ಡಿಸಿಸಿ ಬ್ಯಾಂಕಿನ ಎ.ಜಿ.ಎಂ ಚಂದ್ರಪ್ರಕಾಶ್ ಕಂಬಳ ಸೇವಾ ನಿವೃತ್ತಿ

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಎ.ಜಿ.ಎಂ(ಬ್ರಾಂಚ್ ಇನ್ಸೆಕ್ಟರ್) ಹುದ್ದೆಯಲ್ಲಿದ್ದ ಚಂದ್ರಪ್ರಕಾಶ್ ಕಂಬಳ ಮೇ.30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
1993ರಲ್ಲಿ ಡಿಸಿಸಿ ಬ್ಯಾಂಕ್ ನ ಬೆಳ್ತಂಗಡಿ ಶಾಖೆಗೆ ಸೂಪರ್ ವೈಸರ್/ಕ್ಲರ್ಕ್ ಹುದ್ದೆಗೆ ನೇಮಕಗೊಂಡ ಇವರು 1994 ರಲ್ಲಿ ಸುಳ್ಯ ಶಾಖೆಗೆ ವರ್ಗಾವಣೆಗೊಂಡರು. 1998 ರಿಂದ ಗುತ್ತಿಗಾರು ವಲಯದ ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿದರು. 2002 ರಿಂದ ಸುಳ್ಯ ಶಾಖೆಯಲ್ಲಿ ಎರಡು ವರ್ಷ ಕೆಲಸ ಮಾಡಿ ಬಳಿಕ, 2004 ರಿಂದ 2009 ರ ತನಕ ಸುಳ್ಯ ವಲಯದಲ್ಲಿ ಸಹಕಾರಿ ಸಂಘಗಳ ಮೇಲ್ವಿಚಾರಕರಾಗಿ ಕೆಲಸ ಮಾಡಿದರು. 2008 ರಲ್ಲಿ ಕಿರಿಯ ಶಾಖಾ ವ್ಯವಸ್ಥಾಪಕರಾಗಿ ಭಡ್ತಿ ಪಡೆದರು. 2009 ರಿಂದ 2012 ತನಕ ಪುತ್ತೂರು ವಲಯದ ಸಾಲ ವಸೂಲಾತಿ ಮಾರಾಟಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
2011 ರಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಭಡ್ತಿ ಪಡೆದು ಕಡಬ ಶಾಖೆಗೆ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡರು. 2016 ರಿಂದ ಶಾಖಾ ಕಛೇರಿ ನಿರೀಕ್ಷಕರಾಗಿ ಡಿಸಿಸಿ ಬ್ಯಾಂಕ್ ನ ಕೇಂದ್ರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿ 2019 ರಲ್ಲಿ ಎಜಿಎಂ ಆಗಿ ಭಡ್ತಿ ಪಡೆದರು. 2020 ರಿಂದ ಸುಬ್ರಹ್ಮಣ್ಯ ಶಾಖಾ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿದರು. 2024 ರಿಂದ ಸುಳ್ಯ ಶಾಖಾ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿ 2025 ರಿಂದ ಬ್ರಾಂಚ್ ಇನ್ಸ್ ಪೆಕ್ಟರ್ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಐವತೊಕ್ಲು ಗ್ರಾಮದ ದಿ| ಹೊನ್ನಪ್ಪ ಗೌಡ ಕಂಬಳ ಮತ್ತು ದಿ| ಜಾನಕಿ ದಂಪತಿಯ ಪುತ್ರರಾಗಿರುವ ಇವರು ತನ್ನ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಪಾಂಡಿಗದ್ದೆ ಶಾಲೆಯಲ್ಲಿ, ಪ್ರಾಥಮಿಕ ಶಿಕ್ಷಣವನ್ನು ಸ.ಮಾ.ಹಿ.ಪ್ರಾ. ಶಾಲೆ ಪಂಜ ಇಲ್ಲಿ ಪಡೆದು ಪ್ರೌಢಶಾಲಾ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಪಂಜ ಜೂನಿಯ‌ರ್ ಕಾಲೇಜಿನಲ್ಲಿ ಪಡೆದರು. ಸುಬ್ರಹ್ಮಣ್ಯದ ಕೆ.ಎಸ್‌ಎಸ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದರು.
ಚಂದ್ರಪ್ರಕಾಶರ ಪತ್ನಿ ಶ್ರೀಮತಿ ಹಂಸಾವತಿ ಸ.ಹಿ.ಪ್ರಾ.ಶಾಲೆ ಕರಿಕ್ಕಳ ಇಲ್ಲಿ ಸಹ ಶಿಕ್ಷಕಿಯಾಗಿದ್ದಾರೆ. ಪುತ್ರಿ ಕು| ತನ್ವಿ ಅವರು ಎಂಬಿಎ ಓದಿದ್ದು ಬೆಂಗಳೂರಿನಲ್ಲಿ ಇ.ವೈ ಕಂಪನಿಯಲ್ಲಿ ಕೆಲಸದಲ್ಲಿ ಇದ್ದಾರೆ. ಪುತ್ರ ಚರಿತ್ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಓದುತಿದ್ದಾರೆ.
ನಿಡ್ವಾಳ ಮಹಾವಿಷ್ಣು ದೇವಾಲಯದ ಸ್ಥಳ ದಾನಿಯಾಗಿರುವ, ಇವರು ಶ್ರೀ ಮಹಾವಿಷ್ಣು ದೇವಾಲಯ ಆಡಳಿತ ಟ್ರಸ್ಟ್ ನ ಅಧ್ಯಕ್ಷರಾಗಿಯೂ ಸಾಕಷ್ಟು ಕೆಲಸ ಮಾಡಿದ್ದು ಎರಡು ಬಾರಿ ದೇಗುಲದ ನಿರ್ಮಾಣ ಮತ್ತು ಪುನರ್ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಭಾಗದ ಹಲವು ಸಂಘ ಸಂಸ್ಥೆಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading