ಕಲ್ಲಡ್ಕದ ಯುವಕ ಗೂನಡ್ಕದಲ್ಲಿ ಆತ್ಮಹತ್ಯೆ

ಕಲ್ಲಡ್ಕದ ಯುವಕನೋರ್ವ ಗೂನಡ್ಕದ ಕೊಠಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ ತಿಲಕರಾಜ್ (29) ಎಂದು ಗುರುತಿಸಲಾಗಿದೆ.
ತಿಲಕರಾಜ್ ಅವರು ಮಾ.20 ರಂದು ಸಂಜೆ ಕಲ್ಲಡ್ಕದಿಂದ ಮಡಿಕೇರಿಗೆ ತೆರಳುವುದಾಗಿ ಹೇಳಿ ತಮ್ಮ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಮಾರ್ಗಮಧ್ಯೆ ಗೂನಡ್ಕದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ತಂಗಿದ್ದರು. ಮಾ.21 ರಂದು ಬೆಳಗ್ಗೆ ದೀರ್ಘ ಸಮಯದವರೆಗೆ ಕೊಠಡಿಯ ಬಾಗಿಲು ತೆರೆಯದಿದ್ದಾಗ ಸಂಶಯಗೊಂಡು ಪರಿಶೀಲಿಸಿದಾಗ ಆತ್ಮಹತ್ಯೆಯ ವಿಚಾರ ಬೆಳಕಿಗೆ ಬಂದಿದೆ. ಇವರು ಕಲ್ಲಡ್ಕದಲ್ಲಿ ಪಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading