ಕುಕ್ಕೆ ಸುಬ್ರಹ್ಮಣ್ಯ : ಆಶ್ಲೇಷ ನಕ್ಷತ್ರ ಹಿನ್ನೆಲೆ ಭಕ್ತರ ಸಾಲು

ಸುಬ್ರಹ್ಮಣ್ಯ ಜುಲೈ 16 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಿಗೊಮ್ಮೆ ಬರುವ ಆಶ್ಲೇಷ ನಕ್ಷತ್ರದಂದು ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಬಂದು ಆಶ್ಲೇಷ ಬಲಿ ಸೇವೆ ಸಲ್ಲಿಸುವುದಾಗಿದೆ. ಅದೇ ರೀತಿ ಈ ಬಾರಿ ಮಳೆಗಾಲವಾದರೂ ಮಳೆ ಇಲ್ಲದ ಕಾರಣ ಹೆಚ್ಚಿನ ಭಕ್ತರು ಆಶ್ಲೇಷ ಸೇವೆಗೆಂದೆ ಬಂದು ನಿನ್ನೆ ಬುಧವಾರದಂದು ಕುಕ್ಕೆ ಕ್ಷೇತ್ರದ ದೇವಳದ ವಸತಿ ಗೃಹ ಹಾಗೂ ಖಾಸಗಿ ವಸತಿ ಗ್ರಹಗಳಲ್ಲಿ ತಂದಿರುವರು. ಇಂದು ಬೆಳಗ್ಗೆ ಪವಿತ್ರ ನದಿ ಕುಮಾರಧಾರದಲ್ಲಿ ತೀರ್ಥ ಸ್ಥಾನ ಮಾಡಿ ಬೆಳಗ್ಗಿನ ಮೂರು ಬ್ಯಾಚ್ ಗಳಲ್ಲಿ 6-30 ರಿಂದ 8:30 ಗಂಟೆ 9:00 ರಿಂದ 10:00 ರವರೆಗೆ ಹಾಗೂ 10:00 ರಿಂದ 11:00 ಗಂಟೆವರೆಗೆ ನಂತರ ಸಂಜೆ 5:00ರಿಂದ 6:00 ಗಂಟೆವರೆಗೆ ಒಟ್ಟು ನಾಲ್ಕು ಬ್ಯಾಚುಗಳಲ್ಲಿ ಆಶ್ಲೇಷ ಬಲಿ ಸೇವೆಯನ್ನು ಸಲ್ಲಿಸಿರುವರು. ಬೆಳಗ್ಗೆ ಭಕ್ತರಸಾಲು ಶ್ರೀದೇವಳದ ಆಶ್ಲೇಷ ಬಲಿ ಮಂಟಪದಿಂದ ಹೊಸಳ್ಳಿಗಮ್ಮ ದೈವದ ಗುಡಿಯ ವರೆಗೆ ಇತ್ತು. ಈ ದೇವಳದ ವತಿಯಿಂದ ವ್ಯವಸ್ಥೆಗಳನ್ನು ಮಾಡಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading