Ad Widget

ಕೇಂದ್ರದಿಂದಲೇ ರಾಜ್ಯಗಳಿಗೆ ಕೊರೊನ ಲಸಿಕೆ ಹಂಚಿಕೆಗೆ ನಿರ್ಧಾರ

ನವದೆಹಲಿ : ಕೊರೊನಾ ಸೋಂಕಿತರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಕೊರೊನಾ ವೈರಸ್ ಸದೆಬಡಿಯುವ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಖರೀದಿ ಹಾಗೂ ವಿತರಣೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಹೌದು, ಕೊರೊನಾ ಲಸಿಕೆಯನ್ನು ತಾನೇ ಖರೀದಿಸಿ ಎಲ್ಲ ರಾಜ್ಯಗಳಿಗೆ ವಿತರಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ಲಸಿಕೆ ವಿಚಾರವಾಗಿ ರಚಿಸಲಾಗಿರುವ ಕಾರ್ಯಪಡೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಲಸಿಕೆ ಸಂಗ್ರಹಕ್ಕೆ ಬೇರೆ ಇನ್ನು ಯಾವುದೇ ಮಾರ್ಗಗಳನ್ನು ಕಂಡುಕೊಳ್ಳದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಕ ಸೂಚಿಸಲಾಗಿದೆ. ಸರ್ಕಾರವೇ ಔಷಧ ಕಂಪನಿಗಳಿಂದ ಲಸಿಕೆಯನ್ನು ಖರೀದಿಸಿ ಸಾರ್ವಜನಿಕರಿಗೆ ನೀಡಲಿದೆ ಎಂದು ಪುಣೆಯ ಸಿಎಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಮುಖ್ಯಸ್ಥ ಆದಾರ್​ ಪೂನಾವಾಲಾ ಈ ಹಿಂದೆ ಹೇಳಿದ್ದರು.
ಇದೀಗ ಸ್ವತಹ ಕೇಂದ್ರ ಸರ್ಕಾರ ಕೊರೊನಾ ಲಸಿಕೆಯನ್ನು ತಾನೇ ಖರೀದಿಸಿ ಎಲ್ಲ ರಾಜ್ಯಗಳಿಗೆ ವಿತರಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!