ಕೊರೊನ ಪಾಸಿಟಿವ್ ಆಗಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಬಿಸಿನೀರಿನ ವ್ಯವಸ್ಥೆ ಸರಿಯಾಗಿ ಇಲ್ಲವೆಂದೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಸರಿಯಾದ ಬಿಸಿನೀರಿನ ವ್ಯವಸ್ಥೆ ಒದಗಿಸಿಲ್ಲವೆಂದೂ ಖಾಸಗಿ ಆಸ್ಪತ್ರೆಗೆ ಹೋಗಿ ದಾಖಲಾದ ಘಟನೆ ಆ. 11 ರಂದು ನಡೆದಿದೆ.
ಕೋವಿಡ್ ಪೆಶೆಂಟ್ ಗಳಿಗೆ ಕುಡಿಯಲು ಬಿಸಿ ಬಿಸಿ ನೀರೆ ಪ್ರಮುಖ, ಆದರೂ ಕೂಡ ಇಲ್ಲಿ ಬಿಸಿನೀರು ಸರಿಯಾಗಿ ಕೊಡುತ್ತಿಲ್ಲ. ಸ್ನಾನ ಮಾಡಲು ಕೂಡ ಬಿಸಿನೀರಿನ ವ್ಯವಸ್ಥೆ ಮಾಡಬೇಕಿತ್ತು . ಸರಕಾರದಿಂದ ಇದಕ್ಕೆ ಬರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಜನಪ್ರತಿನಿಧಿಗಳು ಸರಕಾರಿ ಆಸ್ಪತ್ರೆಯ ಬಗ್ಗೆ ಯಾವುದೇ ನಿಗವಹಿಸುತ್ತಿಲ್ಲ. ಇಲ್ಲಿನ ಕೊರತೆಗಳನ್ನು ನೀಗಿಸಲು ಸಾಧ್ಯವಿಲ್ಲವೇ ಎಂದು ರೋಗಿಗಳು ಪ್ರಶ್ನಿಸುವಂತಾಗಿದೆ. ಬಿಸಿನೀರು ಇಲ್ಲದೇ ರೋಗಿಗಳು 3 ದಿನಕ್ಕೊಮ್ಮೆ ಸ್ನಾನ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ, ಯಾವುದೇ ಸಮಸ್ಯೆ ಇದ್ದರೇ ಅಪ್ತಮಿತ್ರ ಸಂಖ್ಯೆಗೆ ಕರೆಮಾಡಿ ಎಂದು ಹೇಳುವುದು ಮಾತ್ರ ಇಲ್ಲಿ ಅಗತ್ಯ ಸೌಲಭ್ಯ ನೀಡಲು ಯಾವ ಮಿತ್ರ ಕೂಡ ಕಾಣಿಸುವುದಿಲ್ಲ. ಆದುದರಿಂದ ಈ ವ್ಯವಸ್ಥೆಗೆ ಬೇಸತ್ತು ಖಾಸಗಿ ಆಸ್ಪತ್ರೆಗೆ ಹೋಗುತ್ತೇನೆ ಎಂದು ಪತ್ರಿಕೆ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ವತಿಯಿಂದ ಸಂಪರ್ಕಿಸಿದಾಗ “ಕುಡಿಯಲು ಬಿಸಿನೀರಿನ ನೀಡುತ್ತಿದ್ದೇವೆ. ತಾಂತ್ರಿಕ ತೊಂದರೆ ಇರುವುದರಿಂದ ಸ್ನಾನಕ್ಕೆ ಬಿಸಿನೀರು ಒದಗಿಸಲು ಅಸಾಧ್ಯವಾಗಿದೆ. ಸಂಬಂಧಪಟ್ಟವರ ಜೊತೆ ಮಾತನಾಡಿ ಸೂಕ್ತ ವ್ಯವಸ್ಥೆ ಮಾಡುತ್ತೇವೆ” ಆಸ್ಪತ್ರೆಯ ಹಿರಿಯ ವೈಧ್ಯರು ತಿಳಿಸಿದ್ದಾರೆ.
ಈ ಬಗ್ಗೆ ಶಾಸಕ ಎಸ್. ಅಂಗಾರ ರನ್ನು ಮಾಹಿತಿಗಾಗಿ ಸಂಪರ್ಕಿಸಲು ಪ್ರಯತ್ನಿಸಿದಾಗ ಲಭ್ಯರಾಗಿಲ್ಲ.