ಸುಬ್ರಹ್ಮಣ್ಯ : ಸ್ವಚ್ಛತಾ ಅಭಿಯಾನ

ಸುಬ್ರಹ್ಮಣ್ಯ ಜುಲೈ 26 : ಸುಬ್ರಹ್ಮಣ್ಯ ರೋಟರಿ ಕ್ಲಬ್ ಹಾಗೂ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್(ರಿ.) ವತಿಯಿಂದ ಇಂದು ರವಿವಾರ ಕುಮಾರಧಾರ ಸ್ನಾನಘಟ್ಟ, ಸೇತುವೆ, ಹಾಗೂ ಕುಲ್ಕುಂದ ಕಾಲನಿವರೆಗೆ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.

. . . . . . . . .

ಕುಮಾರಧಾರ ಸ್ಥಾನಗಟ್ಟದಲ್ಲಿ ಕ್ಷೇತ್ರಕ್ಕೆ ಬಂದ ಊರ ಹಾಗೂ ಪರವೂರ ಭಕ್ತರಿಗೆ ತೀರ್ಥ ಸ್ನಾನ ಮಾಡಲು ನದಿಯಲ್ಲಿ ಅವಕಾಶವಿಲ್ಲದೆ ಪಕ್ಕದಲ್ಲಿ ನೀರು ತುಂಬಿಸಿದ ಡ್ರಮ್ ಗಳನ್ನು ಹಾಗೂ ಶವರ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಕ್ತಾದಿಗಳು ಹೆಂಗಸರು, ಗಂಡಸರು, ವೃದ್ಧರು, ಮಕ್ಕಳೆನ್ನದೆ ಎಲ್ಲರೂ ಅಲ್ಲೇ ಸ್ನಾನವನ್ನು ಮುಗಿಸಿ ಶ್ರೀ ದೇವಳಕ್ಕೆ ತೆರಳುತ್ತಿದ್ದು ಕಂಡು ಬಂತು. ಭಕ್ತಾದಿಗಳ ವಾಹನಗಳು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಮಾರ್ಗದ ಎರಡು ಬದಿಗಳಲ್ಲಿ ನಿಲ್ಲಿಸಿದ್ದರು. ಭಕ್ತಾದಿಗಳಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ತಟ್ಟೆ, ಹಾಗೂ ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದನ್ನು ಇಂದು ಸ್ವಚ್ಛಗೊಳಿಸಲಾಯಿತು. ಹಾಗೆಯೇ ಕುಮಾರಧಾರ ಸೇತುವೆಯ ಇಕ್ಕಲಗಳಲ್ಲಿ ಹಾಗೂ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಬಿಸಾಡಿದ್ದ ಕಸ ಕಡ್ಡಿ, ಪ್ಲಾಸ್ಟಿಕ್ ಇತ್ಯಾದಿಗಳು ಇದ್ದದ್ದನ್ನು ಸ್ವಚ್ಛಗೊಳಿಸಲಾಯಿತು.

. . . . . . .

ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ರೋಹಿತ್ ಬಿಬಿ ಈ ಸಂದರ್ಭದಲ್ಲಿ ಮಾತನಾಡಿ “ಯಾರೊಬ್ಬರು ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಎಲ್ಲಿಂದರಲ್ಲಿ ಹಾಕಬಾರದು. ಹಾಗೆ ಹಾಕಿದಲ್ಲಿ ದಂಡ ವಿಧಿಸುವಂತ ವ್ಯವಸ್ಥೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನವರು ಸ್ಥಳದಲ್ಲಿ ಇದ್ದು ದಂಡ ವಿಧಿಸಬೇಕು. ಮತ್ತು ಭಕ್ತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಎಲ್ಲರೂ ಆಗಾಗ ಮಾಡಬೇಕಾಗಿದೆ” ಎಂದರು. ರವಿ ಕಕ್ಕೆಪದವು ಸಮಾಜ ಸೇವ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆಪದವು ಮಾತನಾಡಿ “ಈ ದಿನ ನಾವು 538ನೇ ವಾರದಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ. ನಮ್ಮ ಸ್ವಯಂಸೇವಕರು ಬಹಳಷ್ಟು ಉತ್ಸಾಹದಿಂದ ಪ್ರತಿ ರವಿವಾರ ಈ ಒಂದು ಸ್ವಚ್ಛತಾ ಕಾರ್ಯಕ್ರಮದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಭಕ್ತಾದಿಗಳು ಯಾರೊಬ್ಬರು ಇಲ್ಲೆಲ್ಲೂ ಕಸವನ್ನ ಬಿಸಾಡದೆ ಕಸದ ತೊಟ್ಟಿಯಲ್ಲಿ ಹಾಕಬೇಕು,ಅಥವಾ ತಾವು ಬಂದ ವಾಹನದಲ್ಲಿ ಕಸವನ್ನು ತಗೊಂಡು ಹೋಗಿ ಬೇರೆ ಕಡೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಲುಪಿಸಬೇಕು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಸ್ವಚ್ಛವಾಗಿರಿಸೋಣ ಅದಕ್ಕೆ ಎಲ್ಲರೂ ಸಹಕರಿಸಬೇಕು” ಎಂದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ವಿಶ್ವನಾಥ ನಡುತೋಟ ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading