ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ 1.35 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ; ಗುದ್ದಲಿಪೂಜೆ ನೆರವೇರಿಸಿದ ಶಾಸಕಿ ಕು. ಭಾಗೀರಥಿ ಮುರುಳ್ಯ

ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 1 ಕೋಟಿ 35 ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮೇ.26ರಂದು ಚಾಲನೆ ದೊರೆತಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಕಾಮಗಾರಿಗಳ ವಿವರ
ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮದ ಮಡಪ್ಪಾಡಿ – ನಡುಬೆಟ್ಟು ರಸ್ತೆ ಅಭಿವೃದ್ಧಿ : 10 ಲಕ್ಷ ರೂಪಾಯಿ
ಮಡಪ್ಪಾಡಿ – ಶೀರಡ್ಕ ರಸ್ತೆ ಅಭಿವೃದ್ಧಿ : 10 ಲಕ್ಷ ರೂಪಾಯಿ
ಮಡಪ್ಪಾಡಿ – ಜೇಡಿಗುಂಡಿ ರಸ್ತೆ ಅಭಿವೃದ್ಧಿ : 10 ಲಕ್ಷ ರೂಪಾಯಿ
ಹರಿಹರ ಪಳ್ಳತ್ತಡ್ಕ ಗ್ರಾಮದ ಅಂಙಣ ರಸ್ತೆ ಅಭಿವೃದ್ಧಿ : 10 ಲಕ್ಷ ರೂಪಾಯಿ 
ಹರಿಹರ ಪಳ್ಳತ್ತಡ್ಕ ಗ್ರಾಮದ ಗುಂಡಿಹಿತ್ಲು ರಸ್ತೆ ಅಭಿವೃದ್ಧಿ : 10 ಲಕ್ಷ ರೂಪಾಯಿ
ಬಾಳುಗೋಡು ಗ್ರಾಮದ ಬಾಳುಗೋಡು ಬೈಲು ರಸ್ತೆ ಅಭಿವೃದ್ಧಿ : 10 ಲಕ್ಷ ರೂಪಾಯಿ
ಬಾಳುಗೋಡು ಗ್ರಾಮದ ಶಿವಾಲ – ಕುಡುಮುಂಡೂರು ರಸ್ತೆ ಅಭಿವೃದ್ಧಿ : 10 ಲಕ್ಷ ರೂಪಾಯಿ
ಗುತ್ತಿಗಾರು ಗ್ರಾಮದ ಪೈಕ ಸೇತುವೆ ಬಳಿ ತಡೆಗೋಡೆ ರಚನೆ : 10 ಲಕ್ಷ ರೂಪಾಯಿ
ದೇವಸ್ಯ – ಕೆಂಬಾರು ರಸ್ತೆ ಅಭಿವೃದ್ಧಿ : 10 ಲಕ್ಷ ರೂಪಾಯಿ
ಕಡ್ತಲ್‌ಕಜೆ – ಪೈಕ ರಸ್ತೆ ಅಭಿವೃದ್ಧಿ : 10 ಲಕ್ಷ ರೂಪಾಯಿ
ಉಬರಡ್ಕ ಮಿತ್ತೂರು ಗ್ರಾಮದ ನರಸಿಂಹ ದೇವಸ್ಥಾನ – ಬೆಳರಂಪಾಡಿ ರಸ್ತೆ ಅಭಿವೃದ್ಧಿ : 10 ಲಕ್ಷ ರೂಪಾಯಿ
ಉಬರಡ್ಕ – ಮಿತ್ತೂರು – ಕಲ್ಲುಪಣೆ ರಸ್ತೆ ಅಭಿವೃದ್ಧಿ : 15 ಲಕ್ಷ ರೂಪಾಯಿ
ಬಲ್ನಾಡು ರಸ್ತೆ ಅಭಿವೃದ್ಧಿ : 10 ಲಕ್ಷ ರೂಪಾಯಿ
ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಪ್ರಮುಖರಾದ ಹರೀಶ್ ಕಂಜಿಪಿಲಿ, ಬೆಳ್ಯಪ್ಪ ಗೌಡ ಕಡ್ತಲ್‌ಕಜೆ, ವೆಂಕಟ್ ದಂಬೆಕೋಡಿ, ಕೇಶವ ಭಟ್ ಮುಳಿಯ, ಕೃಷ್ಣಯ್ಯ ಮೂಲೆತೋಟ, ಕಿಶೋರ್ ಪೈಕ, ಮಾಯಿಲಪ್ಪ ಕೊಂಬೆಟ್ಟು, ಚಂದ್ರಹಾಸ ಶಿವಾಲ, ವಿಜಯ್ ಅಂಙಣ, ಡಾ. ಸೋಮಶೇಖರ್ ಕಟ್ಟೆಮನೆ, ಮಾಧವ ಚಾಂತಾಳ, ರಾಕೇಶ್ ಮೆಟ್ಟಿನಡ್ಕ, ಹಿಮ್ಮತ್.ಕೆ.ಸಿ, ವಿನಯ್ ಮುಳುಗಾಡು, ಸಂದೀಪ್ ಉಬರಡ್ಕ, ಶಾರದಾ.ಎಸ್ ರೈ, ಶಿವರಾಮ ಕಲ್ಪತರು ಹಾಗೂ ವಿಜಯ ಉಬರಡ್ಕ ಸೇರಿದಂತೆ ಹಲವಾರು ಕಾರ್ಯಕರ್ತರು ಮತ್ತು ರಸ್ತೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading