ಮಂಡೆಕೋಲಿನಲ್ಲಿ ಜೀವ ರಕ್ಷಕ್ ಪ್ರಾತ್ಯಕ್ಷಿಕೆ ಮತ್ತು ಆಣುಕು ಪ್ರದರ್ಶನ

ಸುಳ್ಯ, ಮೇ 29 , ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಂಡೆಕೋಲು, ಮಂಡೆಕೋಲು ಗ್ರಂಥಾಲಯ ಮತ್ತು ಅರಿವು ಕೇಂದ್ರ, ಇವರ ಸಹಯೋಗದಲ್ಲಿ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು, ಇವರ ಸಹಕಾರದೊಂದಿಗೆ , ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಂಡೆಕೋಲಿನಲ್ಲಿ ಹೃದಯಾಘಾತಕ್ಕೆ ಹಾಗೂ ತುರ್ತು ಅಪಘಾತ ಸಂದರ್ಭದಲ್ಲಿ ಯಾವ ರೀತಿ ಪ್ರಥಮ ಚಿಕಿತ್ಸೆ ನಿಡೂವ ಕುರಿತು, ಸಂಬಂಧಿಸಿದಂತೆ, ಸಾರ್ವಜನಿಕರಿಗೆ ಜೀವ ರಕ್ಷಕ್, (ಸಿ ಪಿ ಆರ್) ತರಬೇತಿಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಅಧ್ಯಕ್ಷರಾದ ಶಶಿಕಾಂತ್ ಮಿತ್ತೂರು ವಹಿಸಿದ್ದರು.
ಕಾರ್ಯಕ್ರಮವನ್ನು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಂಡೆಕೋಲು ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ, ಡಾ.ಅನಂತ ಪದ್ಮನಾಭ ಭಟ್, ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇದರ ಪಿ ಆರ್ ಓ ಕಾರ್ತಿಕ್ ಬಾಳುಗೋಡು, ಮಂಡೆಕೋಲು ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ, ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಂಡೆಕೋಲಿನ ಮುಖ್ಯೋಪಾಧ್ಯಾಯರಾದ ಮಂಜುಳಾ ಅತ್ಯಾಡಿ, ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಜೀವ ರಕ್ಷಕ್ ಕುರಿತು ಪ್ರಾತ್ಯಕ್ಷಿಕೆ ಮತ್ತು ಆಣುಕು ಪ್ರದರ್ಶನವನ್ನು ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರಿನ ತರಬೇತುದಾರರಾದ ಪುಝೈಲಾ ಇವರು ನಡೆಸಿಕೊಟ್ಟರು.
ಶಾಲಾ ವಿದ್ಯಾರ್ಥಿಗಳಾದ ವೈಭವಿ ಪ್ರಾರ್ಥಿಸಿ, ಶಾಲಾ ವಿದ್ಯಾರ್ಥಿ ಶ್ರದ್ಧಾ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಮಂಜುಳಾ ಅತ್ಯಾಡಿ ವಂದಿಸಿದರು. ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading