Ad Widget

ಗುತ್ತಿಗಾರು ವಲಯದ 400ನೇ ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದಲ್ಲಿ 400ನೇ ಸಂಘವನ್ನು ಕಮಿಲದಲ್ಲಿ ಉದ್ಘಾಟನೆಯನ್ನು ಮಾಡಲಾಯಿತು. ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆಯವರು ಸಂಘದ ನಿಯಮ, ವಿಧಿ ವಿಧಾನಗಳು ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅರೋಗ್ಯ ಕಾರ್ಯಕ್ರಮ ಸಂಪೂರ್ಣ ಸುರಕ್ಷಾ, ಜೀವನ ಭದ್ರತೆಗಾಗಿ ಮೈಕ್ರೋಬಛತ್ ಪಾಲಿಸಿ, ಪಿಂಚಣಿ, ಸುಜ್ಞಾನನಿಧಿ ಶಿಷ್ಯವೇತನ, ರೈತರಿಗೆ ಕಡಿಮೆ ಬೆಲೆಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ, ಉಳಿತಾಯ ಯೋಜನೆ, ಒಕ್ಕೂಟ ಸಭೆಯ ಮಹತ್ವ, ನಿರಂತರ ಪತ್ರಿಕೆ, ಪಾರದರ್ಶಕ ಆರ್ಥಿಕ ವ್ಯವಹಾರ ಹೀಗೆ ಹಲವು ಯೋಜನೆಗಳ ಮಾಹಿತಿಯನ್ನು ನೀಡಿದರು. ನಂತರ ಪ್ರತಿನಿಧಿಗಳ ಆಯ್ಕೆ ಮಾಡಿ ಪ್ರಬಂಧಕರಾಗಿ ಕೆಂಚಮ್ಮ, ಸಂಯೋಜಕರು ಲಿಖಿತ, ಕೋಶಾಧಿಕಾರಿ ಶರ್ಮಿಳಾರವರನ್ನು ಆಯ್ಕೆ ಮಾಡಲಾಯಿತು. ಸಂಘಕ್ಕೆ ಶಿವದುರ್ಗ ಎಂದು ನಾಮಕರಣ ಮಾಡಲಾಯಿತು. ಉದ್ಘಾಟನೆಯನ್ನು ಮೋಹನರವರು ನೆರವೇರಿಸಿದರು. ಸೇವಾಪ್ರತಿನಿಧಿ ಲೋಕೇಶ್ ಸಭೆ ನಿರೂಪಿಸಿದರು. ನಾಗೇಶ್, ಪುಷ್ಪವತಿ ಚಂದ್ರಾವತಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading