Ad Widget

ಎಣ್ಮೂರು ಗ್ರಾಮ ಎಡಮಂಗಲ ಗ್ರಾಮಕ್ಕೆ ಸೇರ್ಪಡೆ ಹಿನ್ನೆಲೆ ಕಡತಗಳನ್ನು ಇಂದು ಹಸ್ತಾಂತರ

ಎಣ್ಮೂರು ಗ್ರಾಮಕ್ಕೆ ಸಂಬಂಧಪಟ್ಟ ಅಧಿಕೃತ ಕಡತ ಮತ್ತು ವಹಿಗಳನ್ನು ಮುರುಳ್ಯ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ ಆರ್ ಇವರು ಎಡಮಂಗಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಡಿಸೋಜ ಇವರಿಗೆ ಹಸ್ತಾಂತರಿಸುವ ಮುಖೇನ ಎಣ್ಮೂರು ಗ್ರಾಮದ ಸಂಪೂರ್ಣ ಆಡಳಿತಾತ್ಮಕ ಜವಾಬ್ದಾರಿಯನ್ನು ಎಡಮಂಗಲ ಗ್ರಾಮ ಪಂಚಾಯಿತ್ ಗೆ ವಹಿಸಲಾಯಿತು. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್, ಮತ್ತು ಸುಳ್ಯ ತಾ. ಸಹಾಯಕ ಲೆಕ್ಕಾಧಿಕಾರಿ ಹರೀಶ್ ಇವರ ಉಪಸ್ಥಿತಿಯಲ್ಲಿ ಪರಿಶೀಲನೆ ಬಳಿಕ ಕಡತ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮುರುಳ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸೀತಾರಾಮ ಎಸ್ ಮತ್ತು ಸಿಬ್ಬಂದಿಗಳಾದ ಪಚ್ಚೋಳಿ ಕೆ ,ಶ್ರೀಮತಿ ಜಯಮ್ಮ .ಕೆ,ಪ್ರದೀಪ ಜಿ ,ಶ್ರೀಮತಿ ರಂಜಿನಿ ಹಾಗೂ ಎಡಮಂಗಲ ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರೀ ಗೋಪಿನಾಥ್ ಉಪಸ್ಥಿತರಿದ್ದರು. ಎಣ್ಮೂರು ಗ್ರಾಮದ ಜನರು ಎಲ್ಲಾ ವ್ಯವಹಾರಗಳಿಗೆ ಇನ್ನು ಮುಂದಕ್ಕೆ ಎಡಮಂಗಲ ಗ್ರಾಮ ಪಂಚಾಯತನ್ನು ಸಂಪರ್ಕಿಸಲು ಈ ಮೂಲಕ ತಿಳಿಸಿದೆ. ಮುರುಳ್ಯ ಗ್ರಾಮ ಪಂಚಾಯಿತಿಯು ಮುಂದಿನ ಆದೇಶದವರೆಗೂ ಹಳೇ ಎಣ್ಮೂರು ಗ್ರಾಮ ಪಂಚಾಯಿತಿ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading