ಯುವಸ್ಪೂರ್ತಿ ಸೇವಾ ಸಂಘ (ರಿ). ಕಲ್ಮಡ್ಕ ಇದರ ವತಿಯಿಂದ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಭಿನ್ನವಾಗಿ ಸರಳ ರೀತಿಯಲ್ಲಿ ಆಚರಣೆ ಆ.16 ರಂದು ನಡೆಯಿತು.
ಕಳೆದ ಐದು ವರ್ಷಗಳಿಂದ ನಿರಂತರ ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ, ಸಹಕಾರ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಯುವಸ್ಪೂರ್ತಿ ಸೇವಾ ಸಂಘ (ರಿ) ಕಲ್ಮಡ್ಕ ಇದರ ವತಿಯಿಂದ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಕೋವಿಡ್-19 ಕಾರಣದಿಂದಾಗಿ ಗ್ರಾಮ ಪಂಚಾಯತ್ ಕಲ್ಮಡ್ಕ ಇದರ ಸಹಯೋಗದೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಡ್ಕ ಇಲ್ಲಿಯ ಪರಿಸರ ಸ್ವಚ್ಛಗೊಳಿಸುವುದರೊಂದಿಗೆ ಗ್ರಾಮ ಪಂಚಾಯತ್ ಕಲ್ಮಡ್ಕ ಇದರ ಸಹಭಾಗಿತ್ವದೊಂದಿಗೆ 150ಕ್ಕೂ ಹೆಚ್ಚು ಹಣ್ಣು ಹಂಪಲುಗಳ ಸಸಿಗಳನ್ನು ನೆಡಲಾಯಿತು.
ಆ.16 ರಂದು ನಡೆದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಸ್ಪೂರ್ತಿ ಸೇವಾ ಸಂಘ (ರಿ) ಕಲ್ಮಡ್ಕ ಇದರ ಅಧ್ಯಕ್ಷರಾದ ಅಶೋಕ್ ಗೋಳ್ತಾಜೆ ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲಾ ಕೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯರಾದ ಅಬ್ದುಲ್ ಗಫೂರ್ ಕಲ್ಮಡ್ಕ , ಕಲ್ಮಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ , ಶಾಲಾಭಿವೃಧ್ಧಿ ಸಮಿತಿಯ ಅಧ್ಯಕ್ಷರಾದ ಕೃಷ್ಣಪ್ಪ ಜೋಗಿಬೆಟ್ಟು ಉಪಸ್ಥಿತರಿದ್ದು ತಮ್ಮ ವಿಭಿನ್ನ ರೀತಿಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಕಲ್ಮಡ್ಕ ಇದರ ವತಿಯಿಂದ 150ಕ್ಕೂ ಹೆಚ್ಚು ಹಣ್ಣು ಹಂಪಲುಗಳ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ ಚೆಟ್ಟಿಯಾರ್ ಪೆರಿಯಪ್ಪು ಹಾಗೂ ಸಾರ್ವಜನಿಕ ಗಣೇಶೋತ್ಸವ ನವೋದಯ ಸಂಘದ ಅಧ್ಯಕ್ಷರಾದ ಶಿವರಾಮ ಬಿ ಕಲ್ಮಡ್ಕ ಇವರು ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಕಾಚಿಲ ದೇವತಾ ಪ್ರಾರ್ಥನೆಯನ್ನು ನೆರವೇರಿಸಿದರು. ಶಾಲೆಯ ಶಿಕ್ಷಕಿ ಶ್ರೀಮತಿ ವಜ್ರಾಕ್ಷಿ ಶ್ರೀಕಾಂತ್ ಕಲ್ಮಡ್ಕ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸಂಘದ ಸ್ಥಾಪಕ ಅಧ್ಯಕ್ಷರಾದ ಶೇಷಪ್ಪ ಎ ವಿ ಮಾಳಪ್ಪಮಕ್ಕಿ ಸ್ವಾಗತಿಸಿ , ಸಂಘದ ಸದಸ್ಯರಾದ ಜಯಂತ ಆರ್ ಕೆ ಧನ್ಯವಾದ ನೆರವೇರಿಸಿದರು. ಸಂಘದ ಸದಸ್ಯರಾದ ಸಚಿತ್ ಕಲ್ಮಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು. 50ಕ್ಕೂ ಹೆಚ್ಚು ಸಂಘದ ಸದಸ್ಯರು ಹಾಗೂ ಊರವರ ಸಹಕಾರದೊಂದಿಗೆ ಕರಸೇವೆಯನ್ನು ಅಭೂತಪೂರ್ವವಾಗಿ ನೆರವೇರಿಸಿದರು.
- Thursday
- November 7th, 2024