ವ್ಯಕ್ತಿ ನಿರ್ಮಾಣದಿಂದ ಅಖಂಡತೆ ಸಾಧ್ಯ, ದೇಶ ಅಖಂಡತೆಯಲ್ಲಿ ಸಫಲ ಆಗೋದು ಶತ ಸಿದ್ದ. ಆದರೆ ನಮ್ಮ ಅಚಲ ನಿಷ್ಠೆ ಹಾಗೂ ಸಮಾಜದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನು ರಾಮನ ತತ್ವಾದರ್ಶಗಳನ್ನು ಪಾಲಿಸಿಕೊಂಡು ವ್ಯಕ್ತಿ ನಿರ್ಮಾಣದತ್ತ ಸಾಗಿದ್ದೆ ಆದರೆ ಅಖಂಡತೆಯತ್ತ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಯತೀಶ್ ಆರ್ವಾರ ಹೇಳಿದರು.
ಅವರು ಆ.14 ರಂದು ಸಂಜೆ ಬೆಳ್ಳಾರೆ ಯಲ್ಲಿ ಬೆಳ್ಳಾರೆ ವಲಯ ಹಿಂದೂ ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ 16 ನೇ ವರ್ಷದ “ಭಾರತ ಮಾತಾ ಪೂಜನ” ಕಾರ್ಯಕ್ರಮದಲ್ಲಿ ಬೌದ್ಧೀಕ್ ನೀಡಿದರು. ರಾಮಜನ್ಮ ಭೂಮಿಯಲ್ಲೇ ರಾಮ ಮಂದಿರ ಸ್ಥಾಪಿಸಲು ಎಷ್ಟೋ ವರ್ಷಗಳ ಹೋರಾಟ, ಹಿರಿಯರು ಕೊಟ್ಟ ಸಮಯ, ಎಷ್ಟೋ ಕಾರ್ಯಕರ್ತರ ಬಲಿದಾನ ಆಗಿದೆ ಎಂದರು.
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಪ್ರಧಾನ ಕಾರ್ಯದರ್ಶಿ, ಸಂತೋಷ್ ಕೊಡಿಯಾಲ,ಹಾಗೂ ಪ್ರಚಾರ ಪ್ರಮುಖ್ ಚಂದು ಕೊಡಿಯಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಾಗರಣ ವೇದಿಕೆಯ ಪ್ರಮುಖ್ ಜಯಂತ್ ಮಡಪ್ಪಾಡಿ, ಹಿರಿಯರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆ ,ಶ್ರೀಮತಿ ಯಶೋದ ಪ್ರಭು ಏನಡ್ಕ ಪೆರುವಾಜೆ,ಸತ್ಯನಾರಯಣ ಭಟ್ ಕೋಡಿಬೈಲು, ಚಂದ್ರಶೇಖರ ಪನ್ನೆ ,ಪದ್ಮನಾಭ ಶೆಟ್ಟಿ ಪೆರುವಾಜೆ,ಮೋನಪ್ಪ ತಂಬಿನಮಕ್ಕಿ , ರಾಷ್ಟ್ರೀಯ ಸ್ವಯಂ ಸೇವ ಸಂಘ ಬೆಳ್ಳಾರೆ ಮಂಡಲ ಇದರ ಕಾರ್ಯವಾಹರಾದ ರಜನೀಶ್ ಪೆರುವಾಜೆ ,ವಿಶ್ವ ಹಿಂದು ಪರಿಷತ್,ಬಜರಂಗದಳ ಇದರ ಬೆಳ್ಳಾರೆ ವಲಯ ಸಂಚಾಲಕರಾದ ಸಚಿನ್ ರೈ ಪೂವಾಜೆ ಪಾಲ್ಗೊಂಡಿದ್ದರು. ಕು. ಶ್ರುತಕೀರ್ತಿ ಇವರ ವೈಯಕ್ತಿಕ ಗೀತೆಯೋದಿಗೆ , ದೀಪ ಪ್ರಜ್ವಲನ, ಪಂಜು ಬೆಳಗಿಸುವಿಕೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ವೀರಯೋಧರಿಗೆ ಗೌರವ ನಮನ, ಬೌದ್ಧಿಕ್, ಪ್ರತಿಜ್ಞಾ ವಿಧಿ , ನಡೆದು ಸುಜನ್ ಕಿಲಂಗೋಡಿಯವರು ಹಾಡಿದ ‘ವಂದೇ ಮಾತರಂ’ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.
- Thursday
- November 21st, 2024