Ad Widget

ಕುಕ್ಕೆ ಸುಬ್ರಹ್ಮಣ್ಯ : ಬೀದಿ ದೀಪಗಳ ರಿಪೇರಿ ಪ್ರಗತಿಯಲ್ಲಿ

ಸುಬ್ರಹ್ಮಣ್ಯ ನ.02 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ಇದೇ ನವಂಬರ್ 14ರಿಂದ ಮೂಲ ಮೃತ್ತಿಗೆ  ಪ್ರಸಾದ ತೆಗೆಯುವುದರೊಂದಿಗೆ ಆರಂಭವಾಗಿ ಮರುದಿನ ನವೆಂಬರ್ 15ರಂದು ಕೊಪ್ಪರಿಗೆ ಏರುವುದರೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿರುವುದು.
ಜಾತ್ರೋತ್ಸವಕ್ಕೆ ಬಹಳಷ್ಟು ಕೆಲಸ ಕಾರ್ಯಗಳು ಶ್ರೀ ದೇವಳದ ವತಿಯಿಂದ ಆಗಬೇಕಾಗಿದ್ದು, ಇದೀಗ ಕುಮಾರದಿಂದ ರಥಬೀದಿಯಾಗಿ ಶ್ರೀ ದೇವಳ ಹಾಗೂ ಪಾರ್ಕಿಂಗ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿ ದೀಪಗಳ ರಿಪೇರಿ ಕೆಲಸ ಪ್ರಗತಿಯಲ್ಲಿ ಇದೆ.
ಪಾರ್ಕಿಂಗ್ ಜಾಗದಲ್ಲಿ  ಸಮತಟ್ಟು ಮಾಡುವ ಕೆಲಸ, ತಾತ್ಕಾಲಿಕ ಶೌಚಾಲಯಗಳು, ವಿಶ್ರಾಂತಿ ತಾಣಗಳು, ತಾತ್ಕಾಲಿಕ ಆರೋಗ್ಯ ಕೇಂದ್ರ, ಕುಮಾರಧಾರದಿಂದ ರಥಬೀದಿಯಾಗಿ ಶ್ರೀ ದೇವಳದವರೆಗೆ ಎರಡು ಬದಿಗಳಲ್ಲಿ ಇರುವ ಹುಲಸಾಗಿ ಬೆಳೆದಿರುವ ಗಿಡಗಂಟಿಗಳು, ಹುಲ್ಲು, ಕಸ-ಕಡ್ಡಿಗಳು, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಚೀಲ ಹಾಗೂ ಇನ್ನಿತರ ತ್ಯಾಜ್ಯ  ವಸ್ತುಗಳನ್ನು ಸ್ವಚ್ಛಗೊಳಿಸುವ ಕೆಲಸಗಳು ಇನ್ನಷ್ಟೆ ಆಗಬೇಕಾಗಿವೆ.
ಇನ್ನು ಜಾತ್ರೆಗೆ ಕೇವಲ ಎರಡು ವಾರಗಳು ಇರುವುದರಿಂದ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗದೇ ಶೀಘ್ರವಾಗಿ ಆಗಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading