ಕೆ.ಎಸ್.ಎಸ್ ವಾರ್ಷಿಕೋತ್ಸವ ; “ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡುವುದು ಯುವ ಜನಾಂಗದ ಧ್ಯೇಯವಾಗಬೇಕು” : ಇ.ಒ ಅರವಿಂದ ಎ.ಸುತಗುಂಡಿ ಕಿವಿಮಾತು

ಸುಬ್ರಹ್ಮಣ್ಯ : “ಯುವ ಜನಾಂಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡುವ ಗುರಿಯನ್ನು ಹೊಂದಿರಬೇಕು. ಇದು ಭವಿಷ್ಯಕ್ಕೆ ಆಧಾರವಾಗಿರುತ್ತದೆ. ಸರಕಾರಿ ಉದ್ಯೋಗ ಪಡೆಯುವಲ್ಲಿ ಈ ಭಾಗದ ಯುವ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕು. ಕಷ್ಟ ಪರಿಶ್ರಮದ ಮೂಲಕ ವಿದ್ಯೆ ಕಲಿಯುವುದರಿಂದ ಜೀವನದಲ್ಲಿ ಮಾನವೀಯತೆ ಅಧಿಕ್ಯವಾಗುತ್ತದೆ. ಸೋಲು ಗೆಲುವು ಎನ್ನುವುದು ಜೀವನದ ಅವಿಭಾಜ್ಯ ಅಂಗ. ಇದನ್ನು ಸಮನಾಗಿ ಸ್ವೀಕರಿಸಿ ಗುರಿಯತ್ತ ಸಾಗುವುದು ಅತ್ಯಗತ್ಯ” ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಪದನಿಮಿತ್ತ ಕಾಯದರ್ಶಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಕೆ.ಎಸ್.ಎಸ್ ಕಾಲೇಜಿನ ವಾರ್ಷಿಕೋತ್ಸದ ಅಂಗವಾಗಿ ಮಂಗಳವಾರ ನಡೆದ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡಿದರು. 
ಕುಮಾರಸ್ವಾಮಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಕೀರ್ತ್ ಹೆಬ್ಬಾರ್ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ್ ಪಿ.ಟಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಡಾ. ರವಿ ಕಕ್ಕೆಪದವು ಸದಸ್ಯರಾದ ಭವಾನಿ ಶಂಕರ್ ಪೈಲಾಜೆ, ಐಕ್ಯುಎಸಿ ಸಂಯೋಜಕರಾದ ಲತಾ ಬಿ.ಟಿ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಿಶಾ ಗೌರಿ, ಉಪಾಧ್ಯಕ್ಷರಾದ ಕೀರ್ತನ್, ಕಾರ್ಯದರ್ಶಿ ದೀಕ್ಷಾ ವೇದಿಕೆಯಲ್ಲಿದ್ದರು.
ಉಪನ್ಯಾಸಕಿ ಆರತಿ ನಿರೂಪಿಸಿದರು. ಮನೋಹರ್ ಸ್ವಾಗತಿಸಿ, ಶ್ರೀಲತಾ ವಂದಿಸಿದರು. ಸಮಾರಂಭದಲ್ಲಿ ವಾರ್ಷಿಕೋತ್ಸವ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading