ಎಸ್ ಕೆ ಎಸ್ ಎಸ್ ಎಲ್ ವಿಖಾಯ ಕಾರ್ಯಕರ್ತರು ಸಂಚಾರಿ ರಕ್ತನಿಧಿ ಇದ್ದಂತೆ, ಯಾವ ಕ್ಷಣದಲ್ಲೂ ನಿಮಗೆ ರಕ್ತದ ಬೇಡಿಕೆ ಬರಬಹುದು, ರಕ್ತದಾನವು ಶಿಬಿರಗಳಿಗೆ ಮಾತ್ರ ಸೀಮಿತಗೊಳಿಸದೆ ತುರ್ತು ಬೇಡಿಕೆ ಬರುವ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ರಕ್ತದಾನಕ್ಕೆ ತಯಾರಾಗಬೇಕೆಂದು ದ.ಕ.ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗದ ಜಿಲ್ಲಾ ಉಸ್ತುವಾರಿ ತಾಜುದ್ದೀನ್ ಟರ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಆ.19 ರಂದು ಮಂಗಳೂರಿನ ವಲಚ್ಚಿಲ್ ನಲ್ಲಿ ನಡೆದ ವಿಖಾಯ ರಕ್ತದಾನ ಅಭಿಯಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ವಿಖಾಯ ರಕ್ತದಾನಿ ಬಳಗದ ಮೂಲಕ ನಿರಂತರವಾಗಿ ಹಲವು ರಕ್ತನಿಧಿಗಳಲ್ಲಿ ಕಾರ್ಯಕರ್ತರು ರಕ್ತದಾನ ಮಾಡುತ್ತಾ ಬಂದಿದ್ದು ರಕ್ತದಾನ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಎರಡುಸಾವಿರಕ್ಕೂ ಅಧಿಕ ರಕ್ತದ ಸಂಗ್ರಹ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದ
ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ನ ಅಧ್ಯಕ್ಷರಾದ ಸಯ್ಯದ್ ಅಮೀರ್ ತಂಙಳ್, ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಜಿಲ್ಲಾ ವಿಖಾಯ ಉಸ್ತುವಾರಿ ಇಸಾಕ್ ಹಾಜಿ, ವಿಖಾಯ ಚೇರ್ಮೆನ್ ಇಸ್ಮಾಯಿಲ್ ತಂಙಳ್, ಮಂಗಳೂರು ತಾಲೂಕು ತಹಶೀಲ್ದಾರ್ ಗುರುಪ್ರಸಾದ್, ಮಂಗಳೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಜಾನ್ಸನ್ ಡಿಸೋಜ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಬಂಡಾರಿ, ಜಿಲ್ಲಾ ವಿಖಾಯ ಕನ್ವೀನರ್ ಆಸಿಫ್ ಕಬಕ, ಮಂಗಳೂರು ವಲಯ ವಿಖಾಯ ರಕ್ತದಾನಿ ಬಳಗದ ಉಸ್ತುವಾರಿ ನಝೀರ್ ವಲಚ್ಚಿಲ್ ಉಪಸ್ಥಿತರಿದ್ದರು.
- Thursday
- November 21st, 2024