ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.), ಸಹಕಾರ ಭಾರತಿ ದ.ಕ., ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಎ.ಪಿ.ಯಂ.ಸಿ ಸಭಾಂಗಣದಲ್ಲಿ ನಡೆದ ಮೂರನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಸಮಾರೋಪ ಆ.15 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್ ಅಂಗಾರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ನ.ಸೀತಾರಾಮ ಆಗಮಿಸಿ, ಮಾತನಾಡಿದರು. ವೇದಿಕೆಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರಸನ್ನ ಭಟ್, ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ಸುಳ್ಯ ತಾಲೂಕು ಸಂಘಚಾಲಕ್ ಚಂದ್ರಶೇಖರ ಭಟ್ ತಳೂರು, ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಗೋಪಾಲಕೃಷ್ಣ ಕರೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ವಿಕಾಸ ಸಮಿತಿಯು ತಾಲೂಕು ಅಧ್ಯಕ್ಷ ಪ್ರವೀಣ್ ರಾವ್ ಸ್ವಾಗತಿಸಿ , ಶಿಬಿರದ ಸಂಯೋಜಕ ರಾಜೇಶ್ ಮೇನಾಲ ಪ್ರಸ್ತಾವನೆಗೈದರು . ಗ್ರಾಮ ವಿಕಾಸ ಸಮಿತಿಯ ತಾಲೂಕು ಸಂಚಾಲಕ ವಿನೋದ್ ಬೊಳ್ಮಲೆ ವಂದಿಸಿದರು. ಸುದರ್ಶನ ಪಾತಿಕಲ್ಲು ನಿರೂಪಿಸಿದರು.
*ಒಟ್ಟು 243 ಜನ ತರಬೇತಿ*
ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಮೂರನೇ ಹಂತದ ತರಬೇತಿ ಶಿಬಿರದಲ್ಲಿ ಪ್ಯಾಬ್ರಿಕೇಷನ್ , ಅಡುಗೆ ತಯಾರಿ , ಕಸಿ ಕಟ್ಟುವ ಮೂರನೇ ಹಂತದಲ್ಲಿ 83 ಶಿಬಿರಾರ್ಥಿಗಳು ಭಾಗವಹಿಸಿ ತರಬೇತಿ ಪಡೆದರು. 18 ದಿನಗಳ ಕಾಲ ನಡೆದ ಮೂರು ಹಂತದ ತರಬೇತಿಗಳಲ್ಲಿ 11 ವೃತ್ತಿ ವಿಭಾಗಗಳಲ್ಲಿ ಒಟ್ಟು 243 ಮಂದಿ ತರಬೇತಿ ಪಡೆದು ಸ್ವಾವಲಂಬಿ ಜೀವನ ನಡೆಸಲು ತಯಾರಾಗಿದ್ದಾರೆ.