ನಾಳೆ ನ.12 ರಂದು ಮೆಸ್ಕಾಂ ಸುಬ್ರಹ್ಮಣ್ಯ ಉಪವಿಭಾಗದಲ್ಲಿ ವಿದ್ಯುತ್ ನಿಲುಗಡೆ

ಸುಬ್ರಹ್ಮಣ್ಯ : ಮೆಸ್ಕಾಂ ಸುಬ್ರಹ್ಮಣ್ಯ ಉಪ ವಿಭಾಗದ 33 /11 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ಪಾಲನ ಕಾರ್ಯ ಹಮ್ಮಿಕೊಂಡಿರುವುದರಿಂದ ನಾಳೆ ನ.12 ಬುಧವಾರದಂದು ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 5:00 ಗಂಟೆಯವರೆಗೆ ಸುಬ್ರಹ್ಮಣ್ಯ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ನಿಲುಗಡೆ ಮಾಡಲಾಗುವುದೆಂದು ಮೆಸ್ಕಾಂ ಪ್ರಕಟಣೆ ತಿಳಿಸಿರುತ್ತದೆ.ಆದ್ದರಿಂದ ಸುಬ್ರಹ್ಮಣ್ಯ ಉಪ ಕೇಂದ್ರದಿಂದ ಹೊರಡುವ ಹರಿಹರ, ನಡುಗಲ್ಲು, ಕುಮಾರಧಾರ,...

ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ; “ಯುಜಿಸಿ, ಪ್ರೌಢಶಿಕ್ಷಣ ಆಯೋಗ, ತಾಂತ್ರಿಕ ಶಿಕ್ಷಣ ಮಂಡಳಿ ಸ್ಥಾಪಿಸಿದ ಖ್ಯಾತಿ ಮೌಲಾನ ಅಬುಲ್ ಕಲಾಂ ಅಜಾದ್ ರಿಗೆ ಸಲ್ಲುತ್ತದೆ” : ಕೆ.ಎಂ.ಮುಸ್ತಫ

ಸುಳ್ಯದ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆಶ್ರಯದಲ್ಲಿ ಮೌಲಾನ ಅಬುಲ್ ಕಲಾಂ ಅಜಾದ್ ರವರ ಜನ್ಮ ದಿನಾಚರಣೆ, ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಯಿತು ಅಧ್ಯಕ್ಷತೆ ವಹಿಸಿದ್ದ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ.ಮುಸ್ತಫ ಮಾತನಾಡಿ "ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾದ ಮೌಲಾನ  ಅಬುಲ್ ಕಲಾಂ ಅಜಾದ್...
Ad Widget

ವಿವಾಹ ನಿಶ್ಚಿತಾರ್ಥ : ಲತೀಶ್ ಅಲೆಂಗಾರ – ನಮಿತಾ

ಎಣ್ಮೂರು ಗ್ರಾಮದ ಅಲೆಂಗಾರ ಶ್ರೀಮತಿ ಪಾರ್ವತಿ ಮತ್ತು ಮೋನಪ್ಪ ಗೌಡರ ಪುತ್ರ ಲತೀಶ್ ಅವರ ವಿವಾಹ ನಿಶ್ಚಿತಾರ್ಥವು ಪೆರುವಾಜೆ ಗ್ರಾಮದ ಅಡ್ಯತಕಂಡ ಶ್ರೀಮತಿ ಸಾವಿತ್ರಿ ಮತ್ತು  ಚೆನ್ನಪ್ಪ ಗೌಡರ ಪುತ್ರಿ ನಮಿತಾ ರೊಂದಿಗೆ ನ.9 ರಂದು ವಧುವಿನ ಮನೆಯಲ್ಲಿ ನಡೆಯಿತು.

ಅರಂತೋಡು : ಕಂಬ ಹತ್ತಿ ಲೈನ್ ದುರಸ್ತಿ ಪಡಿಸಿದ ಪ್ರಭಾರ ಜೆ.ಇ – ಮಾದರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಥಳೀಯರು

ಮೆಸ್ಕಾಂ ಅರಂತೋಡು ಶಾಖೆಯ ಪ್ರಭಾರ ಜೆ.ಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಶುರಾಮ ವಳಲಂಬೆ ರವರು ಲೈನ್ ದುರಸ್ತಿ ವೇಳೆ ಪವರ್ ಮ್ಯಾನ್ ಜತೆಗೆ ತಾನೂ ಕೂಡ ಕಂಬ ಹತ್ತಿ ಕೆಲಸ ನಿರ್ವಹಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ನ.10 ರಂದು ಅರಂತೋಡು ಭಾಗಕ್ಕೆ ವಿದ್ಯುತ್ ಸಂಪರ್ಕಿಸುವ ಲೈನ್ ನಲ್ಲಿ ಅರಂಬೂರು ಸಮೀಪ ತುರ್ತು ದುರಸ್ತಿ...

ನ.12 : ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ

ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ನ.12 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.  ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇಲಾಖೆಗೆ ಸಂಭಂಧಿಸಿದ ಅಹವಾಲುಗಳನ್ನು  ಸಲ್ಲಿಸಬಹುದು ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಳ್ಳಾರೆ : ಯಕ್ಷ ಕಲಾ ಬೋಧಿನೀ ನೂತನ ಪದಾಧಿಕಾರಿಗಳ ಆಯ್ಕೆ

ಯಕ್ಷ ಕಲಾ ಬೋಧಿನೀ ಬೆಳ್ಳಾರೆ ಇದರ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸಂಚಾಲಕರಾದ ಲಿಂಗಪ್ಪ ಬೆಳ್ಳಾರೆ ಇವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ಪ್ರದೀಪ್ ಕುಮಾರ್ ರೈ ಪನ್ನೆ, ಅಧ್ಯಕ್ಷರಾಗಿ ಲೋಕೇಶ್ ತಂಟೆಪ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ನಿರ್ಮಲಾ ಜಯರಾಮ, ಖಜಾಂಜಿಯಾಗಿ ಶ್ರೀಮತಿ ಭಾರತಿ ಕೆ.ಪಿ., ಸಂಚಾಲಕರಾಗಿ ಲಿಂಗಪ್ಪ ಬೆಳ್ಳಾರೆನಿರ್ದೇಶಕರಾಗಿ ಪದ್ಮನಾಭ ಕಲಾಸುಮ,...

ಕಲ್ಲುಮುಟ್ಲು ಅಂಗನವಾಡಿ ಕೇಂದ್ರದ ತಡೆಗೋಡೆ ಕುಸಿತ : ಎಸ್.ಡಿ.ಪಿ.ಐ. ನಾಯಕರ ಭೇಟಿ

ಸುಳ್ಯ-ನ.10: ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕಲ್ಲುಮುಟ್ಲು ಅಂಗನವಾಡಿ ಕೇಂದ್ರದ ತಡೆಗೋಡೆ ಕುಸಿದಿದೆ. ಕಳೆದ ವರ್ಷ ತಡೆಗೋಡೆ ಅರ್ಧ ಕುಸಿದಿತ್ತು,ಆದರೆ ಮರು ನಿರ್ಮಾಣ ಅಥವಾ ದುರಸ್ತಿ ಕಾರ್ಯ ಮಾಡಿರಲಿಲ್ಲ. ಹಾಗಾಗಿ ಅದರ ಉಳಿದ ಸ್ವಲ್ಪ ಬಾಗ ಇಂದು ಕುಸಿದು ಬಿದ್ದಿದೆ.ಸಣ್ಣ ಮಕ್ಕಳು ಅಂಗನವಾಡಿಯಲ್ಲಿರುದರಿಂದ ಮುಂದಿನ ಬಾರಿ ವೈಜ್ಞಾನಿಕವಾಗಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಲು...
error: Content is protected !!