ತೆಂಗಿನಮರ, ಅಡಿಕೆಮರ ಸಹಿತ ವಿದ್ಯುತ್ ಕಂಬಗಳನ್ನು ಏರಲು ಸಹಕಾರಿಯಾಗುವ ಫೈಬರ್ ಏಣಿಯನ್ನು ಕಡಬ ತಾಲೂಕಿನ ಸವಣೂರಿನ ದಯಾನಂದ ಎಂಬವರು ತಯಾರಿಸಿದ್ದಾರೆ. ಕೃಷಿ ಚಟುವಟಿಕೆ ಮತ್ತು ವಿದ್ಯುತ್ ಕಂಬಗಳನ್ನು ಏರಲು ಬಳಸಬಹುದಾದ ಸಾಧನ ಇದಾಗಿದ್ದು, ಕೇವಲ 10-12 ಕೆಜಿ ಭಾರವಿದೆ. ಅಕಸ್ಮಾತ್ ಈ ಏಣಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದರೂ ವಿದ್ಯುತ್ ಪ್ರವಹಿಸುವುದಿಲ್ಲ. ಹಾಗಾಗಿ ಮೆಸ್ಕಾಂನಲ್ಲಿ ಕೆಲಸಮಾಡುವ ಪವರ್ ಮ್ಯಾನ್ ಗಳಿಗೂ ಇದು ಸಹಕಾರಿಯಾಗಲಿದೆ. ಮೆಸ್ಕಾಂ ಪವರ್ ಮ್ಯಾನ್ ಗಳು ಈಗಾಗಲೇ ಏಣಿಯನ್ನು ಪ್ರಾಯೋಗಿಕವಾಗಿ ಬಳಕೆ ಮಾಡಿದ್ದಾರೆ.
ಸದ್ಯ 20 ಅಡಿ, 10 ಅಡಿ ಮತ್ತು 5 ಅಡಿ ಉದ್ದದ ಏಣಿಗಳು ಲಭ್ಯವಿದ್ದು ವಿಶೇಷವಾಗಿ ಬೆಂಡಾಗಿ ತುಂಡಾಗದೇ ಇರುವ ಏಣಿಗಳಾಗಿವೆ. ಒಂದು ವೇಳೆ ಬೆಂಡ್ ಆದರೂ ಮತ್ತೆ ಮೊದಲಿನ ಆಕಾರಕ್ಕೆ ಬರುತ್ತದೆ. ಇದಕ್ಕಾಗಿ ಒಂದೂವರೆ ಇಂಚು ದಪ್ಪ ಹಾಗೂ ಐದು ಲೆಂತ್
ತಿಕ್ ನೆಸ್ ಇರುವ ಫೈಬರ್ ಪೈಪ್ ಗಳನ್ನು ಬಳಸಲಾಗಿದೆ. ಇದೀಗ ಈ ಸಾಧನ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಆಸಕ್ತರು ಸಂಪರ್ಕಿಸಬಹುದೆಂದು ಮಾಲಕ ದಯಾನಂದ ಸವಣೂರು ತಿಳಿಸಿದ್ದಾರೆ.
ಸಂಪರ್ಕ ಸಂಖ್ಯೆ : 9164146083, 9481946083, 9632315083.
- Friday
- November 15th, 2024