ಬೆಳ್ಳಾರೆ : ಉಮಿಕ್ಕಳ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ; ಬ್ರದರ್ಸ್ ಯುನೈಟೆಡ್ ಪ್ರಥಮ- ಪಿ.ಬಿ ಯುನೈಟೆಡ್ ದ್ವಿತೀಯ

ಬೆಳ್ಳಾರೆಯ ಟೌನ್ ಬಾಯ್ಸ್ ವತಿಯಿಂದ ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲ್‌ನ ಮೈದಾನದಲ್ಲಿ ಉಮಿಕ್ಕಳ ಪ್ರೀಮಿಯರ್ ಲೀಗಿನ ಆರನೇ ಆವೃತ್ತಿಯು ಮೇ 05ರಂದು ನಡೆಯಿತು. ಬೆಳಗ್ಗಿನಿಂದ ಸ್ಸಂಜೆಯವರೆಗೆ ಸುಮಾರು ಆರು ತಂಡಗಳು ಜಿದ್ದಿಗೆ ಬಿದ್ದು ಹೋರಾಟ ನಡೆಸಿದವು. ಅಂತಿಮ ಹಣಾಹಣಿಗೆ ಪ್ರವೇಶ ಪಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭಾರತ್ ವಾರಿಯರ್ಸ್ ಹಾಗೂ ಪಿ.ಬಿ ಯುನೈಟೆಡ್ ಮಧ್ಯೆ ಗೆಲುವಿಗಾಗಿ ಪೈಪೋಟಿ ನಡೆದು ಪಿ. ಯಬಿ ಯುನೈಟೆಡ್ ತಂಡ ವಿಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬ್ರದರ್ಸ್ ಯುನೈಟೆಡ್ ಹಾಗೂ ಅರಫಾ ಯುನೈಟೆಡ್ ಮಧ್ಯೆ ಹೋರಾಟ ಕಂಡು ಬಂದು ಬ್ರದರ್ಸ್ ಯುನೈಟೆಡ್ ತಂಡ ಜಯಶಾಲಿಯಾಗಿ ಅಂತಿಮ ಹೋರಾಟಕ್ಕೆ ಸಜ್ಜಾಯಿತು. ನಂತರ ಬ್ರದರ್ಸ್ ಯುನೈಟೆಡ್ ಹಾಗೂ ಪಿ.ಬಿ.ಯುನೈಟೆಡ್ ಮಧ್ಯೆ ನಡೆದ ಫೈನಲ್ ಪಂದ್ಯದಲ್ಲಿ ಬ್ರದರ್ಸ್ ಯುನೈಟೆಡ್ ತಂಡ ಪ್ರಥಮ ಸ್ಥಾನದೊಂದಿಗೆ ಹತ್ತು ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ದ್ವಿತೀಯ ಸ್ಥಾನಿಯಾದ ಪಿ.ಬಿ.ಯುನೈಟೆಡ್ ತಂಡ ಆರು ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ಇತರ ಗೌರವಗಳನ್ನು ಫೈನಲ್ ಪಂದ್ಯ ಶ್ರೇಷ್ಠನಾಗಿ ಬ್ರದರ್ಸ್ ಯುನೈಟೆಡ್ ತಂಡದ ಡಿ.ಕೆ, ಸರಣಿ ಶ್ರೇಷ್ಠನಾಗಿ ಬ್ರದರ್ಸ್ ಯುನೈಟೆಡ್ ತಂಡದ ಶಾಕಿರ್ ಕಂಚಿಲ್ಪಾಡಿ, ಉತ್ತಮ ದಾಂಡಿಗನಾಗಿ ಪಿ.ಬಿ.ಯುನೈಟೆಡ್ ತಂಡದ ಅಚ್ಚು ದರ್ಖಾಸ್ತು, ಉತ್ತಮ ಎಸೆತಗಾರನಾಗಿ ಪಿ.ಬಿ‌.ಯುನೈಟೆಡ್ ತಂಡದ ಧನರಾಜ್ ದರ್ಖಾಸ್ತು, ಉತ್ತಮ ಕ್ಷೇತ್ರರಕ್ಷಕನಾಗಿ ಬ್ರದರ್ಸ್ ಯುನೈಟೆಡ್ ನ ರಾಝಿ ಬೆಳ್ಳಾರೆ, ಉತ್ತಮ ಗೂಟರಕ್ಷಕನಾಗಿ ಬ್ರದರ್ಸ್ ಯುನೈಟೆಡ್ ನ ರವಾಝ್ ಬೆಳ್ಳಾರೆ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಅತಿಥಿಗಳು ಪ್ರಶಸ್ತಿ ಮತ್ತು ಬಹುಮಾನಗಳನ್ನು ವಿತರಿಸಿದರು. ನಿಝಾರ್ ಶೈನ್ ಸುಳ್ಯ ಈ ಪಂದ್ಯಾವಳಿಯಲ್ಲಿ ವೀಕ್ಷಕ ವಿವರಣೆ ನೀಡಿ ಕಾರ್ಯಕ್ರಮ ನಿರೂಪಣೆಗೈದು ಧನ್ಯವಾದ ಸಮರ್ಪಿಸಿದರು. (ವರದಿ : ಎಂ.ಎ.ಮುಸ್ತಫಾ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading