Ad Widget

ಪ್ರೀತಿಗಾಗಿ ಪ್ರಾಣವನ್ನೇ ತ್ಯಜಿಸಿದ ಪಾರಿಜಾತ..! ರಾಮ ಮಂದಿರದಲ್ಲಿ ಪಾರಿಜಾತವನ್ನೇಕೆ ನೆಟ್ಟರು.?

ಸನಾತನ ಧರ್ಮವಾದ ಹಿಂದೂ ಧರ್ಮದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಪಾರಿಜಾತದ ಮಹತ್ವವೇನು..? ಪ್ರಯೋಜನವೇನು..? ಅದರ ಹಿನ್ನೆಲೆಯೇನು ಗೊತ್ತೇ..? ಪಾರಿಜಾತ ಹೂವಿನ ಗಿಡ. ಸಾಕಷ್ಟು ಪೌರಾಣಿಕ, ಆರೋಗ್ಯದ ಮಹತ್ವವನ್ನು ಹೊಂದಿರುವ ಹೂವಿನ ಗಿಡದ ರಹಸ್ಯವೇನು ಗೊತ್ತಾ..?
ಪಾರಿಜಾತಕ್ಕೂ ಸೀತೆಗೂ ಇರುವ ಸಂಬಂಧ ಪಾರಿಜಾತ ಎನ್ನುವುದು ಒಂದು ಮರವಾಗಿದ್ದು, ಪುರಾಣಗಳ ಪ್ರಕಾರ, ಇದು ಸಮುದ್ರ ಮಂಥನದಲ್ಲಿ ದೊರೆತ ದೈವಿಕ ಶಕ್ತಿಯುಳ್ಳ ಮರವಾಗಿದೆ. ಮೂತಃ ಇದು ಸ್ವರ್ಗದಲ್ಲಿರುವ ಮರವಾಗಿದ್ದು, ಇದನ್ನು ಭೂಮಿಗೆ ತರಲಾಯಿತು. ಭಗವಾನ್‌ ರಾಮ ಮತ್ತು ಸೀತೆಯ ವನವಾಸವನ್ನು ನೆನಪಿಸುತ್ತದೆ ಈ ಹೂವಿನ ಮರ. ಮಾತಾ ಸೀತೆ ವನವಾಸದಲ್ಲಿದ್ದಾಗ ಈ ಮರದ ಹೂವುಗಳನ್ನು ಕಿತ್ತು ಮಾಲೆಯಾಗಿ ಮಾಡಿ ಧರಿಸುತ್ತಿದ್ದಳು. ಆದ್ದರಿಂದ ಈ ಹೂವನ್ನು ಶೃಂಗಾರ ಹಾರ ಮತ್ತು ಹರಸಿಂಗಾರ ಎಂದು ಕರೆಯಲಾಗುತ್ತದೆ. ತಾಯಿ ಸೀತೆಗೆ ಪಾರಿಜಾತ ಹೂವೆಂದರೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದ ತಾಯಿ ಲಕ್ಷ್ಮಿಯನ್ನು ಪೂಜಿಸುವಾಗ, ಸೀತೆಯನ್ನು ಪೂಜಿಸುವಾಗ ತಪ್ಪದೇ ಪಾರಿಜಾತ ಹೂವುಗಳನ್ನು ಅರ್ಪಿಸುವುದರಿಂದ ಮನೆಯಲ್ಲಿ ಧನ – ಧಾನ್ಯ ವೃದ್ಧಿಯಾಗುತ್ತದೆ.
ಹಿಂದೂ ಧರ್ಮದಲ್ಲಿ ಪಾರಿಜಾತವು ಪವಿತ್ರ ಹಾಗೂ ವಿಶೇಷ ಸ್ಥಾನವನ್ನು ಹೊಂದಿದೆ. ಪಾರಿಜಾತವನ್ನು ಕೇವಲ ಪಾರಿಜಾತವೆಂದು ಮಾತ್ರವಲ್ಲ, ಇನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಪಾರಿಜಾತವನ್ನು ಶೃಂಗಾರ ಹಾರ, ಹರಸಿಂಗಾರ, ಶಿವುಲಿ ಮತ್ತು ಶೇಫಾಲೀ ಎನ್ನುವ ಹೆಸರುಗಳಿಂದ ಕೂಡ ಕರೆಯಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಪಾರಿಜಾತವನ್ನು ನೈಟ್‌ ಜಾಸ್ಮಿನ್‌ ಎಂದು ಕರೆಯಲಾಗುತ್ತದೆ. ಸ್ವರ್ಗದ ಅಪ್ಸರೆಯರು ಕೂಡ ಪಾರಿಜಾತದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಅಪ್ಸರೆಯರು ತಮ್ಮ ಆಯಾಸವನ್ನು ಹೋಗಲಾಡಿಸಲು ಪಾರಿಜಾತ ಮರದ ಬಳಿ ಬರುತ್ತಿದ್ದರು. ಆಯಯುರ್ವೇದದಲ್ಲಿ ಪಾರಿಜಾತವು ಒತ್ತಡವನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅನೇಕ ಔಷಧೀಯ ಗುಣವನ್ನು ಹೊಂದಿದೆ ಎಂದು ಹೇಳಲಾಗಿದೆ.
​ ಪಾರಿಜಾತ ಸೃಷ್ಟಿಯನ್ನು ಆಗಮಿಸಿದ್ದು ಹೇಗೆ..?
ದಂತಕಥೆಯ ಪ್ರಕಾರ, ಪಾರಿಜಾತ ಮರವು ಸಮುದ್ರ ಮಂಥನ ಸಮಯದಲ್ಲಿ ದೇವತೆಗಳಿಗೆ ದೊರೆಯಿತು. ಇಂದ್ರನು ಈ ಗಿಡವನ್ನು ತೆಗೆದುಕೊಂಡು ಹೋಗಿ ಸ್ವರ್ಗದಲ್ಲಿನ ತನ್ನ ತೋಟದಲ್ಲಿ ನೆಟ್ಟನು. ಒಂದು ಕಾಲದಲ್ಲಿ ಕೃಷ್ಣ ಮತ್ತು ರುಕ್ಮಿಣಿಯು ಜೊತೆಯಾಗಿ ಕುಳಿತಿರುವಾಗ ನಾರದ ಮುನಿಗಳು ಪಾರಿಜಾತ ಹೂವುಗಳಿಂದ ತಯಾರಿಸಿದ ಹೂಮಾಲೆಯನ್ನು ತಂದು ಕೃಷ್ಣನಿಗೆ ನೀಡುತ್ತಾರೆ. ಆಗ ಕೃಷ್ಣನು ಹಾರವನ್ನು ರುಕ್ಮಿಣಿಗೆ ಹಾಕಿ ಆನಂದಿಸುತ್ತಾನೆ. ರುಕ್ಮಿಣಿಯ ಕೊರಳಲ್ಲಿ ಪಾರಿಜಾತ ಹೂವಿನ ಹಾರವನ್ನು ಕಂಡ ನಾರದ ಮುನಿಗಳು ನೀವು ಈ ಹಾರವನ್ನು ಧರಿಸಿದಾಗ ಕೃಷ್ಣನ ಉಳಿದೆಲ್ಲಾ ಪತ್ನಿಯರಿಗಿಂತ ಅತ್ಯಂತ ಸುಂದರವಾಗಿ ಕಾಣುತ್ತೀರಿ ಎಂದು ಹೇಳುತ್ತಾರೆ. ಈ ವಿಷಯವು ಕೃಷ್ಣನ ಪತ್ನಿ ಸತ್ಯಭಾಮಾಳಿಗೆ ತಿಳಿದಾಗ ಅವಳು ಸ್ವರ್ಗದಿಂದ ಪಾರಿಜಾತ ಮರಬೇಕೆಂದು ಒತ್ತಾಯಿಸುತ್ತಾಳೆ. ​ಇಂದ್ರನಿಂದ ಶಾಪಗೊಂಡ ಪಾರಿಜಾತ ರುಕ್ಮಿಣಿಯ ಮೊಂಡುತನವನ್ನು ಪೂರೈಸಲು ಭಗವಾನ್‌ ಕೃಷ್ಣನು ದೇವಲೋಕದ ಮೇಲೆ ದಾಳಿ ಮಾಡಬೇಕಾಯಿತು. ಒಂದೆಡೆ ಸ್ವರ್ಗದ ಸಂಪತ್ತು ಭೂಮಿ ಪಾಲಾಗುವುದು ಇಂದ್ರನಿಗೆ ಇಷ್ಟವಿರುವುದಿಲ್ಲ. ಇನ್ನೊಂದೆಡೆ ಕೃಷ್ಣನನ್ನು ತಡೆಯಲು ಇಂದ್ರನಿಂದ ಸಾಧ್ಯವಾಗಲಿಲ್ಲ. ಕೊನೆಗೂ ಕೃಷ್ಣ ತನ್ನ ಪತ್ನಿಗಾಗಿ ಸ್ವರ್ಗದಲ್ಲಿನ ಪಾರಿಜಾತವನ್ನು ಭೂಮಿಗೆ ತರುತ್ತಾನೆ. ಇದರಿಂದ ಕೋಪಗೊಂಡ ಇಂದ್ರನು ಪಾರಿಜಾತ ಹೂವು ರಾತ್ರಿ ಸಮಯದಲ್ಲಿ ಅರಳುವಂತಾಗಿ ಸೂರ್ಯೋದಯಕ್ಕೂ ಮುನ್ನ ನೆಲಕ್ಕೆ ಬೀಳುವಂತಾಗಲಿ ಎಂದು ಪಾರಿಜಾತ ಮರಕ್ಕೆ ಶಾಪವನ್ನು ನೀಡುತ್ತಾನೆ. ನೆಲಕ್ಕೆ ಬಿದ್ದ ಪಾರಿಜಾತವನ್ನೂ ಪೂಜೆಯಲ್ಲಿ ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ನೆಲವನ್ನು ಸ್ಪರ್ಶಿಸಿದ ಹೂವಿಗಳನ್ನು ಅಥವಾ ವಸ್ತುಗಳನ್ನು ದೇವರ ಪೂಜೆಯಲ್ಲಿ ಬಳಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ನೆಲವನ್ನು ಸ್ಪರ್ಶಿಸಿದ ಪಾರಿಜಾತ ಹೂವುಗಳನ್ನು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ. ಕೃಷ್ಣನು ಸ್ವರ್ಗದಿಂದ ಪಾರಿಜಾತ ಗಿಡವನ್ನು ತಂದು ಭೂಮಿಯಲ್ಲಿ ನೆಡುವಾಗ ತನ್ನ ಜಾಣತನವನ್ನು ಉಪಯೋಗಿಸುತ್ತಾನೆ. ಕೃಷ್ಣನು ಸತ್ಯಭಾಮಾಳ ಮನೆಯ ಅಂಗಳದಲ್ಲಿ ಪಾರಿಜಾತ ಗಿಡವನ್ನು ನೆಟ್ಟು, ಆ ಗಿಡದ ಹೂವು ರುಕ್ಮಿಣಿ ಮನೆಯ ಅಂಗಳದಲ್ಲಿ ಬೀಳುವಂತೆ ಮಾಡುತ್ತಾನೆ. ಪ್ರತಿನಿತ್ಯ ತನ್ನ ಅಂಗಳದಲ್ಲಿ ಬಿದ್ದ ಪಾರಿಜಾತ ಹೂವುಗಳನ್ನು ರುಕ್ಮಿಣಿಯು ಎತ್ತಿಕೊಂಡು ತನ್ನ ಶೃಂಗಾರಕ್ಕಾಗಿ ಬಳಸುತ್ತಾಳೆ. ಆದ್ದರಿಂದ ನೆಲಕ್ಕೆ ಬಿದ್ದ ಪಾರಿಜಾತವನ್ನೂ ಕೂಡ ದೇವರ ಪೂಜೆಯಲ್ಲಿ ಬಳಸಲಾಗುತ್ತದೆ.
ಪಾರಿಜಾತ ಒಂದು ರಾಜಕುಮಾರಿ
ಪಾರಿಜಾತಕ್ಕೆ ಸಂಬಂಧಿಸಿದ ಇನ್ನೊಂದು ಕಥೆಯೇನೆಂದರೆ. ಪಾರಿಜಾತ ಎನ್ನು ರಾಜಕುಮಾರಿಯೋರ್ವಳಿದ್ದಳು. ಆಕೆ ಸೂರ್ಯ ದೇವನನ್ನು ಪ್ರೀತಿಸುತ್ತಿದ್ದಳು. ಒಮ್ಮೆ ಸೂರ್ಯದೇವನ ಬಳಿ ತನ್ನ ಆಸೆಯನ್ನು ಹೇಳಿಕೊಂಡಾಗ, ಸೂರ್ಯದೇವ ಆಕೆಯನ್ನು ನಿರಾಕರಿಸುತ್ತಾನೆ. ಇದರಿಂದ ಕೋಪಗೊಂಡ ರಾಜಕುಮಾರಿ ತನ್ನ ಪ್ರಾಣವನ್ನು ತ್ಯಜಿಸುತ್ತಾಳೆ. ಆಕೆಯ ಚಿತಾಭಸ್ಮದಿಂದ ಸಸ್ಯವೊಂದು ಚಿಗುರೊಡೆದು ತಾನು ಸೂರ್ಯನನ್ನು ನೋಡುವುದಿಲ್ಲ. ರಾತ್ರಿಯಲ್ಲಿ ನಾನು ಸುಗಂಧ ಭರಿತ ಸುಂದರವಾದ ಹೂವುಗಳನ್ನು ಕೊಟ್ಟು, ಸೂರ್ಯ ಮೂಡುತ್ತಿದ್ದಂತೆ ಮರೆಯಾಗುತ್ತೇನೆಂದು ತನಗೆ ತಾನೇ ಶಪಥವನ್ನು ಮಾಡಿಕೊಂಡಿತು. ಆದ್ದರಿಂದ ಪಾರಿಜಾತ ಹೂವು ಸೂರ್ಯಾಸ್ತದ ನಂತರ ಹೂಬಿಟ್ಟು, ಸೂರ್ಯೋದಯಕ್ಕೂ ಮುನ್ನ ನೆಲವನ್ನು ಸೇರುತ್ತದೆ.
ಪಾರಿಜಾತದ ಆರೋಗ್ಯಕರ ಮಹತ್ವ
ಪಾರಿಜಾತವನ್ನು ಸಮೃದ್ಧಿಗಾಗಿ, ಪೂಜೆಗಾಗಿ ಮಾತ್ರವಲ್ಲ, ಉತ್ತಮ ಆರೋಗ್ಯಕ್ಕೂ ಕೂಡ ಬಳಸಲಾಗುತ್ತದೆ. ಕೊರೊನಾ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯ ಅವಶ್ಯಕತೆಯಿದೆ. ಆದ್ದರಿಂದ ಪಾರಿಜಾತ ಮರದ ಎಲೆಗಳನ್ನು ಮತ್ತು ತೊಗಟೆಯನ್ನು ಸೇವಿಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಆಯುರ್ವದದ ಪ್ರಕಾರ, 15 ರಿಂದ 20 ಪಾರಿಜಾತ ಹೂವುಗಳನ್ನು ಅಥವಾ ಅಅದರ ರಸವನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರಾಗುತ್ತದೆ ಎನ್ನಲಾಗಿದೆ. ಆದರೆ ಆಯುರ್ವೇದ ವೈದ್ಯರ ಸಲಹೆಯ ಮೇರೆಗೆ ಈ ಪರಿಹಾರವನ್ನು ಅನುಸರಿಸಿ. ಈ ಹೂವುಗಳ ಸುವಾಸನೆಯನ್ನು ತೆಗೆದುಕೊಂಡರೆ ಒತ್ತಡವು ದೂರಾಗುತ್ತದೆ. ಪಾರಿಜಾತದ ಎಲೆಗಳನ್ನು, ತೊಗಟೆಯನ್ನು ಕುದಿಸಿ ಸೇವಿಸುವುದರಿಂದ ಶೀತ, ಜ್ವರ, ಶೀತದಿಂದುಂಟಾಗುವ ಇತರ ಸಮಸ್ಯೆಗಳು ನಿವಾರಣೆಯಾಗುತ್ತದೆ. ಉದರ ಸಂಬಂಧಿ ಸಮಸ್ಯೆಗಳಿಗೆ ಸೇರಿದಂತೆ ಇನ್ನಿತರ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಪಾರಿಜಾತಕ್ಕಿದೆಯೆಂದು ಹೇಳಲಾಗಿದೆ.(ಜಾಲತಾಣದಿಂದ)

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!