ಕೊಡಗು ಮಡಿಕೇರಿ ಮೂಲದ ರೋಗಿಯೊಬ್ಬರನ್ನು ತುರ್ತಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಬೇಕು ದ,ಕ,ಜಿಲ್ಲೆಯಲ್ಲಿ ಸ್ವಲ್ಪ ಸಹಾಯ ಮಾಡಿ ಎಂಬಂತೆ ಸುಳ್ಯದ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿಯವರಿಗೆ ಬಂದ ಬೇಡಿಕೆಯನ್ನು ಅನುಸರಿಸಿ ಸುಳ್ಯ ಮೂಲಕ ತುರ್ತು ವಾಹನ ಹಾದುಹೋಗಲು ಪಣತೊಡುತ್ತಾರೆ.
ಶರೀಫ್ ರವರು ತಕ್ಷಣ ಸುಳ್ಯ ವಿಕಾಯ ಸಂಘಟನೆಯ ಕಾರ್ಯದರ್ಶಿ ತಾಜುದ್ದೀನ್ ಟರ್ಲಿಯವರಿಗೆ ಮಾಹಿತಿ ನೀಡಿ ತುರ್ತಾಗಿ ಒಂದು ವಾಟ್ಸಾಪ್ ಗುಂಪು ರಚಿಸಿ ಜಿಲ್ಲೆಯ ಎಲ್ಲಾ ಸಾಮಾಜಿಕ ಕಾರ್ಯಕರ್ತರು ಸೇರಿಕ್ಕೊಳ್ಳುವ ಹಾಗೆ ಮಾಡಿ ತುರ್ತು ಸ್ಪಂದನೆ ದೊರಕುವಲ್ಲಿ ಯಶಸ್ವಿಯಾಗುತ್ತಾರೆ. ಕೆಲವೇ ಕ್ಷಣಗಳಲ್ಲಿ ವಾಟ್ಸಾಪ್ ಗುಂಪು ಬರ್ತಿಯಾಗಿ ಅಲ್ಲಲ್ಲಿ ಸ್ವಯಂ ಸೇವಕರು ರಸ್ತೆ ಕ್ಲೀಯರ್ ಮಾಡುತ್ತಲೇ ತುರ್ತು ವಾಹನ ಸಂಪಾಜೆ ಗಡಿ ಮೂಲಕ ದ.ಕ. ಜಿಲ್ಲೆ ಪ್ರವೇಶಿಸಿ,ನಂತರ ಸಂಪಾಜೆಯಿಂದ ದೇರಳಕಟ್ಟೆಗೆ ಒಂದು ಗಂಟೆ ಹದಿನೈದು ನಿಮಿಷಕ್ಕೆ ತುರ್ತು ವಾಹನ ತಲುಪಿತ್ತು,.
ಜಿಲ್ಲೆಯಾದ್ಯಂತ ಮಾನವೀಯ ನೆಲೆಯಲ್ಲಿ ಆ ತುರ್ತು ವಾಹನ ಸಂಚಾರಕ್ಕೆ ಜಾತಿ ಬೇದ ಮರೆತು ಸಹಕರಿಸಿದ ಎಲ್ಲ ಸ್ವಯಂ ಸೇವಕರಿಗೂ,ಜಿಲ್ಲೆಯ ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳಿಗೂ,ಚಾಲಕ ಮಿತ್ರರಿಗೂ,ಬೆಂಗಾವಲು ವ್ಯವಸ್ಥೆ ಮಾಡಿದ ಹಲವು ಅಂಬುಲೆನ್ಸ್ ಚಾಲಕರಿಗೂ,ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲ ಸಾರ್ವಜನಿಕರಿಗೂ,ವಿಶೇಷವಾಗಿ ತಕ್ಷಣ ಸ್ಪಂದಿಸಿ ವಾಟ್ಸಾಪ್ ಗುಂಪು ರಚಿಸಿ ವಾಟ್ಸಾಪ್ ಹೀಗೂ ಉಪಯೋಗಿಸಬಹುದು ಎಂಬಂತೆ ಮಾಡಿದ ತಾಜುದ್ದೀನ್ ಟರ್ಲಿಯವರಿಗೂ ರೋಗಿಯ ಪುತ್ರ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
- Thursday
- November 21st, 2024