ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕ್ರತ ಯುವವಾಹಿನಿ(ರಿ.) ಸುಳ್ಯ ಘಟಕದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪುಣ್ಯ ಭೂಮಿ ಶಿವಗಿರಿ ಮತ್ತು ಇತರ ಪುಣ್ಯಕ್ಷೇತ್ರ ಯಾತ್ರೆ

ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕ್ರತ ಯುವವಾಹಿನಿ ಯ(ರಿ.) ಸುಳ್ಯ ಘಟಕದಿಂದ ಶಿವಗಿರಿ ಮತ್ತು ಇತರ ಪುಣ್ಯ ಕ್ಷೇತ್ರಗಳಿಗೆ ಎರಡು ದಿನದ ಯಾತ್ರೆ ಕೈಗೊಳ್ಳಲಾಯಿತು. ಮೊದಲ ದಿನ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಶಾರದಾ ಪೀಠ, ತಪೋ ಭೂಮಿ ಸಮಾಧಿ ಸ್ಥಳ, ಗುರುಗಳು ಜನಿಸಿದ ಚೆಂಬಳಂತಿ, ಕುನ್ನುಂಪಾರೆ ಬಾಲಸುಬ್ರಹ್ಮಣ್ಯಂ ದೇವಸ್ಥಾನ, ಗುರುಗಳು ಪ್ರಥಮವಾಗಿ ಸ್ಥಾಪಿಸಿದ ಅರಿವಿಪುರ ಶಿವ ದೇವಸ್ಥಾನ, ಕನ್ಯಾಕುಮಾರಿ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. ಗುರುಗಳು ಸುಮಾರು ಆರು ವರ್ಷ ತಪಸ್ಸು ಮಾಡಿ ಸಿದ್ದಿಯನ್ನು ಪಡೆದ 1,500 ಅಡಿ ಎತ್ತರದ ಮರುತ್ವಾ ಮಲೆ ಬೆಟ್ಟ, ಕನ್ಯಾಕುಮಾರಿಯ ರಾಮೇಶ್ವರದ ಸ್ವಾಮಿ ವಿವೇಕಾನಂದರ ಧ್ಯಾನ ಕೇಂದ್ರ ಮತ್ತು ತಮಿಳುನಾಡಿನ ಖ್ಯಾತ ಕವಿ ತಿರುವಳ್ಳೂರು ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಲಾಯಿತು. ಹಾಗೂ ಕೇರಳದ ಶ್ರೀಮಂತ ಸನ್ನಿದಿ ಅನಂಥ ಪದ್ಮನಾಭ ಧೇವಸ್ಥಾನಕ್ಕೆ ಭೇಟಿ ನೀಡಲಾಯಿತು. ಶಿವಗಿರಿ ಮತ್ತು ಪುಣ್ಯ ಸ್ಥಳ ಯಾತ್ರೆಯಲ್ಲಿ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮಿ ಪ್ರತಿ ಕ್ಷೇತ್ರದ ಹಿನ್ನೆಲೆ ಹಾಗೂ ಮಾಹಿತಿ ನೀಡಿದರು. ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಪ್ರಸಾದ್ ಪಾಲನ್ ಮತ್ತು ಸದಾನಂದ ಪೂಜಾರಿ ಕುಲಾಯಿ ಸಹಕರಿಸಿದರು. ಸುಮಾರು 51 ಮಂದಿ ಯಾತ್ರರ್ಥಿಗಳು ಯಾತ್ರೆಯಲ್ಲಿ ಭಾಗವಹಿಸಿದ್ದರು. ಯುವವಾಹಿನಿ(ರಿ.) ಸುಳ್ಯ ಘಟಕದ ಅಧ್ಯಕ್ಷ ಮಹೇಶ್ ಕಲ್ಲಪಣೆ, ಕಾರ್ಯದರ್ಶಿ ರಂಜಿತ್ ದರ್ಖಾಸ್ತು, ಕೋಶಾಧಿಕಾರಿ ಹರೀಶ್ ಧೋಳ ಮತ್ತು ಘಟಕದ ಪೂರ್ವಧ್ಯಕ್ಷರು ಗಳು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading