ಕೊಲ್ಲಮೊಗ್ರು : ತೆಂಗಿನಮರ ಏರಿದ  ಮೂರ್ತೆದಾರ ಮೃತ್ಯು – ಮೃತದೇಹ ಕೆಳಗಿಳಿಸಿದ ಸ್ಥಳೀಯರು

ಕೊಲ್ಲಮೊಗ್ರ ಗ್ರಾಮದ ಪನ್ನೆ ಕೃಷ್ಣ ಎಂಬವರ ತೆಂಗಿನ ಮರಕ್ಕೆ ಹತ್ತಿದ್ದ ಕೇರಳ ಗುರುವಾಯುರು ಮೂಲದ ಮೂರ್ತೆದಾರ ಆರ್ ಸಾಮೀ ಎಂಬವರು ಮೃತಪಟ್ಟ ಘಟನೆ ನಡೆದಿದೆ. ತೆಂಗಿನ ಮರ ಹತ್ತಿ ಸ್ವಲ್ಪ ಹೊತ್ತಿನಲ್ಲಿ ಕೂಗು ಕೇಳಿಸಿದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿರುವುದು ಗೊತ್ತಾಗಿದೆ. ಆ ಬಳಿಕ ಸ್ಥಳೀಯರು ಸೇರಿ ಅವರನ್ನು ಕೆಳಗಿಳಿಸಿ 108 ಅಂಬ್ಯುಲೆನ್ಸ್ ಮುಖಾಂತರ ಸುಳ್ಯ ಸರಕಾರಿ ಆಸ್ಪತ್ರೆಗೆ...

ಸುಬ್ರಹಣ್ಯ : ಸ್ವಯಂಸೇವಕರಾಗಿ ಭಾಗವಹಿಸಿದ ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಏನೇಕಲ್ಲು ಒಕ್ಕೂಟದ ಸದಸ್ಯರು

ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವದ ಪ್ರಯುಕ್ತ ನ.24 ರಂದು ಅಂಗಡಿಗುಡ್ಡೆಯಲ್ಲಿ ನಡೆದ ಭೋಜನ ವ್ಯವಸ್ಥೆಯಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏನೇಕಲ್ಲು ಒಕ್ಕೂಟದ  ಸದಸ್ಯರುಗಳು ಸ್ವಯಂ ಸೇವಕರಾಗಿ ಭಾಗವಹಿಸಿದರು.
Ad Widget

ಕುಕ್ಕೆಯಲ್ಲಿ ರಥಗಳ ಶಿಖರ(ಕಲಶ) ಪೂಜೆ

ಸುಬ್ರಹ್ಮಣ್ಯ ನ.24 : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಠಿ  ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಎಳೆಯುವ ಪಂಚಮಿ ರಥ ಹಾಗೂ ಬುಧವಾರ ಬೆಳಗ್ಗೆ ಎಳೆಯುವ ಬ್ರಹ್ಮರಥ ಗಳಿಗೆ ಜೋಡಿಸುವ ಶಿಖರ(ಕಳಶ)ದ ಪೂಜೆಯನ್ನು ಈ ದಿನ ಸೋಮವಾರ ಶ್ರೀ ದೇವಳದ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯರು ಕಳಶ ಪೂಜೆ ನೆರವೇರಿಸಿದರು. ತದನಂತರ ಮನೆ ಕುಡಿಯ...

ಕುಕ್ಕೆ ಸುಬ್ರಹ್ಮಣ್ಯ : ಚಂಪಾಷಷ್ಠಿ ಜಾತ್ರೆಯಲ್ಲಿ ಚೌತಿಯಂದು ಪಲ್ಲಪೂಜೆ

ಸುಬ್ರಹ್ಮಣ್ಯ ನ.24 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕಾರ್ತಿಕ ಶುದ್ಧ ಚೌತಿಯ ದಿನವಾದ ಸೋಮವಾರ ಶ್ರೀ ದೇವಳದಲ್ಲಿ ಪಲ್ಲಪೂಜೆ ನೆರವೇರಿತು.ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ  ಎಡಪಡಿ ತಾಯರು ಒಳಾಂಗಣದಲ್ಲಿ ಪಲ್ಲಪೂಜೆ ನೆರವೇರಿಸಿದರು. ಬಳಿಕ ಅಕ್ಷಯಪಾತ್ರೆಗೆ ಪೂಜೆ ಸಲ್ಲಿಸಿದರು. ಕುಕ್ಕೆಯಲ್ಲಿ ನಿರಂತರ ಅನ್ನದಾನ ನಡೆಯುವುದು ಪ್ರಧಾನವಾಗಿದ್ದು,...

ಕುಕ್ಕೆಯಲ್ಲಿ ಚೌತಿಯಂದು 110 ಭಕ್ತರಿಂದ ಎಡ ಸ್ನಾನ

ಸುಬ್ರಹ್ಮಣ್ಯ ನ.24 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಟಿ  ಜಾತ್ರಾ ಮಹೋತ್ಸವದ ಮೂರು ದಿನಗಳಲ್ಲಿ(ಚೌತಿ, ಪಂಚಮಿ, ಷಷ್ಟಿ) ಸೋಮವಾರ ಚೌತಿಯಂದು ದೇವಳದ ಹೊರಾಂಗಣದಲ್ಲಿ ಸುತ್ತಲು ಹಾಕಿದ ಬಾಳೆ ಎಲೆ ಅದಕ್ಕೆ ಬಡಿಸಿದ ದೇವರ ನೈವೇದ್ಯ, ಅವುಗಳನ್ನು ಗೋವುಗಳಿಂದ ತಿನ್ನಿಸಿ ಬಳಿಕ ಹರಕೆ ಹೊತ್ತ 110 ಸೇವಾರ್ಥಿಗಳು ಎಡೆಸ್ನಾನ ಉರುಳು ಸೇವೆಯನ್ನು ನೆರವೇರಿಸಿದರು. ಅದಕ್ಕೂ ಮೊದಲು...

ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

“ಮನಸ್ಸು ಮತ್ತು ಬುದ್ಧಿಯ ಹತೋಟಿ ದುಶ್ಚಟ ಮುಕ್ತ ಸಮಾಜಕ್ಕೆ ಬುನಾದಿ” : ಡಾ| ಅನುರಾಧಾ ಕುರುಂಜಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ವತಿಯಿಂದ ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು 24-11-2025 ರಂದು ನಡೆಸಲಾಯಿತು.             ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಪ್ರಕಾಶ್ ಕಣೆಮರಡ್ಕರವರು ವಹಿಸಿದ್ದರು. ಕಾರ್ಯಕ್ರಮವನ್ನು ಅಜ್ಜಾವರ ವಲಯದ ಜನ ಜಾಗೃತಿ ಅಧ್ಯಕ್ಷರಾದ ಶಿವಪ್ರಕಾಶ್ ಅಡ್ಪಂಗಾಯರವರು ಉದ್ಘಾಟನೆ ಮಾಡಿ ಪ್ರಾಸ್ತಾವಿಕವಾಗಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ...

ಬೆಳ್ಳಾರೆ ಭಾಗದಲ್ಲಿ ನಾಳೆ(ನ.25) ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಬೆಳ್ಳಾರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳಲ್ಲಿ  ನ.25 ರಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆವಿ ಬೆಳ್ಳಾರೆ-1, ಬೆಳ್ಳಾರೆ -2 ನೆಟ್ಟಾರು, ಕಳಂಜ, ಮುರುಳ್ಯ, ಪೆರ್ಲಂಪಾಡಿ, ಚೊಕ್ಕಾಡಿ ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 6:00 ರ ತನಕ ವಿದ್ಯುತ್...

ಬೆಳ್ಳಾರೆ : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಸ್ವಚ್ಛತಾ ಜಾಗೃತಿ ಕಾರ್ಯಕ್ರಮ

ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಸ್ನೇಹಿತರ ಕಲಾ ಸಂಘ  ಬೆಳ್ಳಾರೆ ಆಶ್ರಯದಲ್ಲಿ 75 ದಿನಗಳ ಸ್ವಚ್ಛತಾ ಅಭಿಯಾನ ಪಂಚಸಪ್ತತಿ 2025   ಅಂಗವಾಗಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ನ.24ರಂದು ಬೆಳ್ಳಾರೆ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ನಡೆಯಿತು. ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಗೌಡ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಪ್ರಾಥಮಿಕ ಆರೋಗ್ಯ...

ಬೊಳುಬೈಲು : ಕಾರು ಪಲ್ಟಿ – ಅಪಾಯದಿಂದ ಪಾರು

ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರೊಂದು ಬೊಳುಬೈಲು ಸಮೀಪ ಚಾಲಕನ ನಿಯಂತ್ರಣ ತಪ್ಪಿ  ಕಾರು ಪಲ್ಟಿಯಾದ ಘಟನೆ ನ.24 ರಂದು ನಡೆದಿದೆ. ಕಾರು ಜಖಂಗೊಂಡಿದ್ದು, ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ವಳಲಂಬೆ : ಮಕ್ಕಳ ದಿನಾಚರಣೆ, ಸಮಾಜಸೇವಕರಿಗೆ ಸನ್ಮಾನ – ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ ಪುಟಾಣಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಬಾಲವಿಕಾಸ ಸಮಿತಿ ಅಂಗನವಾಡಿ ಕೇಂದ್ರ ವಳಲಂಬೆ, ಅಂಗನವಾಡಿ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಪೋಷಕರ ಸಹಯೋಗದೊಂದಿಗೆ ನ.24 ರಂದು ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ “ಮಕ್ಕಳ ದಿನಾಚರಣೆ, ಸನ್ಮಾನ ಕಾರ್ಯಕ್ರಮ ಹಾಗೂ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ” ನಡೆಯಿತು. ಕಾರ್ಯಕ್ರಮವನ್ನು ಗುತ್ತಿಗಾರು ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ...
Loading posts...

All posts loaded

No more posts

error: Content is protected !!