
ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ತ್ವಲಬಾ ಸಮ್ಮಿಲನ ಮತ್ತು ತ್ವಲಬಾ ವಿಂಗ್ ನೂತನ ಸಮಿತಿ ರೂಪಿಕರಣ ಕಾರ್ಯಕ್ರಮವು ಆ.6ರಂದು ಸುನ್ನಿ ಮಹಲ್’ನಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಉಪಾಧ್ಯಕ್ಷ ಇರ್ಷಾದ್ ಫೈಝಿ ಪಾಲ್ತಾಡು ವಹಿಸಿದರು. ಸುಳ್ಯ ವಲಯ ಇಬಾದ್ ಕಾರ್ಯದರ್ಶಿ ಅಬ್ದುಲ್ ಖಾದರ್ ಫೈಝಿ ಐವರ್ನಾಡು ಉದ್ಘಾಟಿಸಿದರು. ನಂತರ ತ್ವಲಬಾ ವಿಂಗ್ ನೂತನ ಸಮಿತಿ ಆಯ್ಕೆ ಮಾಡಲಾಯಿತು.
ವಲಯ ಉಸ್ತುವಾರಿಯಾಗಿ ಇಸ್ಹಾಕ್ ಕಳಂಜ, ಚಯರ್ಮೆನ್ ಅಹ್ಮದ್ ಕಬೀರ್ ಅಜ್ಜಾವರ, ವೈಸ್ ಚೆಯರ್ಮೆನ್ ಉನೈಸ್ ಸುಳ್ಯ, ನವಾಝ್ ಬೆಳ್ಳಾರೆ, ಜ.ಕನ್ವೀನರ್ ಸಿನಾನ್ ಅಡ್ಕ, ವೈ.ಕನ್ವೀನರ್ ಹನೀಫ್ ಬೆಳ್ಳಾರೆ, ಸ್ವಾದಿಕ್ ಕಲ್ಲೋಣಿ, ವರ್ಕಿಂಗ್ ಕನ್ವೀನರ್ ಮಿದ್ಲಾಜ್ ದುಗಲಡ್ಕ, ಕೋಶಾಧಿಕಾರಿಯಾಗಿ ಅಬ್ದುಲ್ ವಹ್ಹಾಬ್ ಮಂಡೆಕೋಲು, ಮೀಡಿಯಾ ಕನ್ವೀನರ್ ಮುಹಿನುದ್ದೀನ್ ಪೈಬಂಚಾಲ್, ವರ್ಕಿಂಗ್ ಸದಸ್ಯರಾಗಿ ರಾಶೀದ್ ಬೆಳ್ಳಾರೆ, ನಿಯಾಝ್ ಬಿಳಿಯಾರ್, ಬಾತಿಷಾ ಮಂಡೆಕೋಲು, ಸಫ್ವಾನ್ ಪೈಬಂಚಾಲ್, ಸ್ವಲಾಹುದ್ದೀನ್ ಬೆಳ್ಳಾರೆ, ಸಿದ್ದೀಕ್ ಬೆಳ್ಳಾರೆ, ಫಾಝಿಲ್ ದುಗಲಡ್ಕ, ಆರಿಫ್ ಬೆಳ್ಳಾರೆ, ಆರಿಫ್ ದುಗಲಡ್ಕ, ಜಲಾಲ್ ಅಡ್ಕಾರ್, ಸಬದ್ ಕಲ್ಲೋಣಿ, ಇರ್ಫಾನ್ ಕಳಂಜ, ಆಫೀಝ್ ಕಲ್ಲೋಣಿ, ಶಿಯಾಬ್ ನೆಟ್ಟಾರ್ ಇವರುಗಳನ್ನು ಆಯ್ಕೆಮಾಡಲಾಯಿತು.
ಇತ್ತಿಚೆಗೆ ನಮ್ಮನ್ನಗಲಿದ ಅಬೂಬಕ್ಕರ್ ಮುಸ್ಲಿಯಾರ್ ಕನಕಮಜಲ್ ರವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ವಲಯ ಪ್ರ.ಕಾರ್ಯದರ್ಶಿ ಅಕ್ಬರ್ ಕರಾವಳಿ, ವರ್ಕಿಂಗ್ ಕಾರ್ಯದರ್ಶಿ ಆಶಿಕ್ ಸುಳ್ಯ ಉಪಸ್ಥಿತದ್ದರು. ಇಸ್ಹಾಕ್ ಕಳಂಜ ಸ್ವಾಗತಿಸಿ, ಕಬೀರ್ ಅಜ್ಜಾವರ ವಂದಿಸಿದರು.