“ಮಾರುಕಟ್ಟೆ ರೌಂಡ್ ಅಪ್” – ಸೋಮವಾರದಿಂದ ಶನಿವಾರದವರೆಗಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಒಂದು ಸಮಗ್ರ ನೋಟ ; ಈ ವಾರ(ಏ.27 ರಿಂದ ಮೇ.02) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯಲ್ಲಿ ಕಂಡುಬಂದ ಏರಿಳಿತಗಳೇನು…!? ಎಂಬುವುದನ್ನು ವಿವರವಾಗಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತಿದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ದಿನನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ ಅಮರ ಸುಳ್ಯ ಸುದ್ದಿ ವಾರಪತ್ರಿಕೆಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದು, ಈ ವಾರ ಏ.27 ಸೋಮವಾರದಿಂದ ಮೇ.02 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು…!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯಲ್ಲಿ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ…

ಮೊದಲಿಗೆ ನಾವು ಈ ವಾರ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ಗಮನಿಸುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಏ.27 ಸೋಮವಾರದಂದು ಹೊಸ ಅಡಿಕೆ ಕನಿಷ್ಠ 290 ರಿಂದ ಗರಿಷ್ಠ 475 ರೂಪಾಯಿ, ಹಳೆ ಅಡಿಕೆ ಕನಿಷ್ಠ 420 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 420 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 280 ರಿಂದ ಗರಿಷ್ಠ 405 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 165 ರಿಂದ ಗರಿಷ್ಠ 290 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 230 ರಿಂದ ಗರಿಷ್ಠ 275 ರೂಪಾಯಿ ಇತ್ತು. ಏ.28 ಮಂಗಳವಾರದಂದು, ಏ.29 ಬುಧವಾರದಂದು, ಏ.30 ಗುರುವಾರದಂದು ಹಾಗೂ ವಾರದ ಕೊನೆಯ ದಿನವಾದ ಮೇ.02 ಶನಿವಾರದಂದು ಕೂಡ ಅಡಿಕೆ ಧಾರಣೆಯಲ್ಲಿ ಯಾವುದೇ ಬದಲಾವಣೆಗಳು ಕಾಣದೇ ಅಡಿಕೆಯ ವಿವಿಧ ಶ್ರೇಣಿಗಳಾದ ಹೊಸ ಅಡಿಕೆ, ಹಳೆ ಅಡಿಕೆ, ಡಬಲ್ ಚೋಲ್, ಫಟೋರಾ, ಉಳ್ಳಿಗಡ್ಡೆ ಹಾಗೂ ಕರಿಗೋಟು ಧಾರಣೆಗಳಲ್ಲಿ ಯಾವುದೇ ಏರಿಳಿತಗಳಿಲ್ಲದೇ ವಾರಪೂರ್ತಿ ಸೋಮವಾರ(ಏ.27)ದ ದರದಲ್ಲೇ ಸ್ಥಿರವಾಗಿ ನಿಂತಿದ್ದವು.

ಮುಂದೆ ನಾವು ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳನ್ನು ನೋಡುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಏ.27 ಸೋಮವಾರದಂದು ಕಾಳುಮೆಣಸು ಕನಿಷ್ಠ 580 ರಿಂದ ಗರಿಷ್ಠ 680 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 270 ರಿಂದ ಗರಿಷ್ಠ 310 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 150 ರಿಂದ ಗರಿಷ್ಠ 190 ರೂಪಾಯಿ ಇತ್ತು. ಏ.28 ಮಂಗಳವಾರದಂದು ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದಿರಲಿಲ್ಲ, ಆದರೆ ಏ.29 ಬುಧವಾರದಂದು ಕಾಳುಮೆಣಸು ಧಾರಣೆಯಲ್ಲಿ 5 ರೂಪಾಯಿ ಏರಿಕೆ ಕಂಡುಬಂದಿದ್ದು, ಕೊಬ್ಬರಿ ಗರಿಷ್ಠ ಧಾರಣೆಯಲ್ಲಿ 20 ರೂಪಾಯಿಗಳಷ್ಟು ಇಳಿಕೆ ದಾಖಲಾಗಿತ್ತು. ಹಿಂದಿನ ದಿನ(ಏ.29) 5 ರೂಪಾಯಿ ಏರಿಕೆ ಕಂಡ ಕಾಳುಮೆಣಸು ಧಾರಣೆಯಲ್ಲಿ ಏ.30 ಗುರುವಾರದಂದು 5 ರೂಪಾಯಿ ಕುಸಿತ ಕಂಡುಬಂದಿದ್ದು, ಮತ್ತೆ ಈ ವಾರದ ಪ್ರಾರಂಭಿಕ ದರದಲ್ಲಿ ಬಂದು ನಿಂತಿತ್ತು. ಆದರೆ ಹಸಿ ಕೊಕ್ಕೋ, ಒಣ ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳು ಏ.29ರ ಧಾರಣೆಯಲ್ಲೇ ಸ್ಥಿರವಾಗಿ ನಿಂತಿದ್ದವು. ವಾರದ ಕೊನೆಯ ದಿನವಾದ ಮೇ.02 ಶನಿವಾರದಂದು ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಯಾವುದೇ ಏರಿಳಿತಗಳಿಲ್ಲದೇ ಏ.29ರ ಧಾರಣೆಯಲ್ಲೇ ಸ್ಥಿರವಾಗಿ ನಿಂತಿದ್ದವು. ವಾರದ ಕೊನೆಯಲ್ಲಿ ಕಾಳುಮೆಣಸು ಕನಿಷ್ಠ 580 ರಿಂದ ಗರಿಷ್ಠ 680 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 285 ರಿಂದ ಗರಿಷ್ಠ 315 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 150 ರಿಂದ ಗರಿಷ್ಠ 170 ರೂಪಾಯಿಗೆ ಬಂದು ತಲುಪಿತ್ತು.

ಇನ್ನು ಕೊನೆಯದಾಗಿ ನಾವು ಈ ವಾರದ ರಬ್ಬರ್ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಏ.27 ಸೋಮವಾರದಂದು ಗ್ರೇಡ್ ರಬ್ಬರ್ 238 ರೂಪಾಯಿ, ಲಾಟ್ ರಬ್ಬರ್ 207 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 146 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 137 ರೂಪಾಯಿ ಇತ್ತು. ಏ.28 ಮಂಗಳವಾರದಂದು ರಬ್ಬರ್ ಧಾರಣೆಯಲ್ಲಿ ಏರಿಕೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ 2 ರೂಪಾಯಿ, ಲಾಟ್ ರಬ್ಬರ್ 50 ಪೈಸೆ ಹಾಗೂ ಸ್ಕ್ರ್ಯಾಪ್ ಪ್ರಥಮ ಮತ್ತು ದ್ವಿತೀಯ ದರ್ಜೆ ವಿಭಾಗದಲ್ಲಿ ತಲಾ 1 ರೂಪಾಯಿ ಏರಿಕೆ ದಾಖಲಾಗಿತ್ತು. ಏ.29 ಬುಧವಾರದಂದು ಕೂಡ ರಬ್ಬರ್ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಗ್ರೇಡ್ ಹಾಗೂ ಲಾಟ್ ತಲಾ 2.5 ರೂಪಾಯಿ ಹಾಗೂ ಸ್ಕ್ರ್ಯಾಪ್ ಪ್ರಥಮ ಮತ್ತು ದ್ವಿತೀಯ ದರ್ಜೆ ವಿಭಾಗದಲ್ಲಿ ತಲಾ 1 ರೂಪಾಯಿ ಏರಿಕೆ ಕಂಡುಬಂದಿತ್ತು. ಏ.30 ಗುರುವಾರದಂದು ಕೂಡ ರಬ್ಬರ್ ಧಾರಣೆಯಲ್ಲಿ ಮತ್ತೆ ಏರಿಕೆ ದಾಖಲಾಗಿದ್ದು, ಗ್ರೇಡ್ ರಬ್ಬರ್ 2.50 ರೂಪಾಯಿ ಹಾಗೂ ಸ್ಕ್ರ್ಯಾಪ್ ಪ್ರಥಮ ಮತ್ತು ದ್ವಿತೀಯ ದರ್ಜೆ ವಿಭಾಗದಲ್ಲಿ ತಲಾ 1 ರೂಪಾಯಿ ಏರಿಕೆ ಕಂಡುಬಂದಿತ್ತು, ಆದರೆ ಲಾಟ್ ರಬ್ಬರ್ ಏ.29ರ ಧಾರಣೆಯಲ್ಲೇ ಸ್ಥಿರವಾಗಿ ನಿಂತಿತ್ತು. ಇನ್ನು ವಾರದ ಕೊನೆಯ ದಿನವಾದ ಏ.02 ಶನಿವಾರದಂದು ರಬ್ಬರ್ ಧಾರಣೆಯಲ್ಲಿ ಮಗದೊಮ್ಮೆ ಏರಿಕೆ ಕಂಡುಬಂದಿದ್ದು, ಗ್ರೇಡ್ ಹಾಗೂ ಲಾಟ್ ನಲ್ಲಿ ತಲಾ 1 ರೂಪಾಯಿ ಏರಿಕೆ ಕಂಡುಬಂದಿದ್ದು, ಸ್ಕ್ರ್ಯಾಪ್ ಪ್ರಥಮ ಹಾಗೂ ದ್ವಿತೀಯ ದರ್ಜೆ ವಿಭಾಗದಲ್ಲಿ ಯಾವುದೇ ರೀತಿಯ ಬದಲಾವಣೆಗಳಾಗದೇ ಏ.29ರ ದರದಲ್ಲೇ ಸ್ಥಿರವಾಗಿ ನಿಂತಿದ್ದವು. ವಾರದಲ್ಲಿ ನಾಲ್ಕು ದಿನಗಳ ಕಾಲ ನಿರಂತರವಾಗಿ ಏರಿಕೆ ಕಂಡ ರಬ್ಬರ್ ಧಾರಣೆಯು ವಾರದ ಕೊನೆಯಲ್ಲಿ ಗ್ರೇಡ್ ರಬ್ಬರ್ 246 ರೂಪಾಯಿ, ಲಾಟ್ ರಬ್ಬರ್ 211 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 149 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 140 ರೂಪಾಯಿಗಳಿಗೆ ತಲುಪಿತ್ತು.

ಒಟ್ಟಿನಲ್ಲಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯು ವಾರಪೂರ್ತಿ ಸೋಮವಾರ(ಏ.27)ದ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೆ, ವಾರದ ಮಧ್ಯದಲ್ಲಿ ಕಾಳುಮೆಣಸಿನ ಧಾರಣೆ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಂತೆ ಭಾಸವಾದರೂ ಮತ್ತೆ ಇಳಿಕೆ ಕಂಡು ಈ ವಾರದ ಪ್ರಾರಂಭಿಕ ದರಕ್ಕೆ ಬಂದು ನಿಂತಿತ್ತು. ರಬ್ಬರ್ ಧಾರಣೆಯು ನಾಲ್ಕು ದಿನಗಳ ಕಾಲ ನಿರಂತರವಾಗಿ ಮೇಲಿಂದ ಮೇಲೆ ಏರಿಕೆಯ ಹಾದಿಯನ್ನು ಹಿಡಿದರೆ ಕೊಬ್ಬರಿ ಧಾರಣೆಯು ಅಲ್ಪಮಟ್ಟಿಗೆ ಕುಸಿತದ ಹಾದಿಯನ್ನು ಕಂಡಿತ್ತು. ಮುಂದಿನವಾರ ಏನಾಗುತ್ತದೋ ಕಾದುನೋಡಬೇಕಿದೆ… ಬರಹ : ಉಲ್ಲಾಸ್ ಕಜ್ಜೋಡಿ(ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ದರಗಳು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಸಂಗ್ರಹಿಸಲಾದ ವಾರದ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆಯ ಧಾರಣೆಯು ಪ್ರತಿದಿನದ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ರೈತರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading