ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.), ಸಹಕಾರ ಭಾರತಿ ದ.ಕ., ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಎ.ಪಿ.ಯಂ.ಸಿ ಸಭಾಂಗಣದಲ್ಲಿ ನಡೆದ ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಇದರ ಉದ್ಘಾಟನಾ ಕಾರ್ಯಕ್ರಮವು ಆ. 10ರಂದು ನಡೆಯಿತು.
ಕ್ಯಾಂಪ್ಕೊ ಪುತ್ತೂರು ಇದರ ಸಿ.ಇ.ಓ ಕೃಷ್ಣ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣ ಪ್ರಸಾದ್ ಮಡ್ತಿಲ, ಅಧ್ಯಕ್ಷರು ಜಿಲ್ಲಾ ಸಹಕಾರ ಭಾರತಿ ಹಾಗೂ ನಿರ್ದೇಶಕರು ಕ್ಯಾಂಪ್ಕೊ ವಹಿಸಿದ್ದರು. ತರಬೇತಿಯ ಪ್ರಸ್ತಾವನೆಯನ್ನು ಪ್ರವೀಣ್ ಸರಳಾಯ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ ಹಾಗೂ ಸಯೋಜಕರು ಸಾವಯವ ಕೃಷಿ ಪರಿವಾರ ಮಂಗಳೂರು ನೆರವೇರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಧುಸೂದನ್, ಮಾಲಕರು ಕಸ್ತೂರಿ ನರ್ಸರಿ ಸುಳ್ಯ ಭಾಗವಹಿಸಿದ್ದರು.
ಉದಯ ಆಚಾರ್ ಮಂಡೆಕೋಲು ಸ್ವಾಗತಿಸಿದ್ದರು. ಸಾವಿತ್ರಿ ಕಣೆಮರಡ್ಕ ಧನ್ಯವಾದ ಸಮರ್ಪಿಸಿದರು. ಸುದರ್ಶನ್ ಪಾತಿಕಲ್ಲು ನಿರೂಪಿಸಿದರು.
ಈ ವಾರ ಸುಮಾರು 70 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಈ ವಾರದಲ್ಲಿ ಪ್ಯಾಬ್ರಿಕೇಷನ್, ಅಡುಗೆ ತಯಾರಿ, ಕಸಿ ಕಟ್ಟುವ ಬಗ್ಗೆ ತರಬೇತಿ ನಡೆಯಲಿದೆ