21 ನೇ ಶತಮಾನ ಬಹುತೇಕ ಇವತ್ತಿನ ಕಾಲದಲ್ಲಿ ವಿದ್ಯಾವಂತರಿಗೇನು ಕಡಿಮೆ ಇಲ್ಲ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೆ ಘಟನೆಗಳು ಅಂದರೆ ಒಳಿತಿರಲಿ ಕೆಡುಕಿರಲಿ ಕ್ಷಣಾರ್ಧದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ಅವಕಾಶಗಳೆ ಹೆಚ್ಚು ಕಾರಣ ಇವತ್ತು ಎಲ್ಲರ ಕೈಯಲ್ಲೂ ಸ್ಮಾರ್ಟ್ ಪೋನ್ ಇದೆ ತಂತ್ರಜ್ಞಾನದ ವಿಷಯಗಳ ಕಡೆಗೆ ಬಂದಾಗ ನಮ್ಮ ದೇಶ ಶೇಕಡ 80 ರಷ್ಟು ಹಳ್ಳಿ ಪ್ರದೇಶವೇ ಇದ್ದರೂ ಕೂಡ ತಂತ್ರಜ್ಞಾನದ ವಿಷಯದಲ್ಲೂ ನಾವು ಹಿಂದೆ ಬಿದ್ದಿಲ್ಲ . ಹಾಗಂತ ನಮ್ಮ ದೇಶ ಮೌಡ್ಯತೆಯಿಂದ ಹೋರ ಬಂದಿದೆಯೆ ಇಲ್ಲ . ಹಿಂದೆ ಪತಿ ಸತ್ತಾಗ ಪತಿಯ ಚಿತೆಗೆ ಪತ್ನಿಯು ಬಿದ್ದು ಸಾಯುವ ಕೆಟ್ಟ ಪದ್ಧತಿ ಸತಿಸಹಗಮನ ಪದ್ದತಿ ಇತ್ತು. ಶುಭಕಾರ್ಯಕ್ರಮಗಳಿಗೆ ವಿಧವೆಯರಿಗೆ ಆಮಂತ್ರಣ ಕೊಡುವುದೇ ದೊಡ್ಡ ಅಪವಾದ ಆಗಿತ್ತು . ಇಂತಹ ಸಾವಿರಾರು ಮೂಢನಂಬಿಕೆಗಳು ನಮ್ಮ ಸಮಾಜದಿಂದ ಇವತ್ತು ದೂರ ಆಗಿದ್ದರೂ ಕೂಡ ಕೆಲವು ಮೌಢ್ಯತೆಗಳನ್ನು ಜನ ಇವತ್ತಿಗೂ ಅಪ್ಪಿ ಮುದ್ದಾಡುತಿದ್ದಾರೆ . ಮತ್ತು ಅದೆ ಸತ್ಯ ಅಂತ ನಂಬುವ ಕೆಲವು ಅಕ್ಷರಸ್ಥರಾಗಿದ್ದರು ಅನಕ್ಷರಸ್ಥ ಹಾಗೆ ವರ್ತಿಸುವ ವರ್ತನೆ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಹೇಳಿ ಕೇಳಿ ನಮ್ಮ ಜಿಲ್ಲೆ ಬುದ್ದಿವಂತರ ಜಿಲ್ಲೆ ಕೆಲವು ಮನೆಯವರು ಇವತ್ತಿಗೂ ಸಮಾಜದ ಮಧ್ಯೆ ತಪ್ಪು ಸಂದೇಶ ರವಾನಿಸಿದ ಪರಿಣಾಮ ನಮ್ಮ ಜೀವನ ಆಪ್ರಿಕಾ, ಉಗಾಂಡದವರಿಗಿಂತ ಕೆಳಮಟ್ಟದದಲ್ಲಿ ಇದೆಯೋ ಅಂತ ಅನಿಸ್ತಾ ಇದೆ.
ಒಂದು ಗೋತ್ರ ಆ ಗೋತ್ರದ ಹೆಸರು ಗುಂಡಣ್ಣ ಅಂತ ಆ ಗೋತ್ರ ಬಿಲ್ಲವ, ಗೌಡ, ಮುಗೇರ , ಕುಲಾಲ್ ನಾಲ್ಕು ಜಾತಿಯಲ್ಲಿ ಇದೆ ಗೋತ್ರದ ಬಗ್ಗೆ ಒಂದು ತಪ್ಪು ಕಲ್ಪನೆ ಇದೆ ಗುಂಡಣ್ಣ ಗೋತ್ರದವರನ್ನು ಮದುವೆಯಾದರೆ ಗುಂಡಾಂತರ ಹೋಗುತ್ತಾರೆ . ಅಂತ ಅಜ್ಜಿ ಕಥೆಯ ಕಟ್ಟುಕಥೆಗಳನ್ನು ಕಟ್ಟಿ ಮುಗ್ದರ ತಲೆಯೊಳಗೆ ತುಂಬಿಸುವ ಕೆಲಸ ಇವತ್ತು ನಿನ್ನೆಯದಲ್ಲ ಹೆಣ್ಣು ನೋಡುವ ಶಾಸ್ತ್ರ ಅಥವಾ ಗಂಡು ನೋಡುವ ಶಾಸ್ತ್ರದ ಮಧ್ಯೆ ಮನೆಯ ಕಡೆಯವರು ಗಂಡು ಅಥವಾ ಹೆಣ್ಣಿನ ಮನೆಯ ಕಡೆ ವಿಚಾರಿಸುವುದು ಸಹಜ . ಮನೆಯ ಕಡೆ ಹೇಗೆ, ವೃತ್ತಿ, ವ್ಯಕ್ತಿತ್ವ , ಮನೆಯವರ ನಡವಳಿಕೆ, ಚರ್ಚೆಗಳು ನಡೆಯುವುದು ಸಹಜ ಅದರೆ ಗುಂಡಣ್ಣ ಬರಿಯವರನ್ನು ಮದುವೆ ಆದರೆ ಗುಂಡಾಂತರ ಹೋಗುತ್ತೆ ಅಂತ ಹೇಳಿ ಜನರ ದಾರಿ ತಪ್ಪಿಸುವ ಕೆಲಸ ದೇವರು ಕೂಡ ಕ್ಷಮಿಸಲಾರದ ತಪ್ಪು ಇಷ್ಟೆಲ್ಲ ಅವಮಾನಗಳನ್ನು ಸಹಿಸಿಕೊಂಡರು, ಕೂಡ ಆ ಗೋತ್ರದವರು ಮದುವೆ ಆಗದೆ ಸನ್ಯಾಸಿ ಆಗಿಲ್ಲ ಆ ಗೋತ್ರದಲ್ಲಿಯೂ ಕೂಡ ಸಾಧನೆ ಮಾಡಿದವರು ಇದ್ದಾರೆ. ಅವರಿಗೂ ಭಾವನೆಗಳು ಇವೆ ಸ್ವಾಭಿಮಾನಿಗಳು ಇದ್ದಾರೆ. ಸುಳ್ಳು ಅಪವಾದಗಳನ್ನು ಸಹಿಸುವ ಕಾಲ ನಮ್ಮಿಂದ ದೂರ ಆಗಿದೆ ಜಾತಿ ಸಮಾವೇಶದಲ್ಲಿ ಒಕ್ಕೊರಲಿನ ಉದ್ಘೋಷ ವರುಷಗಳಿಂದ ಕೇಳುತ್ತಲೇ ಇದ್ದೇವೆ . ನಾವೆಲ್ಲ ಒಂದೆ ಜಾತಿ ಒಂದೆ ತಾಯಿಯ ಮಕ್ಕಳು ಅಂತ ಗಂಟೆಗಟ್ಟಳೆ ಭಾಷಣ ಮಾಡಿದವರ ಬಾಯಿಂದಲೆ ಅನಿಷ್ಟ ಪದ್ಧತಿಗಳ ಸಮರ್ಥನೆಗಳ ಸರಮಾಲೆಗಳು ಬಂದಾಗ ಅವರವರ ಜಾತಿಯನ್ನು ಪರಿವರ್ತನೆ ಮಾಡಲು ಹೊರಟ ಸ್ವಯಂಘೋಷಿತ ನಾಯಕರೆಲ್ಲ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ. ಅಸ್ಪೃಶ್ಯತೆ ಮೂಢನಂಬಿಕೆಗಳನ್ನೂ ಆಚರಣೆ ಮಾಡಬೇಕು ಅಂತ ನಾವು ನಂಬಿ ಅದೆ ಸತ್ಯ ಅಂತ ತಿಳಿದುಕೊಳ್ಳುವುದಾದರೆ ನಾವೇ ನಂಬುವ ಆರಾಧಿಸುವ ಶ್ರೀರಾಮ, ನಾರಾಯಣ ಗುರು ಕೋಟಿ ಚೆನ್ನಯ್ಯ, ಇವರು ಯಾರು ಒಪ್ಪಿಲ್ಲ ಈ ಮೂಡನಂಬಿಕೆಗಳನ್ನು ಇನ್ನೂ ನಾವು ಯಾಕೆ ಅಪ್ಪಿ ಮುದ್ದಾಡಬೇಕು ಎಂದು ಆಲೋಚಿಸ ಬೇಕಾಗಿದೆ
ಕೇಶವ ಆರ್ಯ ಪೆರುವಾಜೆ
- Saturday
- November 23rd, 2024