🇮🇳 74 ನೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
🇮🇳 ಹೋರಾಟಗಾರರ ವಿರೋಚಿತ ಹೋರಾಟದಿಂದ ದಕ್ಕಿತು ಸ್ವಾತಂತ್ರ್ಯ
🇮🇳 ಹೋರಾಟದಲ್ಲಿ ತುಳುನಾಡಿನ ಜನರ ಹೋರಾಟ ಅವಿಸ್ಮರಣೀಯ
೧೭೫೭ ರಿಂದ ಸುಮಾರು ೧೯೦ ವರ್ಷಗಳ ಕಾಲ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಲು ಹಲವಾರು ಜನರ ವಿರೋಚಿತ ಹೋರಾಟ, ಬಲಿದಾನದಿಂದ ಸಾಧ್ಯವಾಗಿದೆ. ಈ ಹಿಂದೆ ವಿಜ್ರಂಭನೆಯಿಂದ ನಡೆಯುತ್ತಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಈ ವರ್ಷ ಕರೋನದಿಂದಾಗಿ ಕಳೆ ಗುಂದಿದೆ. ಪ್ರತಿ ವರ್ಷ ಕೆಂಪು ಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ ಮಾಡಿದ ನಂತರ ನಡೆಯುತ್ತಿದ್ದ ಸೇನಾ ಪಡೆಗಳ ಪಥ ಸಂಚಲನ, ಬ್ಯಾಂಡ್ ವಾದ್ಯಗಳು ,ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವರ್ಷ ಇರುವುದಿಲ್ಲ.
ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರಿಗಳಾಗಿ ಭಾರತಕ್ಕೆ ಬಂದಿದ್ದ ಬ್ರಿಟೀಷರು ೧೭೫೭ ಅಧಿಕೃತವಾಗಿ ಅಧಿಪತ್ಯ ಸ್ಥಾಪಿಸಿದರು. ಬ್ರಿಟೀಷರು ತಮ್ಮ ವ್ಯಾಪಾರ ವಹಿವಾಟುಗಳನ್ನು ಭಾರತಾದ್ಯಂತ ವಿಸ್ತರಿಸಿದರು. ಆದರೆ ಅಲ್ಲಲ್ಲಿ ಬ್ರಟೀಷರಿಗೆ ಪ್ರತಿರೋಧಗಳು ವ್ಯಕ್ತವಾಗುತ್ತಿತ್ತು.ಗಾಂಧಿಜಿವರ ಅಹಿಂಸಾತ್ಮಕ ಹೋರಾಟ, ಸುಭಾಷ್ ಚಂದ್ರ ಬೋಸ್ ಅವರ ಮಿಲಿಟರಿ ಹೋರಾಟ, ಭಗತ್ ಸಿಂಗ್ ಅವರ ಕ್ರಾಂತಿಕಾರಿ ಹೋರಾಟ ಬ್ರಿಟಿಷರಿಗೆ ಸವಲಾಗಿ ಪರಿಣಮಿಸಿತು. ಅಂತಿಮವಾಗಿ ೧೯೪೭ ಅಗಸ್ಟ್ ೧೫ ರಂದು ಭಾರತಕ್ಕೆ ಸ್ವಾತಂತ್ರ್ಯ ದಕ್ಕಿತು. ತದನಂತರ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಕೆಂಪು ಕೋಟೆಯಲ್ಲಿ ಭಾರತದ ನೂತನ ಧ್ವಜಾರೋಹಣ ಮಾಡಿದರು.
🇮🇳 ಜನರ ಹೋರಾಟ
೧೬೧೮ ರಲ್ಲಿ ಮಂಗಳೂರು ಉಲ್ಲಾಲದ ರಾಣಿಯಾಗಿದ್ದ ರಾಣಿ ಅಬ್ಬಕ್ಕ ಸ್ಥಳೀಯ ಮೊಗವೀರರ ಸೈನ್ಯದೊಂದಿಗೆ ಸೇರಿ ಪೋರ್ಚುಗೀಸರ ಜೊತೆ ಹೋರಾಡಿ ಜಯ ಸಾಧಿಸಿದಳು . ಆದರೂ ನಂತರ ಪೋರ್ಚುಗೀಸರಿಗೆ ಶರಣಾದಳು . ೧೮೦೦ ರಲ್ಲಿ ಟಿಪ್ಪು ಬೆಂಬಲಿಗ ದೊಂಡಜಿ ವಾಘ ಶಿಕಾರಿಪುರದಿಂದ ಬ್ರಿಟಿಷ್ ರ ವಿರುದ್ಧ ಬಂಡಾಯ ಆರಂಭಿಸಿದ ಆತನ ಬೆಂಬಲಿಗ ತಿಮ್ಮಪ್ಪ ನಾಯ್ಕ ಗಡಾಯಿಕಲ್ಲು ಕೋಟೆಯಿಂದ ಬ್ರಿಟೀಷರನ್ನು ಸತತ ಮೂರು ಬಾರಿ ಸೋಲಿಸಿ ನಂತರ ಸೊಲೊಪ್ಪಿಕೊಂಡ . ಟಿಪ್ಪು ಬೆಂಬಲಿಗ ಬಂಟ್ವಾಳದ ವೀರಕಂಬ ಸಾದು ಬ್ಯಾರಿ ಬಂಟ್ವಾಳ ದಲ್ಲಿ ಮತ್ತು ಉದ್ಯಾವರದಲ್ಲಿ ಬೆಂಬಲಿಗರೊಂದಿಗೆ ವಿರೋಧಿಸಿ ಸೋಲಬೇಕಾಯಿತು. ೧೮೩೦ ರಲ್ಲಿ ತುಳುನಾಡಿನ ರೈತರು ಬ್ರಿಟೀಷರ ವಿರುದ್ಧ ದಂಗೆ ಎದ್ದರು. ೧೮೩೭ ರಲ್ಲಿ ಕುಂಬಳೆ ಸುಬ್ರಾಯ ಹೆಗ್ಗಡೆ, ಮೇಲ್ಕೊಡಗಿನ ಕುರ್ತು ಕುಡಿಯ ಮತ್ತು ಚೆಟ್ಟಿ ಕುಡಿಯ ಸಹೋದರರು ಬ್ರಿಟಿಷ್ ರ ಗುಂಡಿಗೆ ಬಲಿಯಾದರು. ಬಂಗಾಡಿಯ ಲಕ್ಷಪ್ಪರಸ ಹಾಗೂ ಶನಿವಾರ ಸಂತೆಯ ಪುಟ್ಟ ಬಸಪ್ಪ ಮತ್ತು ಕಾಸರಗೋಡಿನ ಬೀರಣ್ಣ ಎಂಬವರನ್ನು ಹಿಡಿದು ಬಿಕರ್ಣಕಟ್ಟೆಯಲ್ಲಿ ಗಲ್ಲಿಗೇರಿಸಲಾಯಿತು. ಉಬರಡ್ಕ ಕೆದಂಬಾಡಿಯ ರಾಮೇ ಗೌಡ, ಹುಲಿ ಹಿಡಿದ ನಂಜಯ್ಯ , ಪುಟ್ಟ ಬಸಪ್ಪರೊಂದಿಗೆ ತುಳುನಾಡಿನ ಅರೆ ಭಾಷೆ ಗೌಡರು, ಬಂಟರು, ಜೈನರು, ಮಲೆಕುಡಿಯರು,ಬ್ಯಾರಿಗಳು ಅಲ್ಲದೆ ವಿವಿಧ ಸಮುದಾಯದ ವೀರ ಪುರುಷರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. ಜನರೆಲ್ಲ ಒಟ್ಟು ಸೇರಿ ಬೆಳ್ಳಾರೆ ಮತ್ತು ಪುತ್ತೂರಿನ ಬ್ರಿಟೀಷರ ಖಜಾನೆ ಲೂಟಿ ಮಾಡಿದರು. ಬೆಳ್ಳಾರೆ ಬಾವುಟ ಗುಡ್ಡೆಯಲ್ಲಿ ಬ್ರಿಟಿಷ್ ರ ಧ್ವಜವನ್ನು ಕೆಳಗಿಳಿಸಿದರು.ಒಟ್ಟಿನಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ತುಳುನಾಡಿನ ಜನರ ಹೋರಾಟದ ನೆನಪು ಅಜರಾಮರ.
ಭಾಸ್ಕರ ಜೋಗಿಬೆಟ್ಟು
ಪ್ರಸಾರ ಪ್ರಚಾರ ಪ್ರಮುಖ್ ವಿಶ್ವ ಹಿಂದು ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ