ಹರಿಹರ,ಕೊಲ್ಲಮೊಗ್ರ ಮತ್ತು ಕಲ್ಮಕಾರು ಊರಿನ ಮುಖಂಡರು ಮತ್ತು ರಾಜಕೀಯ ನಾಯಕರ ಸಭೆ ಆ.14 ರಂದು ಅಪರಾಹ್ನ 2 ಗಂಟೆಗೆ ಕೊಲ್ಲಮೊಗ್ರದಲ್ಲಿ ನಡೆಯಲಿದೆ ಎಂದು ಹೋರಾಟದ ಸಂಚಾಲಕ ಉದಯ ಶಿವಾಲ ತಿಳಿಸಿದ್ದಾರೆ.
ಸುಬ್ರಹ್ಮಣ್ಯದಲ್ಲಿ 300 ಮೀಟರ್ ನಷ್ಟು ಕೇಬಲ್ ಅಳವಡಿಕೆ ಪ್ರಕ್ರಿಯೆ ಮಾತ್ರ ಬಾಕಿ ಇದ್ಡು ಇದಕ್ಕೆ ಒಂದು ತಿಂಗಳಿಂದ ಕೆಲವೊಂದು ತೊಡಕುಗಳು ಉಂಟಾಗಿದೆ. ನಮ್ಮ ಐದು ಗ್ರಾಮಗಳು ಕುಗ್ರಾಮ ಎಂದೇ ಬಿಂಬಿತವಾಗಿದೆ. ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮತ್ತು ಪಂಚಾಯತು ಹಾಗೂ ಪಡಿತರ ವಿತರಣೆಗೆ ನೆಟ್ವರ್ಕ್ ಸಮಸ್ಯೆಯು ಕಾರಣವಾಗುತ್ತಿದೆ. ಈ ಸಂಬಂಧ ಶಾಸಕರು ಸಂಸದರು ಮತ್ತು ಉಸ್ತುವಾರಿ ಸಚಿವರ ಗಮನಕ್ಕೆ ತಂದು ಜೀಯೊ ಟವರ್ ನಿರ್ಮಾಣಕ್ಕೆ ಅಧಿಕಾರಿಗಳಿಗೆ ತಿಳಿಸಿದ್ದರು. ಅದರಂತೆ ಕಾಮಾಗಾರಿ ಆರಂಭವಾಗಿ ಶೇಕಡ 90ರಷ್ಟು ಕೆಲಸಗಳು ಪೂರ್ಣಗೊಂಡಿದ್ದು ಸುಬ್ರಹ್ಮಣ್ಯದ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಅಲ್ಲಿ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಈ ಸಂಬಂಧ ಊರಿನ ಏಲ್ಲಾ ಜನರು ವಿದ್ಯಾರ್ಥಿಗಳು ಹಾಗೂ ಮುಖಂಡರು ನಾಳೆ ಸಭೆ ಸೇರಿ ಮುಂದಿನ ದಿನಗಳಲ್ಲಿ ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ ಮಾಡಿ ನೆಟ್ವರ್ಕ್ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯುವ ಬಗ್ಗೆ ನಾಳೆಯ ಸಭೆಯಲ್ಲಿ ತೀರ್ಮಾನಿಸಲಿದ್ದೇವೆ.
ನಮಗೆ ಇದುವರೆಗೆ ಆಶ್ವಾಸನೆ ನೀಡಿದ ಸಚಿವರು, ಸಂಸದರು, ಶಾಸಕರು ಮತ್ತು ಜೀಯೊ ಅಧಿಕಾರಿಗಳು ಹಾಗೂ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಸ್ಥಳದಲ್ಲಿಯೇ ಪರಿಹಾರ ಸಿಗುವವರೆಗೆ ಐದು ಗ್ರಾಮಸ್ಥರ ತಮ್ಮ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೋರಾಟದ ಸಂಚಾಲಕರು ತಿಳಿಸಿದ್ದಾರೆ.
- Thursday
- November 21st, 2024