ಬೆಂಗಳೂರಿನ ಡಿ ಜೆ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಮತೀಯವಾದಿ ಸಂಘಟನೆಗಳಾದ ಕೆ ಎಫ್ ಡಿ, ಪಿ ಎಫ್ ಐ, ಎಸ್ ಡಿ ಪಿ ಐ ಸಂಘಟನೆಗಳ ನೇರ ಕೈವಾಡವಿರುವುದು ಕಂಡುಬಂದಿದ್ದು, ಈ ಸಂಘಟನೆಗಳು ಈ ಹಿಂದೆಯೂ ಹಲವು ಕೊಲೆ,ಕೊಲೆಯತ್ನ,ದೊಂಬಿ,ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ,ದೇಶದ್ರೋಹದಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುವುದರಿಂದ ಈ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಇಂದು ‘ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು’ ಇದರ ನೇತೃತ್ವದಲ್ಲಿ ಮಾನ್ಯ ರಾಜ್ಯಪಾಲರಿಗೆ, ತಹಶೀಲ್ದಾರ್ ಸುಳ್ಯ ತಾಲೂಕು ಇವರ ಮೂಲಕ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಾಗರಣ ವೇದಿಕೆ ಸುಳ್ಯ ತಾಲೂಕಿನ ಅಧ್ಯಕ್ಷರಾದ ಮಹೇಶ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕೊಡಿಯಾಲ,ಉಪಾಧ್ಯಕ್ಷರು ಪ್ರಶಾಂತ್ ಕಾಯರ್ತೋಡಿ, ಪ್ರಚಾರ ಪ್ರಮುಖ್ ಚಂದು ಕೊಡಿಯಾಲ,ಚಂದ್ರಜೀತ್ ಮಾವಂಜಿ ಪಿ ಎ ಎಸ್ ಸಿ ನಿರ್ದೇಶಕರು ,ಅಜಿತ್ ಬನ್ನೂರು,ವಿನಯ್ ನಾರಾಲು, ಉಪಸ್ಥಿತರಿದ್ದರು.
- Friday
- November 22nd, 2024