Ad Widget

ಗಲಭೆಕೋರರಿಂದಲೇ ನಷ್ಟ ಭರಿಸಬೇಕು ಹಾಗೂ ಅಂತಹ ಸಂಘಟನೆಗಳನ್ನು ನಿಷೇಧಿಸುವಂತೆ ಶಾಸಕರು ಹಾಗೂ ತಹಶೀಲ್ದಾರ್ ಗೆ ಎಬಿವಿಪಿ ಮನವಿ

ಬೆಂಗಳೂರಿನ ನಡೆದ ಘಟನೆ ಪೂರ್ವ ಯೋಜಿತವಾದದ್ದು ಈ ವೇಳೆ ಆದಂತಹ ಸಾರ್ವಜನಿಕ ಆಸ್ತಿ ಪಾಸ್ತಿ ನಾಶದ ಒಂದೊಂದು ರೂಪಾಯಿಯನ್ನು ಕೂಡ ಜಿಹಾದಿಗಳ ಮನೆ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಅಥವಾ ಅವರಿಗೆ ಬೆಂಬಲಿಸಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ನಷ್ಟವನ್ನು ಭರಿಸಬೇಕು.
ಎಷ್ಟು ಆಸ್ತಿ ಪಾಸ್ತಿ ನಾಶವಾಯಿತು ಮತ್ತು ಎಷ್ಟು ಹಣವನ್ನು ಭರಿಸಲಾಗಿದೆ ಎಂದು ಸಾರ್ವಜನಿಕವಾಗಿ ಸರ್ಕಾರ ಬಹಿರಂಗ ಪಡಿಸಲೇಬೇಕು. ಉತ್ತರ ಪ್ರದೇಶ ಮಾದರಿಯಂತೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದವರಿಂದಲೇ ನಷ್ಟವನ್ನು ತುಂಬಿಕೊಳ್ಳುವ ಕಾನೂನನ್ನು ರಾಜ್ಯದಲ್ಲೂ ಜಾರಿಗೊಳಿಸಿ ಅದರಂತೆ ದೊಂಬಿ ನಡೆಸಿದವರಿಂದಲೇ ಒಟ್ಟು ವೆಚ್ಚ ವಸೂಲಿ ಮಾಡಬೇಕು.
ರಾಜ್ಯದಲ್ಲಿ ಶಾಂತಿ ಕದಡುವ ಯತ್ನ ಮಾಡಿದ ಎಸ್ ಡಿ ಪಿ ಐ ಸಂಘಟನೆ,ಪಿ ಎಫ್ ಐ ಸಂಘಟನೆ ಮತ್ತು ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಸಹಕರಿಸಿದ ಇತರ ಸಂಘಟನೆಯನ್ನು ಬ್ಯಾನ್ ಮಾಡಬೇಕು ಹಾಗೂ ಪಾಲ್ಗೊಂಡ ಎಲ್ಲರನ್ನು ಕಠಿಣ ಶಿಕ್ಷೆ ವಿಧಿಸುವ ಮೂಲಕ ಜನತೆಗೆ ಧೈರ್ಯದ,ಕಾನೂನಿನ ಮೇಲೆ ನಂಬಿಕೆ ಹೆಚ್ಚಿಸುವ ಸಂದೇಶವನ್ನು ಸರಕಾರ ನೀಡಬೇಕು. ನಮ್ಮ ತೆರಿಗೆಯ ಹಣದ ಸಾರ್ವಜನಿಕ ಆಸ್ತಿಪಾಸ್ತಿ ಪುಂಡರ ಪುಂಡಾಟಕ್ಕೆ ಬಲಿಯಾಗುವುದನ್ನ ಸಹಿಸಿಕೊಳ್ಳೇವು ಸರಕಾರ ಜವಾಬ್ದಾರಿಯುತವಾಗಿ ನಡೆದುಕೊಂಡು ಗಲಭೆ ಸೃಷ್ಟಿಸಿದ ಪುಂಡರ ಹೆಡೆಮುರಿ ಕಟ್ಟಬೇಕು ಹಾಗೂ ನಷ್ಟದ ಹಣವನ್ನು ಅವರಿಂದಲೇ ಭರಿಸಿಕೊಳ್ಳಬೇಕು. ಮುಖ್ಯವಾಗಿ ಯಾವುದೇ ಪಕ್ಷಗಳು ವೋಟ್ ಬ್ಯಾಂಕ್ ಗಾಗಿ,ಮೃದು ಧೋರಣೆ ತೋರಿ,ತನಿಖೆ ಹತ್ತಿಕ್ಕಲು ಪ್ರಯತ್ನಿಸಬಾರದು.ಹಾಗೂ ರಾಜ್ಯ ಸರ್ಕಾರ ಇಂತಹ ಆಮಿಷಕ್ಕೆ ತಲೆದೂಗಕೂಡದು ಎಂದು ಎಬಿವಿಪಿ ಸರ್ಕಾರವನ್ನು ಆಗ್ರಹಿಸಿದೆ.

. . . . . . .

ಈ ಮನವಿಯನ್ನು ರಾಜ್ಯ ಸರಕಾರಕ್ಕೆ ತಲುಪಿಸುವಂತೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಅಂಗಾರ ಎಸ್ ಇವರಲ್ಲಿ ವಿನಂತಿಸಲಾಯಿತು.

ಈ ಬಗ್ಗೆ ರಾಜ್ಯದ ಗೃಹ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ಶಾಸಕ ಅಂಗಾರ ಎಸ್ ಇವರು ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಎಬಿವಿಪಿ ಸುಳ್ಯ ತಾಲೂಕ್ ಸಂಚಾಲಕ್ ಧನ್ಯರಾಜ್ ಕಾಪುಮಲೆ, ಸುಳ್ಯ ಅಧ್ಯಯನ ವೃತ್ತ ಪ್ರಮುಖ್ ನೋಹಿತ್ ನಿಡ್ಯಮಲೆ,ಹಾಗೂ ಕಾರ್ಯಕರ್ತರಾದ ರಕ್ಷಿತ್ ಶೀರಡ್ಕ ಮತ್ತು ಹೇಮಂತ್ ದೊಡ್ಡೇರಿ ಉಪಸ್ಥಿತರಿದ್ದರು. ಹಾಗೂ ಶಾಸಕರ ಜೊತೆ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಹರೀಶ್ ಕಂಜಿಪಿಲಿ, ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಚನಿಯ ಕಲ್ತಡ್ಕ, ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!