ಇಂದಿನ(ಮೇ 07) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಕರಿಗೋಟು ಧಾರಣೆಯಲ್ಲಿ ಗಮನಾರ್ಹ ಏರಿಕೆ! – ಕಾಳುಮೆಣಸು ಮತ್ತು ರಬ್ಬರ್ ಧಾರಣೆಯಲ್ಲೂ ಏರಿಕೆ..! ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 07 ಮೇ 2026
ವಾರ : ಗುರುವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 07) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 445 ರಿಂದ 475
ಹಳೆ ಅಡಿಕೆ : 450 ರಿಂದ 550
ಡಬಲ್ ಚೋಲ್ : 450 ರಿಂದ 550
ಫಟೋರಾ : 355 ರಿಂದ 405
ಉಳ್ಳಿಗಡ್ಡೆ : 240 ರಿಂದ 290
ಕರಿಗೋಟು : 255 ರಿಂದ 285
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)
ನಿನ್ನೆ(ಮೇ 06) ಕ್ಕೆ ಹೋಲಿಸಿದರೆ ಇಂದು(ಮೇ 07) ಮಾರುಕಟ್ಟೆಯಲ್ಲಿ ಕರಿಗೋಟು ಅಡಿಕೆಯ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಉಳಿದ ಪ್ರಮುಖ ತಳಿಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ಸ್ಥಿರತೆ ಮುಂದುವರಿದಿದೆ.
ಕರಿಗೋಟು ಬೆಲೆ ಏರಿಕೆ: ನಿನ್ನೆ ಗರಿಷ್ಠ ₹275 ಇದ್ದ ಕರಿಗೋಟು ಅಡಿಕೆಯ ಬೆಲೆಯು ಇಂದು ಪ್ರತಿ ಕೆಜಿಗೆ ₹10 ರಷ್ಟು ಏರಿಕೆ ಕಂಡು ₹285 ಕ್ಕೆ ತಲುಪಿದೆ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 575 ರಿಂದ 675
ಹಸಿ ಕೊಕ್ಕೋ : 75 ರಿಂದ 105
ಒಣ ಕೊಕ್ಕೋ : 285 ರಿಂದ 315
ಕೊಬ್ಬರಿ : 130 ರಿಂದ 158
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)
ನಿನ್ನೆ(ಮೇ 06) ಇಳಿಕೆ ಕಂಡಿದ್ದ ಕಾಳುಮೆಣಸು ಬೆಲೆಯು ಇಂದು(ಮೇ 07) ಮತ್ತೆ ಏರಿಕೆ ಹಾದಿಗೆ ಮರಳಿದೆ. ಉಳಿದಂತೆ ಕೊಕ್ಕೋ ಮತ್ತು ಕೊಬ್ಬರಿ ಬೆಲೆಗಳು ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿವೆ.
ಕಾಳುಮೆಣಸು ಬೆಲೆ ಏರಿಕೆ : ನಿನ್ನೆ ಗರಿಷ್ಠ ₹670 ಕ್ಕೆ ಕುಸಿದಿದ್ದ ಕಾಳುಮೆಣಸು ಬೆಲೆಯು ಇಂದು ಪ್ರತಿ ಕೆಜಿಗೆ ₹5 ರಷ್ಟು ಏರಿಕೆ ಕಂಡು ಮತ್ತೆ ₹675 ರ ಗಡಿಗೆ ತಲುಪಿದೆ.

ರಬ್ಬರ್ ಧಾರಣೆ
ಗ್ರೇಡ್ : 249
ಲಾಟ್ : 212
ಸ್ಕ್ರ್ಯಾಪ್ ಪ್ರಥಮ ದರ್ಜೆ : 150
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 141
ನಿನ್ನೆ(ಮೇ 06) ಹೋಲಿಸಿದರೆ ಇಂದು(ಮೇ 07) ಎಲ್ಲಾ ವರ್ಗದ ರಬ್ಬರ್ ಬೆಲೆಗಳಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದೆ.
ಗ್ರೇಡ್ ರಬ್ಬರ್ ಚೇತರಿಕೆ : ನಿನ್ನೆ ₹247 ಇದ್ದ ಗ್ರೇಡ್ ರಬ್ಬರ್ ಬೆಲೆಯು ಇಂದು ಪ್ರತಿ ಕೆಜಿಗೆ ₹2 ರಷ್ಟು ಏರಿಕೆ ಕಂಡು ₹249 ಕ್ಕೆ ತಲುಪಿದೆ.
ಲಾಟ್ ಮತ್ತು ಸ್ಕ್ರ್ಯಾಪ್ ಏರಿಕೆ : ಲಾಟ್ ರಬ್ಬರ್ ಮತ್ತು ಸ್ಕ್ರ್ಯಾಪ್ ರಬ್ಬರ್‌ನ ಎರಡೂ ದರ್ಜೆಗಳಲ್ಲಿ ತಲಾ ₹1 ರಷ್ಟು ಏರಿಕೆ ದಾಖಲಾಗಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading