ಸುಬ್ರಹ್ಮಣ್ಯದ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ರೈನ್ ಕೋಟ್ ವಿತರಣೆ

ಸುಬ್ರಹ್ಮಣ್ಯ ಜುಲೈ 16 : ಸುಬ್ರಹ್ಮಣ್ಯ ಪೊಲೀಸ್ ಠಾಣಾ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಜನ ಗ್ರಹರಕ್ಷಕ ಸಿಬ್ಬಂದಿಯವರಿಗೆ ಸುಬ್ರಹ್ಮಣ್ಯದ ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ರೈನ್ ಕೋರ್ಟ್ ಗುರುವಾರ ವಿತರಿಸಲಾಯಿತು. 

. . . . . . . . .

ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿಯ ಮೈದಾನದಲ್ಲಿ ಬೆಳಗ್ಗಿನ ಜಾವ ನಡೆದ ಕಾರ್ಯಕ್ರಮದಲ್ಲಿ ಅಯ್ಯಪ್ಪ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಉಮೇಶ ಕೆ.ಎನ್ ರೈನ್ ಕೋಟ್‌ಗಳನ್ನು ಎಲ್ಲಾ ಸಿಬ್ಬಂದಿಯವರಿಗೆ ಉಚಿತವಾಗಿ ವಿತರಿಸಿದರು ಈ ಸಂದರ್ಭದಲ್ಲಿ ಅವರು ಮಾತನಾಡಿ “ಗೃಹರಕ್ಷಕ ದಳದ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ, ಮಳೆ ಬಿಸಿಲು ಎನ್ನದೆ ದುಡಿಯುತ್ತಾ ಸೇವೆಯನ್ನು ಸಲ್ಲಿಸುತ್ತಿರುವುದು ಶ್ಲಾಘನೀಯ. ಈ ಸಂದರ್ಭದಲ್ಲಿ ಅವರ ಕೋರಿಕೆ ಮೇರೆಗೆ ಮಳೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ರೇಟ್ ಕೋಟಿನ ಅವಶ್ಯಕತೆಯನ್ನು ಮನಗಂಡು ನಮ್ಮ ಅಯ್ಯಪ್ಪ ಸೇವಾ ಸಂಘದಿಂದ ನೀಡುತ್ತಿದ್ದೇವೆ” ಎಂದರು.

. . . . . . .

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರವಿ ಕಕ್ಕೆಪದವು ಸಮಾಜಾ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾ.ರವಿ ಕಕ್ಕೆಪದವು, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಆರ್, ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ, ಕುಲ್ಕುಂದ ಬಸವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರಿಧರ ಸ್ಕಂದ, ಉದ್ಯಮಿ ಚರಣ್ ಕಾನಡ್ಕ, ಸಮಾಜ ಸೇವಕ ಮನೋಜ್ ಕೈಕಂಬ ಹಾಜರಿದ್ದರು. ಗೃಹರಕ್ಷಕ ದಳದ ಘಟಕ ಅಧಿಕಾರಿ ಹರೀಶ್ ಆಚಾರ್ಯ ಸ್ವಾಗತಿಸಿದರು.ಗೃಹ ರಕ್ಷಕ ದಳದ ಸಿಬ್ಬಂದಿ ವಿಜಯ್ ಕುಮಾರ್ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading