Ad Widget

ಸ್ವರ್ಣಶ್ರೀ ಸೊಸೈಟಿ ವತಿಯಿಂದ ಬಹುಮಾನ ವಿತರಣೆ

ಸುಳ್ಯ ನಗರದ ರಥ ಬೀದಿಯ ವಿನಾಯಕ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಮಾರ್ಚ್ 02 ರಿಂದ 14 ರವರೆಗೆ ಠೇವಣಿಗಳ ಮೇಲೆ ವಿಶೇಷ ಬಡ್ಡಿ ದರವನ್ನು ಪ್ರಕಟಿಸಿ ಠೇವಣಿ ಅಭಿಯಾನವನ್ನು ಕೈಗೊಂಡಿತ್ತು. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಗಳನ್ನು ಹಾಕಿ 100ಕ್ಕಿಂತ ಅಧಿಕ views ಬಂದವರು Screen Shot ಕಳುಹಿಸುವಂತೆ ವಿನಂತಿಸಲಾಗಿತ್ತು. ಮತ್ತು ಅದರಲ್ಲಿ ಒಬ್ಬ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ನೀಡುವುದೆಂದು ಘೋಷಿಸಲಾಗಿತ್ತು. ಇದರಲ್ಲಿ ವಿಜೇತರಾದ ಅದೃಷ್ಟಶಾಲಿ ಸೋಮಶೇಖರ ಪೈಕ ಇವರಿಗೆ ಹಾಗೂ ಅತಿ ಹೆಚ್ಚು views ಅನ್ನು ಕಳುಹಿಸಿದ ಕುಲದೀಪ್ ಪೆಲ್ತಡ್ಕ ಮತ್ತು ನವೀನ್ ಪೈಲೂರು ಇವರಿಗೆ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ ಅಧ್ಯಕ್ಷರಾದ ಜನಾರ್ಧನ ದೋಳ ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ಚ್ರಪ್ಪಾಡಿ ನಿರ್ದೇಶಕರಾದ ಪ್ರಕಾಶ್ ಕೇರ್ಪಳ ಸಿಬ್ಬಂದಿ ಜೋತ್ಸ್ನಾ ಮಂದ್ರಪ್ಪಾಡಿ ಉಪಸ್ಥಿತರಿದ್ದರು. Status ಗಳನ್ನು ಹಾಕಿ ಪ್ರಚಾರ ಪಡಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಸಹಕಾರಿಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading