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದಿಂದ ಆರ್ಥಿಕ ನೆರವು.

ಪುತ್ತೂರು : ಅಕಾಲಿಕವಾಗಿ ಇತ್ತೀಚಿಗೆ ಮೃತಪಟ್ಟ ಪುತ್ತೂರಿನ ಹಿರಿಯ ಪತ್ರಕರ್ತ ನಾರಾಯಣ ನಾಯ್ಕ ಅಮ್ಮುಂಜೆ ಕುಟುಂಬಕ್ಕೆ ಪುತ್ತೂರು ತಾಲೂಕು ಪತ್ರಕರ್ತರ ಸಂಘ (ರಿ) ವತಿಯಿಂದ ಅರ್ಥಿಕ ಸಹಕಾರವನ್ನು ನೀಡಲಾಯಿತ್ತು. ಇಂದು ಅವರ ಮನೆಗೆ ತೆರಳಿದ ಸಂಘದ ಪದಾಧಿಕಾರಿಗಳು ಅರ್ಥಿಕ ನೆರವಿನ ಚೆಕ್ ಅನ್ನು ಕುಟುಂಬ ಸದಸ್ಯರಿಗೆ ವಿತರಿಸಿದರು.
ನಾರಾಯಣ ನಾಯ್ಕ ಅಮ್ಮುಂಜೆಯವರು ಪುತ್ತೂರು ಪತ್ರಕರ್ತರ ಸಂಘದ ಹಾಲಿ ಸದಸ್ಯರು ಹಾಗೂ ಮಾಜಿ ಕಾರ್ಯದರ್ಶಿಯೂ ಸಂಘದ ಏಳಿಗೆಗೆ ಶ್ರಮಿಸಿದ್ದರು . ಮನೆಯ ದುಡಿಯುವ ಕೈಯನ್ನು ಕಳೆದುಕೊಡಿರುವ ಸಂದರ್ಭದಲ್ಲಿ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಈ ಅರ್ಥಿಕ ನೆರವನ್ನು ಸಂಘವೂ ಒದಗಿಸಿದೆ.
ಪುತ್ತೂರು ತಾಲೂಕು ಪತ್ರಕರ್ತರ ಸಂಘ (ರಿ.) ವತಿಯಿಂದ ರೂ. ಹತ್ತು ಸಾವಿರ , ಸಹೃದಯಿ ವೃತ್ತಿ ಬಾಂದವರು ನೀಡಿದ ಧನಸಹಾಯ, ಹಾಗೂ ನಿತ್ಯ ಉಪಯೋಗಿ ಸಾಮಗ್ರಿಗಳನ್ನು ನಾರಾಯಣ ನಾಯ್ಕ್ ಅವರ ಮನೆಗೆ ತೆರಳಿ ನೀಡಲಾಯಿತ್ತು. ಒಟ್ಟು 30 ಸಾವಿರ ರೂ ಚೆಕ್ ನ್ನು ಪತ್ರಕರ್ತರ ಸಂಘ ದ ಅಧ್ಯಕ್ಷರಾದ ಸಂಶುದ್ದೀನ್ ಸಂಪ್ಯ ರವರು ಮನೆಯವರಿಗೆ ಹಸ್ತಾಂತರಿದರು.ಇದೆ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ಪ್ರಸಾದ್ ಬಲ್ನಾಡ್, ಸಂಘದ ಸದಸ್ಯ ಹಾಗೂ ಮಾಜಿ ಕಾರ್ಯದರ್ಶಿ ಅನಿಶ್ ಕುಮಾರ್ ಮರೀಲ್ ಉಪಸ್ಥಿತರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!