ಒಬ್ಬ ಜನಪ್ರತಿನಿಧಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ಸುಬ್ರಹ್ಮಣ್ಯ ಕ್ಷೇತ್ರದ ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆ.1963ರಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ದೇವರಹಳ್ಳಿ (ಕಲ್ಲಾಜೆ) ಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಯಿತು. ಇತ್ತೀಚಿನ ದಿನಗಳಲ್ಲಿ ಮಕ್ಕಳ್ಳಿಲ್ಲದೆ ಶಾಲೆ ಮುಚ್ಚಲ್ಪಟ್ಟಿತು. ಇತ್ತೀಚಿಗೆ ಊರವರು ಸುಬ್ರಹ್ಮಣ್ಯ ತಾಲೂಕ್ ಪಂಚಾಯತ್ ಕ್ಷೇತ್ರದ ಸದಸ್ಯ ಅಶೋಕ್ ನೆಕ್ರಾಜೆಯವರಲ್ಲಿ ಶಾಲೆ ಪುನರಾಂಭಿಸುವುವಂತೆ ಮನವಿ ಮಾಡಿದ್ದರು..ಮನವಿಗೆ ತಕ್ಷಣ ಸ್ವಂದಿಸಿದ ನೆಕ್ರಾಜೆಯವರು ತಾಲೂಕ್ ಪಂಚಾಯತ್ ಸಭೆಯಲ್ಲಿ ನಿರ್ಣಾಯಿಸಿ ಬಿ.ಇ. ಓ ಅವರಿಗೆ ಸೂಚಿಸಿದ್ದಾರೆ. ಇದಕ್ಕೆ ಸ್ವಂದಿಸಿದ ಬಿ.ಇ.ಓ ಮಹಾದೇವ ರವರು ಶಾಲೆ ಪುನರಾಂಬಿಸುವುದಕ್ಕೆ ಆದೇಶಿಸಿದರು. ಮಕ್ಕಳ ದಾಖಲಾತಿ ಮಕ್ಕಳ ಪುಸ್ತಕ ಮತ್ತಿತರ ಸೌಲಭ್ಯವನ್ನು ಅಶೋಕ್ ನೆಕ್ರಾಜೆಯವರು ಉಚಿತವಾಗಿ ನೀಡಿದರು. ಇದೀಗ ಶಾಲೆಗೆ ಹೊಸ ಮಕ್ಕಳ ದಾಖಲಾತಿ ನಡೆದಿದ್ದು ಮುಚ್ಚಿದ ಶಾಲೆಗೆ ಮರುಜೀವ ಬಂದಿದೆ.
ತ್ತಿಚಿನ ದಿನಗಳಲ್ಲಿ ಸರಕಾರಿ ಶಾಲೆ ಎಂದು ತಾತ್ಸಾರ ಮಾಡುವ ದಿನಗಳಲ್ಲಿ ತಾನೊಬ್ಬ ಜನನಾಯಕ, ಜನಪ್ರತಿನಿಧಿಯಾಗಿ ಪತ್ನಿ ಸರಕಾರಿ ಇಲಾಖೆಯ ಅಧಿಕಾರಿಯಾಗಿದ್ದರೂ ತನ್ನ ಮಗಳು ಮತ್ತು ಮಗನನ್ನು ಈಗಲೂ ಸರಕಾರಿ ಶಾಲೆಯಲ್ಲಿ ಓದಿಸುತ್ತಿರುವ ಅಶೋಕ್ ನೆಕ್ರಾಜೆ ಸಮಾಜ ಮತ್ತು ಜನಸೇವೆಯಲ್ಲಿ ತೊಡಗಿಸಿಕೊಂಡ ಅಪರೂಪದ ರಾಜಕಾರಣಿಯಾಗಿದ್ದಾರೆ.
- Friday
- November 15th, 2024