Ad Widget

ಸುಬ್ರಹ್ಮಣ್ಯದಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಟ್ರೇಡ್ ದ.ಕ ಯೂನಿಯನ್ ಕ್ರಿಕೆಟ್ ಪಂದ್ಯಾಟ

ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಟ್ರೇಡ್ ಯೂನಿಯನ್ ದಕ್ಷಿಣ ಕನ್ನಡ ವತಿಯಿಂದ ಕೆ.ಟಿ.ಡಿ.ಒ ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಪಂದ್ಯಾಟ ಸುಬ್ರಹ್ಮಣ್ಯದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು. ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಅವರು ದೀಪ ಬೆಳಗಿಸುವ ಮೂಲಕ ಪಂದ್ಯಾಟ ಉದ್ಘಾಟಿಸಿ ಕೆಲ ಹೊತ್ತು ಕ್ರಿಕೆಟ್ ಆಟವನ್ನು ಆಡಿದರು. ಈ ಸಂಧರ್ಭದಲ್ಲಿ ಸಭೆಯಲ್ಲಿ ಯೂನಿಯನ್ ನ ಜಿಲ್ಲಾಧ್ಯಕ್ಷರಾದ ಸಂದೀಪ್ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗೌರವಾಧ್ಯಕ್ಷರಾದ ಇಕ್ಬಾಲ್ ಬಿ.ಸಿ.ರೋಡ್, ಜಿಲ್ಲಾ ಗೌರವಾಧ್ಯಕ್ಷರಾದ ಶರತ್ ಕಿರಣ್, ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು. ಸಂದೇಶ್ ಪ್ರಾರ್ಥಿಸಿದರು. ಕುಸುಮಾಧರ ಸ್ವಾಗತಿಸಿ, ಸಂತೋಷ್ ಕೊಲ್ಯ ಕಾರ್ಯಕ್ರಮ ನಿರೂಪಿಸಿದರು. 

. . . . . . . . .

ಕ್ರಿಕೆಟ್ ಆಟ ಅರೂಗ್ಯದಾಯಕ ಆಟ : “ಕ್ರಿಕೆಟ್ ಆಡುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮತ್ತು ಇದರಿಂದ ದೇಹದಲ್ಲಿ ಉಲ್ಲಾಸ ಮೂಡುವುದು, ಆದ್ದರಿಂದ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಟ್ರೇಡ್ ದಕ್ಷಿಣ ಕನ್ನಡ ಇದರ ಎಲ್ಲ ಸದಸ್ಯರು ಬಹಳ ಅಚ್ಚುಕಟ್ಟಾಗಿ ಕಾರ್ಯ ಕ್ರಮವನ್ನು ಆಯೋಜಿಸಿದ್ದೀರಿ, ಮತ್ತು ಎಲ್ಲ ಧರ್ಮದವರು ಈ ಆಟದಲ್ಲಿ ಭಾಗಿಯಾಗಿದ್ದೀರಿ, ಮತ್ತು ನಿಮ್ಮಲ್ಲಿನ ಒಗ್ಗಟ್ಟು ಸಮಾಜದ ಜನರಿಗೆ ಮಾದರಿ ಆಗಲಿ.” ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹೇಳಿದರು.

. . . . . . .

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಸಾದಿಕ್ ಕುಳಾಯಿ ವಹಿಸಿದ್ದರು. 

ಕೋಟಿ ಬೆಲೆ ಬಾಳುವ ವಾಹನ ಇದ್ದರೂ ಡ್ರೈವರ್ ಇಲ್ಲದೆ ಪ್ರಯಾಣ ಸಾಧ್ಯವಿಲ್ಲ : “ದುಬಾರಿ ವೆಚ್ಚದ ಕಾರುಗಳಿದ್ದರೂ ಡ್ರೈವರ್ ಇಲ್ಲದೆ ಸಂಚಾರ ಅಸಾಧ್ಯ. ನಾವು ಎಲ್ಲೇ ಹೋಗಬೇಕಿದ್ದರು ಚಾಲಕರು ತಮ್ಮ ಕರ್ತವ್ಯವನ್ನು ರಾತ್ರಿ ಹಗಲೆನ್ನದೆ ಎಷ್ಟೇ ಒತ್ತಡಗಳಿದ್ದರೂ ನಮ್ಮನ್ನು ಸುರಕ್ಷಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಹಳ ಜಾಗರೂಕತೆಯಿಂದ ಕರೆದುಕೊಂಡು ಹೋಗುವವರು. ಚಾಲಕರು ಮತ್ತು ರಸ್ತೆ ಅಪಘಾತ, ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ಆಂಬುಲೆನ್ಸ್ ಸೇವೆಯನ್ನು ನೀಡುತ್ತಿರುವುದು ಇದು ಒಳ್ಳೆಯ ಕೆಲಸವೆಂದು” ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ ಹೇಳಿದರು. 

ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಡಾ.ರವಿ ಕಕ್ಕೆಪದವು, ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಕುಸುಮಾಧರ ಕೆ.ಆರಾಧನಾ, ರಾಜ್ಯ ಸಹಕೋಷಾಧಿಕಾರಿ ಹರೀಶ್ ಪುತ್ರನ್, ವಲಯ 21ರ ತಾಲೂಕು ಅಧ್ಯಕ್ಷರಾದ ಕಿಶೋರ್ ಕುಮಾರ್, ವಲಯ 70ರ ತಾಲೂಕು ಅಧ್ಯಕ್ಷರಾದ ಗಿರೀಶ್ ಬೆಳ್ತಂಗಡಿ, ವಲಯ 19ರ ತಾಲೂಕು ಅಧ್ಯಕ್ಷರಾದ ಕನಕ ಕೇಶವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು. 

ಈ ಸಂಧರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು. ಈ ಪಂದ್ಯಾಟದಲ್ಲಿ ವಲಯ 19 ಸಿಟಿ ತಂಡ ಪ್ರಥಮ ಸ್ಥಾನ ಪಡೆಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading