ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ನವೀಕೃತ ಸಮುದಾಯ ಭವನದ ಉದ್ಘಾಟನೆ – ವಿದ್ಯಾರ್ಥಿ ವೇತನ ವಿತರಣೆ – ಸನ್ಮಾನ

ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ವತಿಯಿಂದ ಸುಳ್ಯದ ವಿಷ್ಣುಸರ್ಕಲ್ ಬಳಿಯಲ್ಲಿ  ನವೀಕೃತಗೊಂಡ ಸಮುದಾಯ ಭವನದ ಉದ್ಘಾಟನೆ, 27ನೇ ವಾರ್ಷಿಕ ಮಹಾಸಭೆ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮವು ಮೇ.31ರಂದು ನಡೆಯಿತು.

. . . . . . . . .

ನವೀಕೃತ ಸಮುದಾಯ ಭವನ ಕಟ್ಟಡವನ್ನು ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಅವರು ಉದ್ಘಾಟಿಸಿ ಶುಭಹಾರೈಸಿದರು.
ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ಅಧ್ಯಕ್ಷ ಎಂ. ಮಲ್ಲೇಶ್ ಬೆಟ್ಟಂಪಾಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ. ರಾಮ್ ಮೋಹನ್ ಕೆ.ಎನ್. ಅವರು ಆರೋಗ್ಯ ಮಾಹಿತಿ ನೀಡಿದರು.  ಬೆಂಗಳೂರಿನ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಭಟ್ ಕೊಡೆಂಕೇರಿ ಅವರು ವಿದ್ಯಾರ್ಥಿ ವೇತನ ವಿತರಿಸಿದರು. ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ದ.ಕ. ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮ್ಹಾಲಕರ ಸಂಘದ ಅಧ್ಯಕ್ಷ ದಿ‌ನಕರ ಕುಲಾಲ್, ದ.ಕ. ಗ್ಯಾರೇಜ್ ಮ್ಹಾಲಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

. . . . . . .

ಸಂಘದ ಬೆಳವಣಿಗೆಗೆ ಕೈ ಜೋಡಿಸಿದ ಡಾ.ಗಿರೀಶ್ ಭಾರಧ್ವಾಜ್ , ಎಂ. ವೆಂಕಪ್ಪ ಗೌಡ, ಬಾಲಕೃಷ್ಣ ಭಟ್ ಕೊಡಂಕೇರಿ ಯವರನ್ನು ಸನ್ಮಾನಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading