ಅಂದು ಶಿಕ್ಷಕರ ಜೀವನದಲ್ಲಿ ಚೆಲ್ಲಾಟ ಇಂದು ವಿದ್ಯಾರ್ಥಿಗಳ ಭಾಷಾವಾರು ವಿಷಯಗಳನ್ನು ಇಟ್ಟುಕೊಂಡು ಚೆಲ್ಲಾಟವೇ…?

ಮೊದಲು ಶಿಕ್ಷಕರ ಜೀವನದಲ್ಲಿ ಚೆಲ್ಲಾಟವಾಡಿದರು. ಅಂದರೆ ಶಿಕ್ಷಕರು ಕೇವಲ ಪಾಠ ಮಾಡುವುದಲ್ಲದೆ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅಥವಾ ಹೊರಸೆಳೆಯುವ ಕಾಯಕ ಯೋಗಿಗಳಂತೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಅಕ್ಷಯ ಪಾತ್ರೆಯಂತೆ ಕಾರ್ಯನಿರ್ವಹಿಸುವ ಅಂದ ಹಾಗೇ “ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ”.ವಿದ್ಯೆಯನ್ನು ಧಾರೆ ಎರೆಯುದರಲ್ಲಿ ಸೈ ಎನಿಸಿಕೊಂಡವರು ಗುರುಗಳು. ಅಲ್ಲದೆ ಶಿಕ್ಷಕರು ತಮ್ಮ ಪ್ರೀತಿಯ ವಿದ್ಯಾರ್ಥಿಗಳು ಶ್ರಮವಹಿಸಿ ಬರೆದ ಪರೀಕ್ಷಾ ಉತ್ತರ ಪತ್ರಿಕೆಯ ಮೌಲ್ಯಮಾಪನದ ಕಿರು ಕಾಣಿಕೆಯಿಂದ ಹಿಡಿದು ತಿಂಗಳ ಸಂಭಾವನೆಯು ಸಕಾಲಕ್ಕೆ ಸಿಗದೇ ಅಂಗಲಾಚಿದ ಹೋರಾಟ ಮಾಡಿದಂತಹ ಅದೆಷ್ಟೋ ನೈಜ ಚಿತ್ರಣವು ನಮ್ಮೆಲ್ಲರ ಕಣ್ಣ ಮುಂದೆ ಹಾಸು ಹೊಕ್ಕಗಿರುವುದನ್ನು ಮನಗಾಣಬಹುದು. ಇಂದು ಪ್ರಸ್ತುತ ದಿನದಲ್ಲಿ 10ನೇ ತರಗತಿಯ ಪರೀಕ್ಷೆ ನಡೆಯುತ್ತಿರುವಾಗ ನಮ್ಮ ಶಿಕ್ಷಣ ಸಚಿವರು ಭಾಷಾವಾರು ವಿಷಯದ ಕುರಿತಾಗಿ ಧ್ವನಿ ಎತ್ತಿರುವುದು ಮುಗ್ಧ ಮಕ್ಕಳ ಓದುವ ಮನಸ್ಸನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಲ್ಲದೆ ಹಾಗೂ ಆಸಕ್ತಿಯು ಕಳೆದು ಹೋಗಿದೆ. ಇದರಿಂದಾಗಿ ಹಿಂದಿ ಬೋಧಿಸುವ ಶಿಕ್ಷಕರಿಗೂ ತೀವ್ರವಾದ ಬೇಸರವನ್ನುಂಟು ಮಾಡಿದೆ. ಅಲ್ಲದೆ ಭಾಷಾವಾರು ಪತ್ರಿಕೆಯು ವಿದ್ಯಾರ್ಥಿಗಳ ಹೆಚ್ಚು ಅಂಕ ಗಳಿಕೆಯ ಸಾಮರ್ಥ್ಯ ವಿಷಯವು ಆಗಿರುವುದರಿಂದ ವಿದ್ಯಾರ್ಥಿಗಳು ವಹಿಸಿದ ಶ್ರಮಕ್ಕೆ ಪ್ರತಿಫಲವು ಇಲ್ಲದಂತಾಗಿದೆ.ಅಭ್ಯಾಸಿಸಿದ ಪುಸ್ತಕವು ಗಾಳಿಯಲ್ಲಿ ತೂರಾಡುವ ಗಾಳಿಪಟಕ್ಕೆ ಸಮವಾದಂತಿದೆ ಹೇಳಿದರೆ ತಪ್ಪಾಗಲಾರದು. ಇತ್ತೀಚಿನ ಸನ್ನಿವೇಶವನ್ನು ನೆನಪಿಸಿದಾಗ ಹೇಗೆ ಜಾಗತಿಕ ಮಾರುಕಟ್ಟೆಯಲ್ಲಿ ಯುದ್ಧದಿಂದಾಗಿ ತೈಲ ಬೆಲೆಗಳಲ್ಲಿ ಎರೆಳಿತ ಉಂಟಾಗಿದೆಯೋ ಅದೇ ರೀತಿ ಶಿಕ್ಷಣವೆಂಬ ರಣರಂಗದಲ್ಲಿ ಅಂಕಗಳು 625 ರಿಂದ 525ಕ್ಕೆ ಇಳಿಕೆಯಾಗಿರುವುದೇ..? ನಿಜತಃ ಶಿಕ್ಷಣವು ಇಂದು ವ್ಯಾಪಾರಿಕರಣವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ.ಭಾರತವು ಹಲವು ಭಾಷೆಗಳ ಸೇತುವೆ ಹಾಗೂ ತವರೂರು ಅದರಲ್ಲಿಯೂ ಹಿಂದಿ ಭಾಷೆಯು ನಮ್ಮ ರಾಷ್ಟ್ರೀಕೃತ ಭಾಷೆಯಾಗಿರುವುದರಿಂದ ಭಾಷೆಗಳಲ್ಲಿ ಇರುವ ಸೊಗಡು, ವೈವಿಧ್ಯತೆ ಕ್ಷೀಣಿಸಬಹುದೆಂಬ ಸಾಮಿಪ್ಯತೆ ಉಂಟಾಗಿದೆ. ಅದಲ್ಲದೆ ವೃತ್ತಿಪರ ಕೋರ್ಸ್ ಗಳನ್ನು ಅಧ್ಯಯನ ಮಾಡಿದವರ ಗತಿಯೇನುಮುಂದೆ…? ಇದೊಂದು ಬೇಸರವಾದ ಸಂಗತಿಯಾಗಿದೆ ಅಲ್ಲವೇ…! ಸಚಿವರೇ ಈ ವಿಷಯದ ಕುರಿತಾಗಿ ತುಸು ಮೆಲ್ಲನೆ ಆಲೋಚಿಸುವಿರಾ… ಕಿಶನ್.ಎಂ ಪೆರುವಾಜೆ(ಸಹ ಶಿಕ್ಷಕ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading