ಕೆ.ವಿ.ಜಿ ನರ್ಸಿಂಗ್ ಸಂಸ್ಥೆಗಳ ವಾರ್ಷಿಕೋತ್ಸವ ಹಾಗೂ ದೀಪಪ್ರಜ್ವಲನ ಸಮಾರಂಭ ; “ನರ್ಸಿಂಗ್ ವೃತ್ತಿ ಎಂದರೆ ಉದ್ಯೋಗವಲ್ಲ, ಅದು ಸೇವೆಯ ಮಹೋನ್ನತ ಮಾರ್ಗ” : ಡಾ| ಕೆ.ವಿ ಚಿದಾನಂದ

ಸುಳ್ಯದ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಹಾಗೂ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ವತಿಯಿಂದ ಏಪ್ರಿಲ್ 29ರಂದು ವಾರ್ಷಿಕೋತ್ಸವ ಮತ್ತು ದೀಪಪ್ರಜ್ವಲನ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎ.ಒ.ಎಲ್.ಇ(ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ| ಕೆ.ವಿ. ಚಿದಾನಂದ ರವರು ಮಾತನಾಡಿ “ನರ್ಸಿಂಗ್ ವೃತ್ತಿ ಎಂದರೆ ಕೇವಲ ಉದ್ಯೋಗವಲ್ಲ, ಅದು ಸೇವೆಯ ಮಹೋನ್ನತ ಮಾರ್ಗ. ರೋಗಿಗಳ ಆರೈಕೆ, ಸಹಾನುಭೂತಿ ಮತ್ತು ನಿಷ್ಠೆಯಿಂದ ಮಾಡಿದ ಸೇವೆಯೇ ಒಬ್ಬ ಉತ್ತಮ ನರ್ಸ್‌ನ ಮಹತ್ವವನ್ನು ಹೆಚ್ಚಿಸುತ್ತದೆ” ಎಂದರು. 
ಮುಖ್ಯ ಅತಿಥಿಯಾಗಿ ಕೆ.ವಿ.ಜಿ.ಎಂ.ಸಿ.ಎಚ್ ಡೀನ್ ಡಾ| ನೀಲಾಂಬಿಕೈ ನಟರಾಜನ್ ಭಾಗವಹಿಸಿ ಶುಭ ಹಾರೈಸಿದರು.
ಗೌರವ ಅತಿಥಿಯಾಗಿ ಎನ್‌.ಎಂ.ಪಿ.ಯು.ಸಿ ಸುಳ್ಯದ ಪ್ರಾಂಶುಪಾಲರಾದ ಪ್ರೊ. ಮಿಥಾಲಿ.ಪಿ ರೈ ಉಪಸ್ಥಿತರಿದ್ದು, ಮಾತನಾಡಿ “ದಾದಿಯರು ಆರೋಗ್ಯ ಕ್ಷೇತ್ರದ ಬೆನ್ನೆಲುಬು ರೋಗಿಗಳ ಆರೈಕೆ, ಕರುಣೆ, ಸಹಾನುಭೂತಿ ಮತ್ತು ಸಮರ್ಪಣೆಯಿಂದ ಸೇವೆ ಸಲ್ಲಿಸುವ ಮೂಲಕ ಅವರು ಸಮಾಜದಲ್ಲಿ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರ ಜೊತೆಗೆ ನರ್ಸ್‌ಗಳ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ.
ಕೆಲವು ವೃತ್ತಿಗಳು ಕೇವಲ ಉದ್ಯೋಗವಲ್ಲ, ಪವಿತ್ರ ವೃತ್ತಿ” ಎನ್ನುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 
ಈ ಸಂದರ್ಭದಲ್ಲಿ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪ್ರಾಂಶುಪಾಲರಾದ ಡಾ| ಪ್ರಮೋದ್ ಕೆ.ಜೆ, ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಪ್ರಾಂಶುಪಾಲರಾದ ಚಂದ್ರಾವತಿ.ಕೆ.ಎಸ್, ಪ್ರೊಫೆಸರ್ ಮರಿಯಾ ಒಲಿವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಕಾರ್ಯಕ್ರಮದಲ್ಲಿ ದೀಪಪ್ರಜ್ವಲನ ಹಾಗೂ ಫ್ಲಾರೆನ್ಸ್ ನೈಟಿಂಗೇಲ್ ಅವರಿಗೆ ಪುಷ್ಪ ನಮನ ನೆರವೇರಿತು. ಬಳಿಕ ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕೆ.ವಿ.ಜಿ ನರ್ಸಿಂಗ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರೊಫೆಸರ್ ಶಿಲ್ಪಾ ಎನ್.ಎಂ ಸ್ವಾಗತ ಭಾಷಣ ಮಾಡಿದರು. ಡಾ| ಪ್ರಮೋದ್ ಕೆ.ಜೆ ವಾರ್ಷಿಕ ವರದಿ ವಾಚಿಸಿದರು. ಡಾ| ಚಂದ್ರಾವತಿ ಕೆ.ಎಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕರಾದ ಲವೀನಾ ಕೆ.ಎ ಬಹುಮಾನಿತರ ಪಟ್ಟಿ ವಾಚಿಸಿದರು. ಪ್ರೊಫೆಸರ್ ಮರಿಯಾ ಒಲಿವರ್ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. 
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಎಲ್ಲಾ ವಿಭಾಗ ಮುಖ್ಯಸ್ಥರು, ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading