
ಆ.5 ರಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಚಡಾವಿನ ದಿ. ನೂಜೇಲು ಸುಂದರ ರವರ ಮನೆಯ ಎದುರಿನ ಶೀಟ್ ಗಳು ಗಾಳಿಗೆ ಹಾರಿ ಹೋಗಿದ್ದು ಕೊಡಗು ಸಂಪಾಜೆ ಗ್ರಾಮದ ಚೆಡಾವು ಪರಿಸರದ ಯುವ ಕಾರ್ಯಕರ್ತರ ಪಂಚಶಕ್ತಿ ತಂಡ ಅದನ್ನು ಮರು ಜೋಡಿಸಿ ಶ್ರಮದಾನ ಕಾರ್ಯ ನಿರ್ವಹಿಸಿದರು, ಈ ಶ್ರಮದಾನ ಕಾರ್ಯದಲ್ಲಿ ಜಗದೀಶ್ ಪೂಜಾರಿ, ಪ್ರಸನ್ನ ಬಾಳೆಹಿತ್ಲು, ಯತೀಶ್ ರೈ, ರಾಮಯ್ಯ ನೂಜೇಲು ಮತ್ತು ತಂಡದ ಸದಸ್ಯರು ಶ್ರಮದಾನ ಕಾರ್ಯದಲ್ಲಿ ಭಾಗವಹಿಸಿದರು.