ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದಲ್ಲಿ ಆ. 8 ರಂದು ಪಂಚಲಿಂಗೇಶ್ವರ ಸಭಾಭವನದಲ್ಲಿ ಸಂಜೆ ಅಯೋಧ್ಯಾ ಕರಸೇವಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ ಕರಸೇವಕರಾದ ರಮಾನಂದ ಬಾಳೆಕಜೆ, ಅಳಿಕೆ ದಯಾನಂದ, ಯಶೋಧರ ಬಿ ಜೆ, ಮೋಹನ ಕುಮಾರ್ ಬಾಲಂಬಿ, ವೆಂಕಟರಮಣ ಭಟ್, ಕೊಯನಾಡು ಗಬ್ಬಲಡ್ಕ ಪುಟ್ಟಣ್ಣ, ರಮಾನಂದ ಬಾಳೆಕಜೆ, ಕುಶಾಲಪ್ಪ ಬಾಳೆಕಜೆ, ಪುರುಷೋತ್ತಮ ಕುದುಕ್ಕುಳಿ, ಪುರುಷೋತ್ತಮ ಕುಂಬಾಡಿ, ಚಂದ್ರಶೇಖರ ದೇವರಗುಂಡ, ಸುಂದರ ಕಲ್ಲುಗದ್ದೆ, ಕೇಶವ ಪ್ರಸಾದ್ ಬಾಳೆಕಜೆ, ಯೋಗೀಶ ಬಂಟೋಡಿ(ರವಿ)
ರಾಜೇಶ ಬಿ. ಎನ್ ರನ್ನು ಗೌರವಿಸಲಾಯಿತು.
ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಾಬಂಧನ ಹಾಗೂ ಭಜನಾ ಕಾರ್ಯಕ್ರಮದಿಂದ ಮೊದಲ್ಗೊಂಡು ತದನಂತರ ಅಯೋಧ್ಯೆ ಕರಸೇವಕರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಜಾರಾಮ್ ಕಳಗಿ, ಹಿರಿಯರು ನಿವೃತ ಸೈನಿಕ ಮಾಯಿಲಪ್ಪ ಮೂಲ್ಯ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕುಮಾರ್ ಚೆದ್ಕಾರ್ ಉಪಸ್ಥಿತರಿದ್ದರು. ಇದೇ ವೇಳೆ ಅಯೋಧ್ಯೆ ಕರಸೇವಕಾರಾಗಿ ಭಾಗವಹಿಸಿದಂತ ಬಿ ಜೆ ಯಶೋಧರರವರು ಅಂದಿನ ಅನುಭವವನ್ನು ಹಂಚಿಕೊಂಡರು, ಕಾರ್ಯಕ್ರಮದಲ್ಲಿ ಪರಿವಾರ ಸಂಘಟನೆಯ ಕಾರ್ಯಕರ್ತರು, ಭಜನಾ ಮಂಡಳಿಯ ಸದಸ್ಯರುಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು, ಹಿಂದೂ ಪರ ಸಂಘಟನೆಯ ಹಿರಿಯರು ಉಪಸ್ಥಿತರಿದ್ದರು.