ಸರಕಾರದ ನೂತನ ನೀತಿಯಂತೆ ಸರಕಾರಿ ಶಾಲಾ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಒದಗಿಸಲು ಹೆತ್ತವರಿಗೆ ಸಾಧ್ಯವಾಗದೆ ಇದ್ದರೆ ಸಮುದಾಯ ಕೇಂದ್ರ ಗಳನ್ನು ಪ್ರಾರಂಭಿಸಿ ಶಿಕ್ಷಣ ಒದಗಿಸುವ ಮೂಲಕ ಅವರನ್ನು ಚಟುವಟಿಕೆ ಯಲ್ಲಿ ತೊಡಗಿಸಿಗೊಳ್ಳುವಂತೆ ಮಾಡುವ ನೂತನ ಕಾರ್ಯಕ್ರಮ ಸುಳ್ಯ ನಗರ ವ್ಯಾಪ್ತಿಯಲ್ಲಿ ಪ್ರಾರಂಭ ಗೊಂಡಿದೆ. ಇಂದು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರ ದಲ್ಲಿ ಈ ಕುರಿತು ಕಾರ್ಯಾಗಾರ ನಡೆಸಲಾಯ್ತು. ಪ್ರತೀ ಕೇಂದ್ರಕ್ಕೆ ಮಾಸ್ಕ್, ಸ್ಯಾನಿಟೈಝೆರ್ ,ಪುಸ್ತಕ ಮತ್ತು ಶಿಕ್ಷಕರ ತರಬೇತಿ ಪಡೆದ ಸ್ವಯಂ ಸೇವಕರ ನಿಯೋಜನೆ ಎಂ ಬಿ ಫೌಂಡೇಶನ್ ವತಿಯಿಂದ ಏರ್ಪಡಿಸಲಾಗಿದೆ. ಪ್ರತೀ ಶಿಕ್ಷಕರ ಮತ್ತು ಮಕ್ಕಳನ್ನು ಥರ್ಮಾಮೀಟರ್ ಮತ್ತು ಪಲ್ಸ್ ಆಕ್ಸಿಜನ್ ಮೀಟರ್ ಮೂಲಕ ತಪಾಸಣೆ ಮಾಡಲು ವೈದ್ಯಕೀಯ ಉಪಕರಣ ಗಳನ್ನೂ ಎಂ. ಬಿ. ಫೌಂಡೇಶನ್ ಒದಗಿಸಲಿದೆ. ನಗರ ವ್ಯಾಪ್ತಿಯ ಶಾಲಾ ಮುಖ್ಯೋಪಾಧ್ಯಾಯರು ಆಸಕ್ತಿ ಶಿಕ್ಷಣ ಇಲಾಖೆಯ ಎರಡೂ ಸಂಸ್ಥೆಗಳ ಪ್ರಯತ್ನಕ್ಕೆ ನಾವು ಸಹಕಾರ ನೀಡುವ ಮೂಲಕ ಸರಕಾರದ ಕಾರ್ಯಕ್ರಮ ವನ್ನು ಯಶಸ್ಸಿಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಎಂ ಬಿ. ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ ತಿಳಿಸಿದ್ದಾರೆ.
- Thursday
- November 7th, 2024