ಸಾರ್ವಜನಿಕ ಗಣೇಶೋತ್ಸವ ಸಮಿತಿ ವಳಲಂಬೆ ಇದರ ವಾರ್ಷಿಕ ಮಹಾಸಭೆ ಆ. 19 ರಂದು ನಡೆಯಿತು. ಕೊರೊನ ಮಹಾಮಾರಿಯ ಕಾರಣದಿಂದಾಗಿ ಹಾಗೂ ಸರಕಾರದ ಅಗತ್ಯ ನಿಯಮಾವಳಿಯನ್ನು ಪಾಲಿಸುವ ದೃಷ್ಟಿಯಿಂದಾಗಿ ಈ ವರ್ಷದ ಗಣೇಶೋತ್ಸವ ಕಾರ್ಯಕ್ರಮವನ್ನು ರದ್ದು ಪಡಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಆ.22 ರಂದು ದೇವಸ್ಥಾನದಲ್ಲಿ ನಡೆಯುವ ಗಣಪತಿ ಹವನ ಮತ್ತು ಗಣಪತಿ ದೇವರಿಗೆ ಅಷ್ಟೋತ್ತರ ಸೇವೆ ಹಾಗೂ ಪ್ರಾರ್ಥನೆಯಲ್ಲಿ ಭಾಗವಹಿಸುವುದೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಸ್ಥಾಪಕಾಧ್ಯಕ್ಷ ವೆಂಕಟ್ ದಂಬೆಕೋಡಿ, ಗೌರವಾಧ್ಯಕ್ಷ ವೆಂಕಟ್ ವಳಲಂಬೆ, ಅಧ್ಯಕ್ಷ ಸತೀಶ ಮೂಕಮಲೆ, ಕಾರ್ಯದರ್ಶಿ ಸಚಿನ್ ಮೊಟ್ಟೆ, ಕೋಶಾಧಿಕಾರಿ ದುರ್ಗೇಶ್ ಪಾರೆಪ್ಪಾಡಿ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
- Saturday
- November 23rd, 2024