ಗೌಡ ಯುವ ಸೇವಾ ಸಂಘ ಹಾಗೂ ಶ್ರೀ ವೆಂಕಟರಮಣ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ವತಿಯಿಂದ ಆ. 15 ರಂದು ಅಪರಾಹ್ನ ಘಂಟೆ 2ಕ್ಕೆ ಶ್ರೀ ವೆಂಕಟರಮಣ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಬೋಜಪ್ಪ ಗೌಡ ಸಭಾಂಗಣದಲ್ಲಿ 10ನೇ ತರಗತಿ ಯ ಲ್ಲಿ ರಾಜ್ಯ ಕ್ಕೆ ಟಾಪರ್ ಆಗಿರುವ ಬಳ್ಪ ಗ್ರಾಮದ ಎಣ್ಣೆಮಜಲು ಲೋಕೇಶ್ ರವರ ಪುತ್ರ ಅನುಷ್ ಎಣ್ಣೆಮಜಲು ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಮಾರಂಭ ದ ಅಧ್ಯಕ್ಷತೆ ಯನ್ನು ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿನ ವಹಿಸಿದ್ದರು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ ರಾದ ಡಾಕ್ಟರ್ ಕೆ .ವಿ ಚಿದಾನಂದ ಅನುಷ್ ರವರನ್ನು ಸನ್ಮಾನಿಸಿದರು. ಸಂಘದ ನಿರ್ದೇಶಕರಾದ ಜಯರಾಂ ದೇರಪ್ಪಜ್ಜನಮನೆ ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ. ಸಿ . ಜಯರಾಂ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಅಧ್ಯಕ್ಷ ಗಣೇಶ್ ಪ್ರಸಾದ್ ಶುಭ ಹಾರೈಸಿದರು. ವೇದಿಕೆ ಯಲ್ಲಿ ಶಾಲಾ ಸಂಚಾಲಕ ರಾದ ಪಿ.ಯಸ್ ಗಂಗಾಧರ್ , ಸಂಘದ ಕೋಶಾಧಿಕಾರಿ ತೇಜಪ್ರಸಾದ್ ಅಮೆಚೂರ್ ಸುಳ್ಯತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ವತಿ ರಾಧಾಕೃಷ್ಣ ಮಾಣಿಬೆಟ್ಟು ,ತಾಲೂಕು ತರುಣ ಘಟಕದ ಅಧ್ಯಕ್ಷ ರಜತ್ ಅಡ್ಕಾರ್ , ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಎಲ್ಲಾ ಪೂರ್ವ ಅಧ್ಯಕ್ಷ ರುಗಳು ನಿರ್ದೇಶಕರು ಗಳು ಮತ್ತು ಲೋಕೇಶ್ ಎಣ್ಣೆಮಜಲು ರವರ ಮನೆಯವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ವತಿಯಿಂದ ಕೂಡ ಡಾಕ್ಟರ್ ಕೆ.ವಿ ಚಿದಾನಂದ ಗೌಡ ಅವರು ಅನುಷ್ ಅವರನ್ನು ಸನ್ಮಾನಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ಸ್ವಾಗತಿಸಿ, ವೆಂಕಟರಮಣ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ್ ವಂದಿಸಿದರು. ಸಂಘದ ಸಹ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್ ಕಾರ್ಯಕ್ರಮ ದ ನಿರೂಪಿಸಿದರು.
- Thursday
- November 21st, 2024