ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘ ಕಲ್ಲುಗುಂಡಿ ಘಟಕದ ವಾರ್ಷಿಕ ಮಹಾಸಭೆ

ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘ ಕಲ್ಲುಗುಂಡಿ ಘಟಕದ ವಾರ್ಷಿಕ ಮಹಾಸಭೆಯು ಮಾರ್ಚ್ 20ರಂದು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು.
ಮೊದಲಿಗೆ ಕುಮಾರಿ ಖುಷಿ ಅವರು ಪ್ರಾರ್ಥನೆ ನೆರವೇರಿಸಿದರು.
ಗಣ್ಯರಿಂದ ದೀಪಬೆಳಗಿಸಿ ತಾಯಿ ಭಾರತಾಂಭೆಗೆ ಪುಷ್ಫಾರ್ಚಣೆ ಮಾಡಿ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಅತಿಥಿಗಳನ್ನು ಯಶೋದರ ಕಡೆಪಾಲ ಅವರು ಸ್ವಾಗತಿಸಿದರು.
ಸಭೆಯ ಅದ್ಯಕ್ಷತೆಯನ್ನು ಕಲ್ಲುಗುಂಡಿ ಘಟಕದ ಅದ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಬಿ.ಎಂ.ಎಸ್ ನ ಅದ್ಯಕ್ಷರಾದ ಪ್ರಕಾಶ್ ಎಮ್.ಎಸ್, ನಿಕಟಪೂರ್ವ ಅದ್ಯಕ್ಷರಾದ ರಾದಕೃಷ್ಣ ಬೈತಡ್ಕ, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಮ್, ಖಜಾಂಜಿ ರವಿ ಜಾಲ್ಸೂರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಉಪಾದ್ಯಕ್ಷರಾದ ಜಗದೀಶ್ ಗೂನಡ್ಕ, ಕಾರ್ಯದರ್ಶಿ ಪ್ರಮೋದ್ ಕೈಪಡ್ಕ,
ಖಜಾಂಜಿ ಕೃಷ್ಣಪ್ರಸಾದ್ ಕಾಪಿಲ, ನಿರ್ದೆಶಕರು ಮತ್ತು ಸಂಘದ ಸರ್ವ ಸದಸ್ಯರು ಉಪಸ್ಥಿತಿತರಿದ್ದರು.
ಜಗದೀಶ್ ಕೊಯನಾಡು ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು.
ಖಜಾಂಜಿ ಕೃಷ್ಣಪ್ರಸಾದ್ ಕಾಪಿಲ ಸಂಘದ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
2026-27 ಸಾಲಿನ ನೂತನ ಪದಾದಿಕಾರಿಗಳ ಆಯ್ಕೆಯು ಸುಳ್ಯ ತಾಲೂಕು ಅದ್ಯಕ್ಷರ ಸಮ್ಮುಖದಲ್ಲಿ ನಡೆಯಿತು.
ಬಿ.ಎಂ.ಎಸ್ ಕಲ್ಲುಗುಂಡಿ ಘಟಕದ ನೂತನ ಅದ್ಯಕ್ಷರಾಗಿ ಜಗದೀಶ್ ಗೂನಡ್ಕ, ಕಾರ್ಯದರ್ಶಿಯಾಗಿ ಜಗದೀಶ್ ಕೊಯನಾಡು, ಖಜಾಂಜಿಯಾಗಿ ಕೃಷ್ಣಪ್ರಸಾದ್ ಕಾಪಿಲ, ಗೌರವ ಅದ್ಯಕ್ಷರಾಗಿ ಕೇಶವ ಬಂಗ್ಲೆಗುಡ್ಡೆ ಕಲ್ಲುಗುಂಡಿ, ಸ್ಥಾಪಕಾದ್ಯಕ್ಷರಾಗಿ ವಸಂತ ಊರುಬೈಲ್, ಉಪಾದ್ಯಕ್ಷರಾಗಿ ಚಂದ್ರಶೇಖರ ಕೈಪಡ್ಕ, ಜತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಪೆರಂಗೋಡಿ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಭಾಕರ ಕಾಡುಪಂಜ, ನಿರ್ದೆಶಕರಾಗಿ ಯಶೋಧರ ಕಡೆಪಾಲ, ರಮೇಶ್ ನೆಲ್ಲಿಕುಮೇರಿ, ಸತೀಶ್ ಕಡೆಪಾಲ ಅವರನ್ನು ಸಂಘದ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದರು.
ಸಭೆಯಲ್ಲಿ10 ವರ್ಷಗಳಿಂದ ತಾಲೂಕು ಅದ್ಯಕ್ಷರಾಗಿದ್ದ ರಾದಕೃಷ್ಣ ಬೈತಡ್ಕ ಅವರನ್ನು ಸನ್ಮಾನಿಸಲಾಯಿತು.
ರವಿಕುಮಾರ್ ವಂದನಾರ್ಪಣೆ ಮಾಡಿದರು.
ರಾಷ್ಟಗೀತೆಯ ಹಾಡಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading