ಸುಳ್ಯದಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಇದ್ದರೂ ತುರ್ತು ಅಗತ್ಯದ ಬ್ಲಡ್ ಬ್ಯಾಂಕ್ ಅವಶ್ಯಕತೆ ಇದೆ. ಬ್ಲಡ್ ದಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸುಳ್ಯದಲ್ಲಿ ಇದ್ದಾರೆ. ವಿವಿಧ ಸಂಘಟನೆಗಳು ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಬ್ಲಡ್ ಅಗತ್ಯತೆ ಇರುವವರಿಗೆ ಪೂರೈಕೆ ಮಾಡುತ್ತಿದೆ. ಆದರೇ ಇಲ್ಲಿ ಬ್ಲಡ್ ಬ್ಯಾಂಕ್ ಇಲ್ಲದಿರುವುದು ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕ್ ತೆರೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಸಲ್ಲಿಸಲಾಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ನೆಟ್ ಕಾಂ ತಿಳಿಸಿದ್ದಾರೆ.
- Monday
- November 25th, 2024